ETV Bharat / state

LIVE UPDATE: ಈವರೆಗೂ ಮತದಾನದ ಪ್ರಮಾಣ ಎಷ್ಟಿದೆ?; ವೋಟ್​ ಹಾಕಲು ಹೋಗುವಾಗ ವೃದ್ಧ ಸಾವು - Lokasabha Election 2024

author img

By ETV Bharat Karnataka Team

Published : Apr 26, 2024, 7:32 AM IST

Updated : Apr 26, 2024, 12:12 PM IST

ಲೋಕಸಭೆ ಚುನಾವಣೆ
ಲೋಕಸಭೆ ಚುನಾವಣೆ

12:05 April 26

ರಾಜ್ಯವಾರು 11 ಗಂಟೆವರೆಗೆ ಮತದಾನದ ಪ್ರಮಾಣ ಹೀಗಿದೆ

ಕರ್ನಾಟಕದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇಕಡಾ 22.34 ರಷ್ಟು ಮತದಾನವಾದರೆ, ಅಸ್ಸಾಂನಲ್ಲಿ ಶೇಕಡಾ 27.43, ಬಿಹಾರದಲ್ಲಿ ಶೇ.21.68, ಛತ್ತೀಸ್‌ಗಢ ಶೇ.35.47, ಜಮ್ಮು ಮತ್ತು ಕಾಶ್ಮೀರ ಶೇ.26.61, ಕೇರಳದಲ್ಲಿ ಶೇ.25.61, ಮಧ್ಯಪ್ರದೇಶದಲ್ಲಿ ಶೇ.28.15, ಮಹಾರಾಷ್ಟ್ರದಲ್ಲಿ ಶೇ.18.83, ಮಣಿಪುರ ಶೇ.33.22, ರಾಜಸ್ಥಾನದಲ್ಲಿ ಶೇ.26.84, ತ್ರಿಪುರಾ ಶೇ.36.42, ಉತ್ತರಪ್ರದೇಶ ಶೇ.24.31 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇಕಡಾ 31.25 ರಷ್ಟು ಮತದಾನವಾಗಿದೆ.

12:05 April 26

ಬಿಸಿಗಾಳಿಗೆ ರಾಜಸ್ಥಾನದಲ್ಲಿ ವೃದ್ಧ ಮತದಾರ ಸಾವು

2024ರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಮುಂದುವರಿದಿದ್ದು, ಬಿಸಿಲಿನ ತಾಪ ಬಿರುಸಾಗಿದೆ. ಇದರಿಂದ ಜನರು ಮತದಾನಕ್ಕಾಗಿ ಹೊರಬರಲು ಪರದಾಡುವಂತಾಗಿದೆ. ಮರಳುಗಾಡು ರಾಜಸ್ಥಾನದ ಭಿಲ್ವಾರಾದಲ್ಲಿ ಮತದಾನ ಮಾಡಲು ಹೊರಟಿದ್ದಾಗ ವೃದ್ಧರೊಬ್ಬರು ಬಿಸಿಲ ಧಗೆಗೆ ಸಾವನ್ನಪ್ಪಿದ್ದಾರೆ. ಮೃತರನ್ನು 80 ವರ್ಷದ ಛಗನ್ ಬಗೇಲಾ ಎಂದು ಗುರುತಿಸಲಾಗಿದೆ.

11:15 April 26

ಸದಾನಂದಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

  • ಸಂಸದ ಡಿ.ವಿ ಸದಾನಂದಗೌಡ ಮತ್ತು ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿ
  • ಮತದಾನದ ವೇಳೆ ಮುಖಾಮುಖಿಯಾದ ಇಬ್ಬರು ಬಿಜೆಪಿ ನಾಯಕರು
  • ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ ಸದಾನಂದಗೌಡ
  • ಅದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ
  • ಸದಾನಂದಗೌಡ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶೋಭಾ

10:20 April 26

ಮತಗಟ್ಟೆ ಬಳಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಾತಿನ ಸಂಘರ್ಷ

  • ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
  • ಬೆಂಗಳೂರಿನ ಚಾಮರಾಜಪೇಟೆ ಮೊರಾರ್ಜಿ ದೇಸಾಯಿ ಮತಗಟ್ಟೆ
  • ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ನಿಂತಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ
  • ಎರಡೂ ತಂಡಗಳ ನಡುವೆ ಮಾತಿನ ಚಕಮಕಿ
  • ಮಧ್ಯಪ್ರವೇಶಿಸಿದ ಪೊಲೀಸರು ಗುಂಪು ಚದುರಿಸಿದರು

