ETV Bharat / state

ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಬೇಸಿಕ್​ ಹೋಂ ವರ್ಕ್​ ಮಾಡಿಲ್ಲ, ಬಿಜೆಪಿಗೆ ಡ್ಯಾಮೇಜ್ ಆಗಲ್ಲ: ಅಣ್ಣಾಮಲೈ - K annamalai

author img

By ETV Bharat Karnataka Team

Published : May 4, 2024, 6:32 PM IST

K ANNAMALAI
ಕೆ.ಅಣ್ಣಾಮಲೈ(ETV Bharat)

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಬೇಸಿಕ್​ ಹೋಂ ವರ್ಕ್​ ಮಾಡಿಲ್ಲ. ಈ ಪ್ರಕರಣದಿಂದ ಬಿಜೆಪಿಗೆ ಡ್ಯಾಮೇಜ್ ಆಗಲ್ಲ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ತಿಳಿಸಿದರು.

ಕೆ.ಅಣ್ಣಾಮಲೈ (ETV Bharat)

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿದ ಬಂದ ಪ್ರಕರಣದ ರಾಜ್ಯ ಸರ್ಕಾರವೇ ಸುಮೋಟೊ ಕೇಸ್ ಯಾಕೆ​ ದಾಖಲಿಸಿಲ್ಲ?. ಕಾಂಗ್ರೆಸ್ ಸರ್ಕಾರವಿದ್ದು, ಪೊಲೀಸ್ ಇಲಾಖೆಯೂ ನಿಮ್ಮ ಕೈಯಲ್ಲೇ ಇದೆಯಲ್ವಾ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕಾಂಗ್ರೆಸ್​ ನಾಯಕರಿಗೆ ಪ್ರಶ್ನಿಸಿದರು.

ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಾಗ ತನಿಖೆ ಗೃಹ ಸಚಿವ ಪರಮೇಶ್ವರ್ ಅವರು ತಿಂಗಳು ಮೊದಲೇ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆಗಲೇ ಸುಮೋಟೊ, ಎಫ್​ಐಆರ್​ ಮಾಡಬೇಕಿತ್ತಲ್ವಾ?. ರೇವಣ್ಣ ಹಾಸನದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಏರಿದ್ದಾರೆ. ಇದರ ಮಾರ್ಗ ಮಧ್ಯೆ ಚೆಕ್​ ಪೋಸ್ಟ್ ಹಾಕಿ ಅವರನ್ನು ತಡೆದಿಲ್ಲ. ಹಾಸನ ಪೊಲೀಸರು ಯಾಕೆ ಅವರ ಮನೆಗೆ ಹೋಗಿಲ್ಲ?. ಇದ್ಯಾವುದನ್ನೂ ನೀವು ಮಾಡಿಲ್ಲ. ಬೇಸಿಕ್​ ಹೋಂ ವರ್ಕ್​ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಂದುವರೆದು, ಮೊದಲ ಸಂತ್ರಸ್ತೆ ಪೊಲೀಸ್​ ಠಾಣೆಗೆ ಬರುವವರೆಗೂ ಈ ಸರ್ಕಾರ ಕಾದಿತ್ತು. ಸಂತ್ರಸ್ತೆ ದೂರು ಕೊಟ್ಟ ನಂತರ ಎಫ್​ಐಆರ್ ಮಾಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳಾಗಿದೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ?. ಕಾಂಗ್ರೆಸ್​ನವರು 2000, 3000 ವಿಡಿಯೋ ಅಂತಾ ಇತ್ತು ಹೇಳುತ್ತಿದ್ದೀರಾ? ಎಂದು ಕಿಡಿಕಾರಿದರು.

ಪ್ರಜ್ವಲ್ ವಿದೇಶಕ್ಕೆ ಹೋಗಲು ಕೇಂದ್ರ ಸರ್ಕಾರ ಸಹಕಾರ ನೀಡಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ಎಲ್ಲ ಸಂಸದರಿಗೆ ರಾಜತಾಂತ್ರಿಕ ಪಾಸ್​ ಕೊಡಲಾಗುತ್ತದೆ. ಡಿ.ಕೆ. ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ಅವರಿಗೂ ಅದೇ ರೀತಿಯ ಪಾಸ್ ಪೋರ್ಟ್ ಇದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಈಗಾಗಲೇ ಸ್ಪಷ್ಟನೆ ನೀಡಿದೆ ಎಂದರು.

ಬಿಜೆಪಿಗೆ ಡ್ಯಾಮೇಜ್ ಆಗಲ್ಲ: ಇದೇ ವೇಳೆ, ಪ್ರಜ್ವಲ್ ರೇವಣ್ಣ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ಜೆಡಿಎಸ್ ಬೇರೆ, ಬಿಜೆಪಿ ಬೇರೆ. ಹೆಚ್.ಡಿ. ದೇವೆಗೌಡರೇ ಖುದ್ದು ಮೋದಿಯವರು ಮತ್ತೆ ಪ್ರಧಾನಿ ಆಗಲಿ ಎಂದು ಪ್ರಚಾರ ಮಾಡುತ್ತಿದ್ದಾರೆ. 2019ಕ್ಕಿಂತ ಮೊದಲು ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಇತ್ತು. ಇವತ್ತು ಇಲ್ಲ. ಹೀಗಾಗಿ ಕಾಂಗ್ರೆಸ್​ನವರು ಉಲ್ಟಾ, ಪಲ್ಟಾ ಮಾತನಾಡುತ್ತಿದ್ದಾರೆ ಎಂದು ಅಣ್ಣಾಮಲೈ ತಿರುಗೇಟು ನೀಡಿದರು.

ಅಲ್ಲದೇ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ಗೆ ಅಭ್ಯರ್ಥಿಗಳು. ಈ ಬಾರಿ ಅತಿಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಗೆಲುವು ಸಹ ಈ ಬಾರಿ 50ಕ್ಕಿಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ. ರಾಹುಲ್ ಗಾಂಧಿ ಅವರಿಗೆ ತಾವು ಮೂರು ಬಾರಿ ಗೆದ್ದ ಅಮೇಠಿಗೆ ಹೋಗಲು ಮನಸ್ಸಿಲ್ಲ. ಚುನಾವಣೆಯಲ್ಲಿ ಮಾತನಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಅವರು ಗಂಭೀರವಾಗಿಲ್ಲ ಅಂತಾ ಸ್ವತಃ ಕಾಂಗ್ರೆಸ್ಸಿನವರಿಗೇ ತೋರುತ್ತಿದೆ ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.

ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಆಂತರಿಕ ಕಲಹದ ಮಾಹಿತಿ, ಹೆಚ್​ಡಿಕೆ ನಿಲುವು ಬದಲಿಸಿದ್ಯಾಕೆ?: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.