ETV Bharat / state

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡ ಪೋಕರಿಗಳಿಗೆ ಭಯ ಇಲ್ಲದಾಗಿದೆ: ಸಿ ಮಂಜುಳಾ ಆರೋಪ

author img

By ETV Bharat Karnataka Team

Published : Mar 4, 2024, 6:42 PM IST

Updated : Mar 4, 2024, 10:53 PM IST

BJP Mahila Morcha president Manjula spoke at the press conference.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಸರ್ಕಾರ ಪಿಎಫ್ಐ ಕೇಸ್ ವಾಪಸ್ ಪಡೆದು ಅವರಿಗೆ ಬೆಳೆಯಲು ರೆಡ್ ಕಾರ್ಪೆಟ್ ಹಾಸಿದ್ದರ ಪರಿಣಾಮ ಇಂತಹ ಘಟನೆ ನಡೆಯುತ್ತಿವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಆರೋಪಿಸಿದರು

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ತಕ್ಷಣ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ, ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸರ್ಕಾರ ತಿಪ್ಪೆ ಸಾರಿಸಿದೆ. ಪಿಎಫ್ಐ ಕೇಸ್ ವಾಪಸ್ ಪಡೆದು ಅವರು ಬೆಳೆಯಲು ರೆಡ್ ಕಾರ್ಪೆಟ್ ಹಾಸಿದ್ದು, ಅದರ ಪರಿಣಾಮ ಇಂತಹ ಘಟನೆ ನಡೆಯುತ್ತಿವೆ ಎಂದು ಆರೋಪಿಸಿದರು.

ರಾಮೇಶ್ವರಂ ಕೆಫೆಗೆ ಹೋದ ಮಹಿಳೆ ಮೇಲೆ ಮಾರಣಾಂತಿಕ ಗಾಯವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಪ್ಪೆ ಸಾರಿಸೋ‌ ಕೆಲಸ ಮಾಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಭಂಡರು, ಪುಂಡ ಪೋಕರಿಗೆ ಅಧಿಕಾರ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಗೋ ಬ್ಯಾಕ್ ಮಹಿಳೆಯರು ಇದರ ವಿರುದ್ಧ ಹೋರಾಟ ಮಾಡಬೇಕು. ಕಾನೂನು ಸುವ್ಯವಸ್ಥೆ ಅಡಿ ಪುಂಡರು, ಭಂಡರ ಬಂಧನ ಮಾಡಲಿ ಎಂದು ಆಗ್ರಹಿಸಿದರು.

ಮೂರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ: ಐಪಿಎಸ್ ಮಾಡಿ ಬಂದವರು ಏನು ಮಾಡ್ತಿದ್ದಾರೆ ? ಮೂರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಹಾಕಲಾಗಿದೆ. ಕೇರಳದಿಂದ ಬಂದವರು ಹಾಕಿದ್ದಾರೆ ಅನ್ನೋ ಮಾಹಿತಿ ಇದೆ. ಕೇರಳದವರಿಗೆ ಇಲ್ಲಿ ಯಾಕೆ ರೆಡ್ ಕಾರ್ಪೆಟ್ ಹಾಕಲಾಗಿದೆ. ಮಹಿಳಾ ಆಯೋಗ ಸ್ಥಳಕ್ಕೆ ಹೋಗಿ ವಿಚಾರಿಸಬೇಕು. ಅವರಿಗೆ ಆ ಎಲ್ಲ ಅಧಿಕಾರ ಇದೆ.