09:42 April 26

ಬೆಳಗ್ಗೆ 9 ಗಂಟೆವರೆಗೆ ಶೇಕಡಾ 9.21 ರಷ್ಟು ಮತದಾನ ದಾಖಲು

  • ಕರ್ನಾಟಕದಲ್ಲಿ ಈವರೆಗೂ ಶೇಕಡಾ 9.21 ರಷ್ಟು ಮತದಾನವಾಗಿದೆ.
  • ದಕ್ಷಿಣ ಕನ್ನಡದಲ್ಲಿ ಶೇಕಡಾ 14.33, ಉಡುಪಿ- ಚಿಕ್ಕಮಗಳೂರಿನಲ್ಲಿ ಶೇಕಡಾ 12.82
  • ಬೆಂಗಳೂರು ಗ್ರಾಮಾಂತರದಲ್ಲಿ ಶೇ.8.39, ಬೆಂಗಳೂರು ಉತ್ತರದಲ್ಲಿ ಶೇ.8.64,
  • ಬೆಂಗಳೂರು ಕೇಂದ್ರದಲ್ಲಿ ಶೇ.8.14, ಬೆಂಗಳೂರು ದಕ್ಷಿಣದಲ್ಲಿ ಶೇ.9.08
  • ಹಾಸನದಲ್ಲಿ ಶೇ.8.23, ಚಿತ್ರದುರ್ಗದಲ್ಲಿ ಶೇ.7.03, ತುಮಕೂರಿನಲ್ಲಿ 9.57
  • ಮಂಡ್ಯದಲ್ಲಿ ಶೇ.7.70, ಮೈಸೂರು- ಕೊಡಗಿನಲ್ಲಿ ಶೇ.11.01
  • ಚಾಮರಾಜನಗರ ಶೇ.7.70, ಚಿಕ್ಕಬಳ್ಳಾಪುರ 8.74, ಕೋಲಾರ ಶೇ.8.30 ಮತದಾನವಾಗಿದೆ

09:25 April 26

ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮತದಾನ ಮಾಡಿದ ಯದುವೀರ್​ ಒಡೆಯರ್​

  • ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಮತದಾನ
  • ಮೈಸೂರಿನ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಯಲ್ಲಿ ವೋಟಿಂಗ್​
  • ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ
  • ಇದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ
  • ಪತ್ನಿ ತ್ರಿಶಿಕಾ, ತಾಯಿ ಪ್ರಮೋದಾ ದೇವಿ ಅವರಿಂದಲೂ ಮತದಾನ

09:08 April 26

ಕನ್ನಡದಲ್ಲಿ ಪ್ರಧಾನಿ ಮೋದಿ ಮತ ಜಾಗೃತಿ

  • ಮತದಾನದಲ್ಲಿ ದಾಖಲೆ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರಧಾನಿ ಕರೆ
  • ಕನ್ನಡದಲ್ಲಿ ಮತ ಜಾಗೃತಿ ಮೂಡಿಸಿದ ನರೇಂದ್ರ ಮೋದಿ
  • ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ
  • ನಿಮ್ಮ ಮತ ನಿಮ್ಮ ಧ್ವನಿ ಘೋಷಣೆ
  • ಯುವ ಮತದಾರರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿಕೆ

09:01 April 26

ಕುಮಾರಸ್ವಾಮಿಗೆ ಗೆಲುವು ಖಚಿತ: ಪುಟ್ಟರಾಜು ವಿಶ್ವಾಸ

  • ಮಂಡ್ಯ ಕ್ಷೇತ್ರದಲ್ಲಿ ಒನ್ ಸೈಡ್ ಚುನಾವಣೆ
  • ಹೆಚ್.ಡಿ.ಕುಮಾರಸ್ವಾಮಿ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ
  • ಮತದಾನದ ಬಳಿಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ
  • ಕುಮಾರಣ್ಣ ರೈತರ, ಜನ ಸಾಮಾನ್ಯರ ಕಣ್ಣೀರು ಒರೆಸಿದ್ದಾರೆ ಎಂದ ಜೆಡಿಎಸ್ ನಾಯಕ

08:48 April 26

ಮತದಾನಕ್ಕೂ ಮುನ್ನ ಮಲೆ ಮಹದೇಶ್ವರನಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪೂಜೆ

