ETV Bharat / state

ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್​ ಲೋಕಾರ್ಪಣೆ; ಏನಿದರ ಉದ್ದೇಶ?

author img

By ETV Bharat Karnataka Team

Published : Mar 14, 2024, 12:25 PM IST

ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್​ ಲೋಕಾರ್ಪಣೆ
ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್​ ಲೋಕಾರ್ಪಣೆ

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಬುಧವಾರ ವಿಡಿಯೋ ವರ್ಚ್ಯುವಲ್​ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್​ ಲೋಕಾರ್ಪಣೆ ಮಾಡಿದ್ದು ರಾಜ್ಯಪಾಲರು ಪಾಲ್ಗೊಂಡಿದ್ದರು.

ಬಾಗಲಕೋಟೆ: ಜಿಲ್ಲೆಯಲ್ಲಿ ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ವಿಡಿಯೋ ವರ್ಚ್ಯುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗಣ್ಯರಾಗಿ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​​ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಪಾಲ್ಗೊಂಡಿದ್ದರು.

ಏನಿದು ಪಿಎಂ-ಸೂರಜ್​ ನ್ಯಾಷನಲ್​ ಪೋರ್ಟಲ್?: ‘ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ್ ಜನಕಲ್ಯಾಣ್' (ಪಿಎಂ-ಸೂರಜ್) ಎಂಬ ರಾಷ್ಟ್ರೀಯ ಪೋರ್ಟಲ್ ಇದಾಗಿದೆ. ಈ ಒಂದೇ ಪೋರ್ಟಲ್​​ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, ಸೇವೆಗಳ ಕುರಿತು ಮಾಹಿತಿ ಹಾಗೂ ಸಾಲ ಕೂಡ ಸುಲಭವಾಗಿ ಜನರು ಪಡೆಯಬಹುದಾಗಿದೆ. ಮುಖ್ಯವಾಗಿ ಈ ಪೋರ್ಟಲ್​ ದೇಶದಲ್ಲಿ ವಂಚಿತ ಸಮುದಾಯ, ಹಿಂದುಳಿದ ವರ್ಗ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶ ಹೊಂದಿದೆ. ಜತೆಗೆ ಜನರ ಉದ್ದಿಮೆಗಳಿಗೆ ಸಾಲದ ನೆರವು ನೀಡುತ್ತದೆ.

ಈ ಕುರಿತು ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಮಾತನಾಡಿ, "ದೇಶ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ನಾಗರಿಕನ ಕೊಡುಗೆ ಅಪಾರವಾಗಿದೆ. ಉದ್ದಿಮೆಗಳಿಗೆ ಸಾಲದ ನೆರವು ನೀಡಿ ರಾಷ್ಟ್ರ ವ್ಯಾಪಿ ಔಟ್‍ರೀಚ್​​ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ-ಸೂರಜ್​ ವೆಬ್​ ಪೋರ್ಟಲ್​ ಅನಾವರಣಗೊಳಿಸಿದ್ದಾರೆ. ದೇಶದ ವಂಚಿತ ಸಮುದಾಯಗಳ ಸಬಲೀಕರಣ ಮತ್ತು ಉತ್ತೇಜನಕ್ಕಾಗಿ ಪ್ರಧಾನಮಂತ್ರಿ ಅವರು ದೇಶಾದ್ಯಂತ 500ಕ್ಕೂ ಹೆಚ್ಚು ಜಿಲ್ಲೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿದ್ದಾರೆ. ಮತ್ತು ಸಂವಾದ ನಡೆಸಿ ಸಂಪರ್ಕ ಹೊಂದಿರುವುದು ಸಂತೋಷದ ವಿಷಯವಾಗಿದೆ. ಮಹಿಳೆಯರಿಗಾಗಿ ವಯೋಸ್ತ್ರೀ ಯೋಜನೆ ಜಾರಿಗೆ ತಂದು ನಿರ್ಗತಿಕ ಅಶಕ್ತ, ವಯೋವೃದ್ಧ ಮಹಿಳೆಯರ ರಕ್ಷಣೆಗಾಗಿ ಪಣತೊಟ್ಟಿದೆ" ಎಂದು ತಿಳಿಸಿದರು.

ಅಲ್ಲದೆ, ಕೇಂದ್ರ ಸರ್ಕಾರ ದೇಶದ ವಂಚಿತ ಸಮುದಾಯಗಳ ಸಬಲೀಕರಣ ಮತ್ತು ಉತ್ತೇಜನಕ್ಕಾಗಿ ಕಳೆದ 10 ವರ್ಷಗಳಲ್ಲಿ 25 ಲಕ್ಷ ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸಚಿವಾಲಯದ ಉನ್ನತ ನಿಗಮಗಳಿಂದ 11,437.39 ಕೋಟಿ ರೂ.ಗಳ ಸಾಲದ ನೆರವು ನೀಡಿದೆ. ಪಿ.ಎಂ ದಕ್ಷ ಯೋಜನೆಯಡಿ ಲಕ್ಷಾಂತರ ಜನರಿಗೆ ಕೌಶಲ್ಯ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಮಾಹಿತಿ ನಿಡಿದರು.

ಬಳಿಕ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, "ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದ ಜನರು ಉದ್ದಿಮೆ ಪ್ರಾರಂಭಿಸಲು ಸಾಲ ಸೌಲಭ್ಯದ ನೆರವು ನೀಡುವ ಕಾರ್ಯಕ್ರಮ ಇದಾಗಿದೆ. ಸರಕಾರದ ಪ್ರತಿಯೊಂದು ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪಬೇಕು. ವಿವಿಧ ವಲಯಗಳಲ್ಲಿ ಕೆಲಸ ಮಾಡಲು ಪ್ರತಿಯೊಬ್ಬರಿಗೂ ಸಾಲಸೌಲಭ್ಯ ದೊರೆತಾಗ ಮಾತ್ರ ಅನುಕೂಲವಾಗಲಿದೆ. ಕೇಂದ್ರ ಸರಕಾರದ ಪಿಎಂ ವಿಶ್ವಕರ್ಮ, ಸ್ವನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಇದರಿಂದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯಾಗಲಿದೆ" ಎಂದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಹುಬ್ಬಳ್ಳಿ ವಿಭಾಗದ ಮಹಾ ಪ್ರಬಂಧಕ ಎಂ.ವಿಜಯಕುಮಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕೆವಿಜಿ ಬ್ಯಾಂಕ್‍ನ ರಿಜಿನಲ್ ಮ್ಯಾನೇಜರ ಶ್ರೀಧರ, ಲೀಡ್ ಬ್ಯಾಂಕ್ ಮ್ಯಾನೇಜರ ಮಧುಸೂದನ, ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ ಶೈಲಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಈಜುಕೊಳಗಳಿಗೆ ಕಾವೇರಿ ನೀರು ಬಳಕೆ ನಿಷೇಧಿಸಿ ಬೆಂಗಳೂರು ಜಲಮಂಡಳಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.