ETV Bharat / state

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನ ಆರ್ಥಿಕವಾಗಿ ಕಟ್ಟಿಹಾಕಲು ಎಸ್​ಐಟಿ ಸಿದ್ಧತೆ - Prajwal Sex Scandal Case

author img

By ETV Bharat Karnataka Team

Published : May 18, 2024, 2:50 PM IST

Updated : May 18, 2024, 3:27 PM IST

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನ ಆರ್ಥಿಕವಾಗಿ ಕಟ್ಟಿಹಾಕಲು ಎಸ್​ಐಟಿ ಸಿದ್ಧತೆ ಮಾಡಿಕೊಂಡಿದೆ.

SIT PREPARATIONS  PRAJWAL REVANNA  TIE ABROAD FINANCIALLY  BENGALURU
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನ ಆರ್ಥಿಕವಾಗಿ ಕಟ್ಟಿಹಾಕಲು ಎಸ್​ಐಟಿ ಸಿದ್ಧತೆ (ಕೃಪೆ: IANS)

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಆರೋಪ ಎದುರಿಸುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಸುಳಿವಿಲ್ಲ‌. ಪ್ರಕರಣ ದಾಖಲಾಗುತ್ತಿದ್ದಂತೆ ಮೇ 1ರಂದು ತಮ್ಮ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದ ಪ್ರಜ್ವಲ್ ರೇವಣ್ಣ, 'ತಾನು ಬೆಂಗಳೂರಿನಲ್ಲಿ ಇರದ ಕಾರಣ ಎಸ್ಐಟಿ ಮುಂದೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 7 ದಿನಗಳ ಕಾಲಾವಕಾಶ ನೀಡಬೇಕು' ಎಂದಿದ್ದರು. ಆದರೆ ಎರಡು ವಾರಗಳೇ ಕಳೆದರೂ ಸಹ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಿಲ್ಲ. ಆದ್ದರಿಂದ ಅವರನ್ನ ಕಾನೂನಾತ್ಮಕವಾಗಿ ಕಟ್ಟಿಹಾಕಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನ ಆರ್ಥಿಕವಾಗಿ ಇಕ್ಕಟ್ಟಿಗೆ ಸಿಲುಕಿಸಲು ಎಸ್ಐಟಿ ತಂತ್ರ ರೂಪಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಿಸಲು ಎಸ್‌ಐಟಿ ಅಧಿಕಾರಿಗಳು ತಯಾರಿ ಆರಂಭಿಸಿದ್ದಾರೆ. ಆದ್ದರಿಂದ ಪ್ರಜ್ವಲ್ ಅವರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಕಲೆ ಹಾಕುತ್ತಿರುವುದಾಗಿ ಎಸ್ಐಟಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ತಂದೆಯ ಬಂಧನದ ನಂತರ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಮೇ 3 ಹಾಗೂ ಮೇ 15ರಂದು ಭಾರತಕ್ಕೆ ಬರಲು ಸಿದ್ದವಾಗಿದ್ದ ಪ್ರಜ್ವಲ್, ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಬೇಕಿದೆ.

ಓದಿ: ಮೈಸೂರು: ಟ್ರ್ಯಾಕ್ಟರ್‌ನ ರೋಟರ್​ಗೆ ಸಿಲುಕಿ ಬಾಲಕ ಸಾವು - boy died

Last Updated : May 18, 2024, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.