  • ಮತದಾನಕ್ಕೂ ಮುನ್ನ ಮಾದಪ್ಪನ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಬಾಲರಾಜ್
  • ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್
  • ಚಾಮರಾಜನಗರದ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಕೆ
  • ಬಳಿಕ ಮದ್ದೂರಿಗೆ ತೆರಳಿ ಮತದಾನ ಮಾಡಲಿರುವ ಅಭ್ಯರ್ಥಿ
  • ಪ್ರಚಾರದ ವೇಳೆಯೂ ಮಾದಪ್ಪನ ಹೆಸರಿನಲ್ಲಿ ಮತ ಕೇಳಿದ್ದ ಬಾಲರಾಜ್

08:18 April 26

ವಿವಿಧೆಡೆ ರಾಜಕೀಯ ನಾಯಕರಿಂದ ಮತದಾನ

  • ಕೇರಳ ಸಿಎಂ ಪಿಣರಾಯಿ ಅವರಿಂದ ಮತದಾನ
  • ರಾಜಸ್ಥಾನದಲ್ಲಿ ಹಕ್ಕು ಚಲಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ
  • ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬಿಜೆಪಿ ನಾಯಕ
  • ಉತ್ತರಪ್ರದೇಶದ ಗಾಜಿಯಾಬಾದ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ
  • ಅತುಲ್​ ಗರ್ಗ್​ರಿಂದ ಹಕ್ಕು ಚಲಾವಣೆ

08:15 April 26

ಮಾಜಿ ಸಚಿವ ಡಾ.ಕೆ.ಸುಧಾಕರ್​ ದಂಪತಿಯಿಂದ ಮತದಾನ

  • ಮಾಜಿ ಸಚಿವ ಡಾ.ಕೆ.ಸುಧಾಕರ್​ ದಂಪತಿಯಿಂದ ಮತದಾನ
  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಸುಧಾಕರ್​
  • ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಸರ್ಕಾರಿ ಶಾಲೆಯಲ್ಲಿ ವೋಟ್​
  • ಸುಧಾಕರ್ ಹಾಗೂ ಪತ್ನಿ ಪ್ರೀತಿ ಅವರಿಂದ ಮತ ಚಲಾವಣೆ

08:10 April 26

ಕಳೆದೊಂದು ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ಕಂಡಿದ್ದೇವೆ: ನಟ ಪ್ರಕಾಶ್​ರಾಜ್​

  • ನಟ ಪ್ರಕಾಶ್ ರಾಜ್ ಬೆಂಗಳೂರಿನ ಮತಗಟ್ಟೆಯಲ್ಲಿ ಮತದಾನ
  • ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ, ನನ್ನನ್ನು ಪ್ರತಿನಿಧಿಸುವವರಿಗಾಗಿ ನನ್ನ ಮತ
  • ಸಂಸತ್ತಿನಲ್ಲಿ ನಮ್ಮ ಧ್ವನಿ ಯಾರಾಗಬೇಕು ಎಂಬುದು ನಮ್ಮ ಆಯ್ಕೆಯಾಗಬೇಕು
  • ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ
  • ಅಭ್ಯರ್ಥಿ, ಉತ್ತಮ ಪ್ರಣಾಳಿಕೆ, ಬದಲಾವಣೆಗೆ ಮತ ಹಾಕಿದ್ದೇನೆ
  • ಕಳೆದ ದಶಕದಲ್ಲಿ ನಾವು ದ್ವೇಷ ಮತ್ತು ವಿಭಜಕ ರಾಜಕೀಯವನ್ನು ಕಂಡಿದ್ದೇವೆ
  • ಹೀಗಾಗಿ ಉತ್ತಮ ಅಭ್ಯರ್ಥಿಗೆ ಮತ ಹಾಕಿ ಎಂದು ಕೋರಿದ ನಟ

08:10 April 26

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಮತದಾನ

  • ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಮತದಾನ
  • ಬೆಂಗಳೂರಿನ ಜಯನಗರ ಕೇಂದ್ರದಲ್ಲಿ ವೋಟ್​ ಹಾಕಿದ ವಿತ್ತ ಸಚಿವೆ
  • ತಂದೆ ಜೊತೆಗೆ ಆಗಮಿಸಿ ಹಕ್ಕು ಚಲಾಯಿಸಿದ ಬಿಜೆಪಿ ನಾಯಕಿ
  • ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಬಯಸಿರುವ ಮತದಾರರು
  • ಇದಕ್ಕಾಗಿ ಹೆಚ್ಚು ಮತದಾನ ನಡೆಯಬೇಕು
  • ಜನರು ಸ್ಥಿರ, ಉತ್ತಮ ನೀತಿ, ಪ್ರಗತಿ, ಅಭಿವೃದ್ಧಿಯನ್ನು ಬಯಸಿದ್ದಾರೆ
  • ಹೆಚ್ಚಿನ ಜನರು ಹೊರಬಂದು ಮತದಾನ ಮಾಡಬೇಕು ಎಂದು ಕೋರಿದ ಸಚಿವೆ

