ETV Bharat / state

ಕೊಪ್ಪಳ: ಗುಡುಗು ಸಿಡಿಲು ಸಹಿತ ಮಳೆ, ಸಿಡಿಲಿಗೆ ಬಾಲಕ ಬಲಿ - lightining strike

author img

By ETV Bharat Karnataka Team

Published : Apr 23, 2024, 8:20 AM IST

LIGHTINING STRIKE
LIGHTINING STRIKE

ಕೊಪ್ಪಳದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಓರ್ವ ಬಾಲಕ ಮೃತಪಟ್ಟ ಘಟನೆ ನಡೆದಿದೆ.

ಕೊಪ್ಪಳ: ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಕುರಿ ಮೇಯಿಸುತ್ತಿದ್ದ ಬಾಲಕ ಸಾವಿಗೀಡಾದ ಘಟನೆ ಸೋಮವಾರ ಸಂಜೆ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಜರುಗಿದೆ. ಶ್ರೀನಿವಾಸ ಗೊಲ್ಲರ(16) ಮೃತ ಬಾಲಕ. ಬಾಲಕನ ಜೊತೆಗಿದ್ದ ತಂದೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಜಮೀನಿನಲ್ಲಿ ಸಂಜೆ ಕುರಿ ಮೇಯಿಸುತ್ತಿದ್ದಾಗ ಈ ಘಟನೆ ಜರುಗಿದೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲಿಗೆ ಒಂದು ಎತ್ತು, 7 ಕುರಿಗಳು ಬಲಿ: ಕೊಪ್ಪಳ ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಇರಕಲಗಡಾದ ರಾಮಣ್ಣ ಬಿನ್ನಿ ಎಂಬುವವರಿಗೆ ಸೇರಿದ ಎತ್ತು ಮತ್ತು ಮುಕ್ಕುಂಪಿ ಗ್ರಾಮದ ಹನುಮಂತ ಗಿರಿಖಾನ ಎಂಬುವವರಿಗೆ ಸೇರಿದ 7 ಕುರಿಗಳು ಸಾವಿಗೀಡಾದ ಘಟನೆ ಜರುಗಿದೆ.

ಗಂಗಾವತಿಯಲ್ಲೂ ಗುಡುಗು ಸಿಡಿಲು ಮಳೆ: ಸೋಮವಾರ ಸಂಜೆ ಗಂಗಾವತಿ ಸುತ್ತಲೂ ಗುಡುಗು - ಸಿಡಲು ಸಮೇತ ಮಳೆಯಾಗಿದ್ದು, ಹುಲ್ಲು ಮೇಯುತ್ತಿದ್ದ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದು ಏಳು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಗಂಗಾವತಿ ತಾಲೂಕಿನ ಹೇಮಗುಡ್ಡದ ಬಳಿ ಸಂಭವಿಸಿದೆ. ಹೇಮಗುಡ್ಡ ರಾಮಣ್ಣ ಲಿಂಗಪ್ಪ ಬಂಡಿ ಎಂಬ ಕುರಿಗಾಹಿಗೆ ಸೇರಿದ್ದ ಕುರಿಗಳು ಗ್ರಾಮದ ಸೀಮೆಯಲ್ಲಿ ಹುಲ್ಲು ಮೇಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಏಳು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸುಮಾರು ಎಂಟಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಇದನ್ನೂ ಓದಿ: ಗಂಗಾವತಿ: ಸಿಡಿಲು ಬಡಿದು ದುರ್ಗಾದೇವಿ ದೇವಸ್ಥಾನದ ಗೋಪುರಕ್ಕೆ ಹಾನಿ - temple tower damaged

ಅಲ್ಲದೇ ಇದೇ ಗುಂಪಿನಲ್ಲಿದ್ದ ಆಕಳೊಂದಕ್ಕೆ ಸಿಡಿಲು ಬಡಿದು ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳಕ್ಕೆ ಪಶು ಪಾಲನಾ ಇಲಾಖೆ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಗ್ರಾಮದ ರೈತ ಮುಖಂಡ ಹನುಮಂತಪ್ಪ ಮುಕ್ಕುಂಪಿ, ಒಂದೊಂದು ಕುರಿಗೆ ಮಾರುಕಟ್ಟೆಯಲ್ಲಿ 12 ರಿಂದ 15 ಸಾವಿರ ಮೌಲ್ಯವಿದೆ. ಹೀಗಾಗಿ ಬಡ ಕುರಿಗಾಹಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಸರ್ಕಾರದಿಂದ ತಕ್ಷಣ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ ಜನತೆಗೆ ತಂಪೆರೆದ ಮಳೆರಾಯ: ಸಿಡಿಲಿಗೆ ಬಾಲಕ, ರೈತ ಬಲಿ - Vijayapura Rain

ಕಳೆದ ಎರಡ್ಮೂರು ದಿನಗಳಿಮದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಅಲ್ಲಲ್ಲಿ ಪ್ರಾಣ ಹಾನಿ ಮತ್ತು ಬೆಳೆ ಹಾನಿಯಾಗಿದೆ. ಶಿವಮೊಗ್ಗ ತಾಲೂಕು ಹರಮಘಟ್ಟ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಯುವ ರೈತ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿತ್ತು. ಹಾಗೆಯೇ ಕಲಬುರಗಿ ಮತ್ತು ವಿಜಯಪುರದಲ್ಲೂ ಸಿಡಿಲಿಗೆ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿತ್ತು.

ಇದನ್ನೂ ಓದಿ: ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ; ಕೊಪ್ಪಳದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ - Heavy rain with thunder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.