ETV Bharat / state

ಬಂಟ್ವಾಳ: ಸಂಚರಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಬಿದ್ದು ಯುವತಿ ಸಾವು!

author img

By ETV Bharat Karnataka Team

Published : Feb 15, 2024, 11:24 AM IST

Bantwala death case
ಬಂಟ್ವಾಳ ಮೃತ ಪ್ರಕರಣ

ಬಂಟ್ವಾಳ ರೈಲ್ವೆ ಸೇತುವೆಯಲ್ಲಿ ರೈಲು ಸಂಚರಿಸುತ್ತಿದ್ದ ಸಂದರ್ಭ ಯುವತಿಯೊಬ್ಬರು ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ.

ಬಂಟ್ವಾಳ (ದಕ್ಷಿಣ ಕನ್ನಡ): ಯುವತಿಯೊಬ್ಬರು ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ರೈಲ್ವೆ ಸೇತುವೆಯಲ್ಲಿ ರೈಲು ಸಂಚರಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಮೃತರನ್ನು ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಎಂಬಲ್ಲಿನ ನಿವಾಸಿ ನಯನಾ ಎಂ.ಜಿ (26) ಎಂದು ಗುರುತಿಸಲಾಗಿದೆ.

ಯುವತಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆ ಸುಮಾರು 6.25ಕ್ಕೆ, ಬೆಂಗಳೂರು ಕಣ್ಣೂರು ಮಂಗಳೂರು ರೈಲಿನಲ್ಲಿ ಬಂದಿದ್ದ ಈ ಯುವತಿ ರೈಲು ಕೈಕುಂಜದ ಸೇತುವೆಯಲ್ಲಿ ನಿಧಾನವಾಗುತ್ತಿದ್ದಂತೆ ಅಲ್ಲಿ ತಡೆಬೇಲಿ ಇಲ್ಲದ ಜಾಗವನ್ನು ನೋಡಿ ನದಿಗೆ ಧುಮುಕಿರಬಹುದು ಎಂದು ಸಂಶಯಿಸಲಾಗಿದೆ. ಇದನ್ನು ನೋಡಿ ಕೂಡಲೇ ಸಹಪ್ರಯಾಣಿಕರು ಮಾಹಿತಿ ನೀಡಿದ್ದು, ಸ್ಥಳೀಯ ಜೀವರಕ್ಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಗೂಡಿನಬಳಿಯ ನೇತ್ರಾವತಿ ಜೀವರಕ್ಷಕ ತಂಡದ ಸದಸ್ಯರು ಸೇವಾಂಜಲಿ ದೋಣಿಯಲ್ಲಿ ಸಾಗಿ, ಮೃತದೇಹವನ್ನು ಪತ್ತೆಹಚ್ಚಿ, ದಡಕ್ಕೆ ತಂದಿದ್ದಾರೆ.

ಮೃತ ಯುವತಿ ಕುಳಿತಿದ್ದ ಸೀಟಿನಲ್ಲಿದ್ದ ಬ್ಯಾಗ್ ಪಡೆದು, ರೈಲ್ವೆ ಸಿಬ್ಬಂದಿ ಬಿ.ಸಿ ರೋಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇರ್ ಆಫ್ ಎಂ.ವಿ. ಗೋವಿಂದ ರಾಜು, ಪಡಸಾಲಹಟ್ಟಿ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ ಎಂಬ ವಿಳಾಸವನ್ನು ಹೊಂದಿರುವ ಆಧಾರ್ ಕಾರ್ಡ್ ಮೃತ ಯುವತಿ ಬ್ಯಾಗ್​​ನಲ್ಲಿ ದೊರಕಿದೆ. ಇದರ ಆಧಾರದಲ್ಲಿ ಈಕೆಯ ಹೆಸರು ನಯನ ಎಂ.ಜಿ. ಎಂದು ಹೇಳಲಾಗಿದ್ದು, 26 ವರ್ಷ ಹರೆಯದವರು. ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಎತ್ತ ಕಣ್ಣಾಯಿಸಿದರೂ ಹಿಮರಾಶಿ: ಹಿಮಪಾತಕ್ಕೆ ನಡುಗಿದ ಅಮೆರಿಕ ಜನತೆ

ಮತ್ತೊಂದು ಸಾವು ಪ್ರಕರಣ: ಇತ್ತೀಚಿನ ಪ್ರಕರಣವೊಂದರಲ್ಲಿ ಕುಟುಂಬವೊಂದರ ನಾಲ್ವರು ಸಾವನ್ನಪ್ಪಿದ್ದಾರೆ. ಕೇರಳದ ಮೂಲದ ಆನಂದ್ ಹೆನ್ರಿ ಕುಟುಂಬ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿತ್ತು. ಪತಿ-ಪತ್ನಿ ತಮ್ಮ ಇಬ್ಬರು ಮಕ್ಕಳನ್ನು ಕೊಲೆಗೈದು, ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಮತ್ತು ಆತ್ಮಹತ್ಯೆ ಸಂಶಯಗಳ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಗುಂಡೇಟಿನಿಂದ ಪೊಲೀಸ್​ ಕಾನ್ಸ್‌ಟೇಬಲ್​ ಗಂಭೀರ

ಆನಂದ್ ಸುಜಿತ್ ಹೆನ್ರಿ, ಅವರ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು ಅವಳಿ ಮಕ್ಕಳು ಕೊನೆಯುಸಿರೆಳೆದವರು. ದಂಪತಿಯ ದೇಹದಲ್ಲಿ ಗುಂಡಿನ ಗಾಯಗಳಿವೆ. ಮಕ್ಕಳ ಮೃತದೇಹಗಳು ಬೆಡ್​ರೂಮ್​ನಲ್ಲಿ ದೊರೆತಿದೆ. ತನಿಖೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.