07:55 April 26

ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ, ಕೇರಳದ ಎನ್​ಡಿಎ ಅಭ್ಯರ್ಥಿ ಸುರೇಶ್ ಮತದಾನ

  • ತಮ್ಮ ಹಕ್ಕು ಚಲಾಯಿಸಿದ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ
  • ರಾಜಸ್ಥಾನದ ಜಲಾವರ್‌ನ ಕೇಂದ್ರದಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕಿ
  • ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ
  • ಇಂದು 13 ಸ್ಥಾನಗಳಿಗೆ ಮತದಾನ
  • ಕೇರಳದ ತ್ರಿಶ್ಶೂರ್‌ನ ಎನ್‌ಡಿಎ ಅಭ್ಯರ್ಥಿ ಸುರೇಶ್ ಗೋಪಿ ಮತದಾನ
  • ತ್ರಿಶೂರ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸುರೇಶ್​
  • ಕೇರಳದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ

07:53 April 26

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತದಾನ

  • ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತದಾನ
  • ಗೋವಿಂದರಾಜನಗರದ ಆರೋಗ್ಯ ಕೇಂದ್ರದ ಮತಗಟ್ಟೆಯಲ್ಲಿ ವೋಟಿಂಗ್​
  • ಮತದಾನ ಮಾಡಲು ಆಗಮಿಸಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ
  • ಬೆಂಗಳೂರಿನ ಆರ್​ಆರ್ ನಗರದ ಮೌಂಟ್ ಕಾರ್ಮಲ್ ಮತಗಟ್ಟೆಗೆ ಬಂದ ಗಣೇಶ್ ಹಾಗೂ ಶಿಲ್ಪಾ

07:47 April 26

ಭಾರತ ಕ್ರಿಕೆಟ್​​ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ರಿಂದ ಮತದಾನ

  • ಭಾರತ ಕ್ರಿಕೆಟ್​​ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ರಿಂದ ಮತದಾನ
  • ಪತ್ನಿ ಮತ್ತು ಮಗನ ಜೊತೆ ಆಗಮಿಸಿದ ರಾಹುಲ್ ದ್ರಾವಿಡ್
  • ಮಲ್ಲೇಶ್ವರದ ಶಿಕ್ಷಾ ಸ್ಕೂಲ್ ಮತಗಟ್ಟೆಯಲ್ಲಿ ವೋಟಿಂಗ್​
  • ಮತ ಚಲಾವಣೆ ನಮ್ಮ ಸಂವಿಧಾನಿಕ ಹಕ್ಕು ಎಂದ ಕ್ರಿಕೆಟಿಗ
  • ದಯವಿಟ್ಟು ಎಲ್ಲರೂ ಮತದಾನ ಮಾಡಿ ಎಂದು ಸಲಹೆ
  • ಪ್ರಜಾಪ್ರಭುತ್ವವನ್ನ ಮುಂದೆ ತರುವ ಅವಕಾಶ ಇದು
  • ಬೆಂಗಳೂರಲ್ಲಿ ಜಾಸ್ತಿ ಜನ ಮತದಾನ ಮಾಡಬೇಕು
  • ಚುನಾವಣಾ ಆಯೋಗ ಚೆನ್ನಾಗಿ ವ್ಯವಸ್ಥೆ ಮಾಡಿದೆ
  • ಯುವ ಜನತೆ ತಪ್ಪದೆ ಮತದಾನ ಮಾಡಿ ಎಂದು ದ್ರಾವಿಡ್ ಮನವಿ

07:39 April 26

ಕೋಲಾರದ ಕೆ.ಬಿ.ಹೊಸಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

  • ಕೋಲಾರದಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು
  • ಕೋಲಾರ ತಾಲ್ಲೂಕು ಕೆ.ಬಿ.ಹೊಸಹಳ್ಳಿ ಗ್ರಾಮಸ್ಥರಿಂದ ನಿರ್ಧಾರ
  • ಗ್ರಾಮದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಲು ಆಗ್ರಹಿಸಿ ಬಹಿಷ್ಕಾರ
  • ಮತಗಟ್ಟೆಗಳತ್ತ ಆಗಮಿಸದ ಗ್ರಾಮದ ಜನರು
  • ಏಜೆಂಟ್ ಫಾರಂ ಕೂಡ ಪಡೆಯದೆ ಆಕ್ರೋಶ