ಮಹಿಳಾ ಸಚಿವೆ ಏನು ಮಾಡುತ್ತಿದ್ದಾರೆ? ನಿನಗೆ ಅಲ್ಲಿ ಕೆಲಸ ಮಾಡಲು ಆಗಲ್ಲ ಎಂದರೆ, ಬಿಟ್ಟು ಹೋಗಿ. ನಿಮ್ಮ ಪುರುಷ ಸಚಿವರು ಕೆಲಸ ಮಾಡಲು ಬಿಡದಿದ್ದರೆ ಹೊರಗೆ ಬನ್ನಿ. ಮಹಿಳೆಯರು ಈ ಸರ್ಕಾರದ ವಿರುದ್ಧ ಜಾಗೃತವಾಗಬೇಕು. ಅದೊಂದೇ ಪರಿಹಾರ. ಮಂಗಳೂರಿನಲ್ಲಿ ಮಹಿಳೆಯ ಮೇಲೆ ಆ್ಯಸಿಡ್​ ದಾಳಿ ಆಗಿದೆ. ಶಾಶ್ವತವಾಗಿ ಆಕೆಯನ್ನು ಮುಗಿಸುವ ಕೆಲಸವಾಗಿದೆ. ಕರ್ನಾಟಕದಲ್ಲಿ ಉಡಾಫೆ ಗೃಹ ಸಚಿವರಿದ್ದಾರೆ. ಅವರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಒತ್ತಾಯಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವೇಳೆಯಲ್ಲಿಯೂ ತಿಪ್ಪೆಸಾರಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗಬೇಕು. ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರವಾಗಿದೆ, ಎಸ್ಐಟಿ ರಚನೆಯಾಗಬೇಕಿತ್ತು. ಆದರೆ, ಆಗಲಿಲ್ಲ ಆ ಪ್ರಕರಣದಲ್ಲಿಯೂ ತಿಪ್ಪೆ ಸಾರಿಸಿದರು. ಪಿಎಫ್ಐ ಮೇಲಿನ 153 ಕೇಸ್ ರದ್ದು ಮಾಡಿ ಬಂಧನದಲ್ಲಿದ್ದವರನ್ನು ಹೊರಗಡೆ ಬಿಟ್ಟರು. ಅವರ ಜೊತೆ ಕಾಂಗ್ರೆಸ್​​ನವರು ಒಳ ಒಪ್ಪಂದ ಇದೆ. ಅವರು ಬೆಳೆಯಲು ರೆಡ್ ಕಾರ್ಪೆಟ್ ಹಾಕಿದೆ. ಹಾಗಾಗಿ ರಾಜ್ಯದ ಜನರ ಶಾಂತಿ ಸುವ್ಯವಸ್ಥೆಗೆ ಇವರು ಸವಾಲೊಡ್ಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಘಟನೆಯಲ್ಲಿಯೂ ತಿಪ್ಪೆ ಸಾರಿಸುತ್ತಾರೆ. ಮಂಗಳೂರು ಬಾಂಬ್ ಬ್ಲಾಸ್ಟ್​​ನಲ್ಲಿಯೂ ತಿಪ್ಪೆ ಸಾರಿಸಿದರು. ಸಾರ್ವಜನಿಕರು, ಮಹಿಳೆಯರ ಸುರಕ್ಷತೆಯನ್ನು ಪುಂಡರು ಪೋಕರಿಗಳ ಕೈಯಲ್ಲಿ ಈ ಸರ್ಕಾರ ಕೊಟ್ಟಿದೆ. ಹಾಗಾಗಿ ಈ ಸರ್ಕಾರ ವಾಪಸ್ ಹೋಗಬೇಕು. ಇವರಿಗೆ ನಾಚಿಕೆಯಾಗಬೇಕು. ಎಲ್ಲಿಯವರೆಗೆ ಕಾನೂನು ಸುವ್ಯವಸ್ಥೆ ಪೋಕರಿಗಳು ಪುಂಡರ ಕೈಯಲ್ಲಿ ಕೊಡಬೇಕು ಎಂದು ಪ್ರಶ್ನಿಸಿದರು.

ನಾರಿಶಕ್ತಿ ಕಾರ್ಯಕ್ರಮ: ಮಹಿಳಾ ದಿನಾಚರಣೆ ನಿಮಿತ್ತ ರಾಷ್ಟ್ರೀಯ ಹಾಗೂ ಕರ್ನಾಟಕ ಮಹಿಳಾ ಮೋರ್ಚಾ ಆಶ್ರಯದಲ್ಲಿ ಮಾರ್ಚ್​ 4ರಿಂದ 6 ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾರಿ ಶಕ್ತಿ ವಂದನಾ ಅಭಿಯಾನವನ್ನು ಎರಡು ತಿಂಗಳಿಂದ ಬಿಜೆಪಿ ಮಹಿಳಾ ಮೋರ್ಚಾವು ದೇಶಾದ್ಯಂತ ಹಮ್ಮಿಕೊಂಡಿದೆ.

ಮಹಿಳಾ ದಿನಾಚರಣೆ ದಿನ ಮಾರ್ಚ್​ 6ರಂದು ದೇಶದ ಎಲ್ಲ ಮಂಡಲದಲ್ಲಿ ಎಲ್ಇಡಿ ಮೂಲಕ ಮೋದಿ ಅವರ ಭಾಷಣ ಕೇಳಲಿದ್ದೇವೆ. ಶೇ 33ರಷ್ಟು ಮಹಿಳೆಯರಿಗೆ ಮೀಸಲಾತಿ ಬಂದಿದೆ. ಅದನ್ನು ವಾಜಪೇಯಿ ಸರ್ಕಾರದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಅದನ್ನು ಮೋದಿ ಸರ್ಕಾರ ಇಂಪ್ಲಿಮೆಂಟ್ ಮಾಡಲಿದೆ. ಮಹಿಳೆಯರಿಗೆ ಸ್ವಸಹಾಯ ಸಂಘ, ಸ್ವ ಉದ್ಯೋಗ ಮಾಡಲು ಸಹಾಯ ಮಾಡಲಾಗುವುದು. 6 ರಂದು ನಡೆಯಲಿರುವ ಸಮಾವೇಶದಲ್ಲಿ ಮತ್ತೊಮ್ಮೆ ಮೋದಿ ಹೆಸರಲ್ಲಿ ಅಭಿನಂದನೆ ಸಲ್ಲಿಸಲಿದ್ದೇವೆ ಎಂದು ಸಿ.ಮಂಜುಳಾ ವಿವರಿಸಿದರು.

ಇದನ್ನೂಓದಿ: ಪಾಕ್​ ಪರ ಘೋಷಣೆ ಕುರಿತ ಖಾಸಗಿ ಎಫ್​ಎಸ್​ಎಲ್ ವರದಿ: ಸಚಿವ ಪ್ರಿಯಾಂಕ್​ ಖರ್ಗೆ, ಸತೀಶ್ ಜಾರಕಿಹೊಳಿ ಹೇಳಿದ್ದೇನು?

Last Updated :Mar 4, 2024, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.