ETV Bharat / state

ನಮ್ಮ ಮೆಟ್ರೋ ಸೇವೆಯ ಮಟ್ಟವನ್ನು ಹೆಚ್ಚಿಸಲು ಮೇ 6ರ ವರೆಗೆ ಕಾಮೆಟ್ ನೋವಾ ಸಮೀಕ್ಷೆ - Comet Nova survey

author img

By ETV Bharat Karnataka Team

Published : Apr 8, 2024, 7:01 AM IST

ನಮ್ಮ ಮೆಟ್ರೋ
ನಮ್ಮ ಮೆಟ್ರೋ

ನಮ್ಮ ಮೆಟ್ರೋ ಸೇವೆಯ ಮಟ್ಟವನ್ನು ಹೆಚ್ಚಿಸಲು ಇಂದಿನಿಂದ ಮೇ 6ರ ವರೆಗೆ ಕಾಮೆಟ್ ನೋವಾ ಸಮೀಕ್ಷೆ ನಡೆಸಲಾಗುತ್ತದೆ ಎಂದು ಬಿಎಂಆರ್​​​ಸಿಎಲ್ ತಿಳಿಸಿದೆ.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಹಾಗೂ ಸೇವೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದಿನಿಂದ ಮೇ 6ರ ವರೆಗೆ ಕಾಮೆಟ್ ನೋವಾ ಸಮೀಕ್ಷೆ ನಡೆಯಲಿದೆ ಎಂದು ಬಿಎಂಆರ್​​​ಸಿಎಲ್​ ತಿಳಿಸಿದೆ.

ನಮ್ಮ ಮೆಟ್ರೋ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಮೀಕ್ಷೆ ನಡೆಸಲಾಗುತ್ತಿದ್ದು, ಈ ಸಮೀಕ್ಷೆಯು ನಮ್ಮ ಮೆಟ್ರೋ ಪ್ರಯಾಣಿಕರ ಅನುಭವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಏ. 8(ಇಂದಿನಿಂದ) ಮೇ 6ರ ವರೆಗೆ ಸಮೀಕ್ಷೆ ನಡೆಯಲಿದ್ದು, ಇದರಿಂದ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಸಹಾಯಕವಾಗುವುದಲ್ಲದೆ ನಮ್ಮ ಮೆಟ್ರೋದ ಕಾರ್ಯಕ್ಷಮತೆ ಸೂಚಕಗಳನ್ನು ಅಧ್ಯಯನ ಮಾಡಲು ಸಹಾಯವಾಗಲಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಈ ಸಮೀಕ್ಷೆಯು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದೆ. ಸಮೀಕ್ಷೆಯಲ್ಲಿ ಪ್ರಯಾಣಿಕರು ಪಾಲ್ಗೊಂಡು ನಮ್ಮ ಮೆಟ್ರೋ ಸೇವೆ ಕುರಿತು ಅಗತ್ಯ ಸಲಹೆ ನೀಡಬಹುದು ತಿಳಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾದರೆ ನಮ್ಮ ಮೆಟ್ರೋ ಅಧಿಕೃತ ವೆಬ್‌ಸೈಟ್​​ನಲ್ಲಿ ಪ್ರತಿಕ್ರಿಯೆ ಪುಟಗಳನ್ನು ತೆರೆಯಬೇಕು. ಅಲ್ಲಿ ಕಾಣುವ ಸಮೀಕ್ಷೆಯ ಕಾಲಂ ಆಯ್ಕೆ ಮಾಡಿಕೊಳ್ಳುವ ಮೂಲಕ ಭಾಗವಹಿಸಬಹುದಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಜಾಲತಾಣದ ಜತೆಗೆ ಪ್ರಯಾಣಿಕರಿಗೆ ಕ್ಯೂಆರ್​​​ ಕೋಡ್‌ಗಳನ್ನು ಅಧಿಕೃತ ಮೊಬೈಲ್​​ ಅಪ್ಲಿಕೇಶನ್‌ನಲ್ಲಿ ರೈಲು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಮ್ಮ ಅಮೂಲ್ಯವಾದ ಪ್ರತಿಕ್ರಿಯೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗಗನಯಾನ್ ಯಾತ್ರೆ ಕಣ್ತುಂಬಿಕೊಳ್ಳಲು ಜವಾಹರಲಾಲ್​ ನೆಹರು ತಾರಾಲಯದಲ್ಲಿ ಸ್ಕೈ ಶೋ - Sky Show Exhibition

ETV Bharat Logo

Copyright © 2024 Ushodaya Enterprises Pvt. Ltd., All Rights Reserved.