07:38 April 26

ಸ್ಯಾಂಡಲ್​ವುಡ್​ ನಟ ವಿಕ್ಕಿ ವರುಣ್​ರಿಂದ ಚಾಮರಾಜನಗರದಲ್ಲಿ ವೋಟ್​

  • ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭ
  • ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಬಂದು ಮತ ಹಾಕುತ್ತಿರುವ ಜನರು
  • ದೂರದ ಊರಿನಿಂದಲೂ ಸ್ವಗ್ರಾಮಕ್ಕೆ ಬಂದು ಮತ ಚಲಾಯಿಸಿದ ಯುವಕರು
  • ಚಾಮರಾಜನಗರ ತಾಲೂಕಿನ ಮೂಡಲಪುರ ಗ್ರಾಮದಲ್ಲಿ ನಟ ವಿಕ್ಕಿ ವರುಣ್ ಮತದಾನ
  • ಬೆಂಗಳೂರಿನಿಂದ ಬಂದು ಬೆಳಗ್ಗೆಯೇ ಮತದಾನ ಮಾಡಿದ ಕೆಂಡಸಂಪಿಗೆ ಹೀರೋ
  • ಬಹು ನಿರೀಕ್ಷಿತ ಕಾಲಪತ್ಥರ್ ಚಿತ್ರದ ಹೀರೋ ವಿಕ್ಕಿ ವರುಣ್​
  • ಸ್ವಗ್ರಾಮದಲ್ಲಿ ಮತದಾನದ ಮಹತ್ವ ಸಾರಿದ ಸ್ಯಾಂಡಲ್​ವುಡ್ ಹೀರೋ

07:31 April 26

ತುಮಕೂರಿನಲ್ಲಿ ಸಿದ್ದಗಂಗಾಶ್ರೀ ಮತದಾನ

  • ಸಿದ್ದಗಂಗಾ ಮಠದ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಮೊದಲ ಮತದಾನ
  • ಮತಗಟ್ಟೆ ಸಂಖ್ಯೆ 113 ರಲ್ಲಿ ಸ್ವಾಮೀಜಿ ತಮ್ಮ ಹಕ್ಕು ಚಲಾಯಿಸಿದರು
  • ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠ
  • ಹಸುವಿಗೆ ಹಣ್ಣು ತಿನ್ನಿಸಿ ಬಳಿಕ, ಮತದಾನ ಕೇಂದ್ರಕ್ಕೆ ಆಗಮಿಸಿದ ಶ್ರೀಗಳು

07:30 April 26

ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭ

  • ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಕೋಲಾರ ಜಿಲ್ಲೆಯ 2060 ಮತಗಟ್ಟೆಗಳಲ್ಲಿ ಮತದಾನ ಶುರು
  • ಕೋಲಾರ ತಾಲ್ಲೂಕು ಕುಂಬಾರಹಳ್ಳಿ ಗ್ರಾಮದಲ್ಲಿ ಮತದಾನಕ್ಕೆ ಕ್ಯೂ ನಿಂತ ಮತದಾರರು
  • ಮತಗಟ್ಟೆ ಸಂಖ್ಯೆ 95 ರಲ್ಲಿ ಮತದಾನ ಮಾಡಲು ಜನರ ಉತ್ಸಾಹ

06:03 April 26

ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ: ಮತಗಟ್ಟೆಗಳತ್ತ ಬರುತ್ತಿರುವ ಜನರು

ಬೆಂಗಳೂರು/ ನವದೆಹಲಿ: ಜನತಂತ್ರದ ಮಹಾಹಬ್ಬ ಶುರುವಾಗಿದೆ. ಇಂದು ದೇಶದ 88 ಹಾಗೂ ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಜನರು ಮತಗಟ್ಟೆಗಳತ್ತ ಬರುತ್ತಿದ್ದಾರೆ. ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೇಖಕಿ, ಸಮಾಜಸೇವಕಿ ಸುಧಾ ಮೂರ್ತಿ ಅವರು ಬೆಂಗಳೂರಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

Last Updated :Apr 26, 2024, 12:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.