ETV Bharat / state

ಬೆಳ್ತಂಗಡಿಯ ಬಾಂಜರು ಮಲೆ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ - 100 Percent Polling

author img

By ETV Bharat Karnataka Team

Published : Apr 26, 2024, 5:28 PM IST

Updated : Apr 26, 2024, 5:48 PM IST

polling
ಬೆಳ್ತಂಗಡಿಯ ಬಾಂಜರು ಮಲೆ ಮತಗಟ್ಟೆ

ಲೋಕಸಭೆ ಚುನಾವಣೆಗೆ ಎರಡನೇ ಹಂತದ (ಕರ್ನಾಟಕದಲ್ಲಿ ಮೊದಲ ಹಂತ) ಮತದಾನ ಇಂದು ನಡೆಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜರು ಮಲೆ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜರು ಮಲೆ ಮತಗಟ್ಟೆಯಲ್ಲಿ ಶೇ.100 ಮತದಾನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

polling
ಬೆಳ್ತಂಗಡಿಯ ಬಾಂಜರು ಮಲೆ ಮತಗಟ್ಟೆ

ಬಾಂಜರು ಮಲೆ ಮತಗಟ್ಟೆಯಲ್ಲಿ 4 ಗಂಟೆಯ ಸುಮಾರಿಗೆ ಶೇ.100 ಮತದಾನವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಗಿಯಲಿದೆ. ಇನ್ನೂ ಸಮಯವಿದ್ದು, ಎರಡು ಗಂಟೆ ಮೊದಲೇ ಈ ಮತಗಟ್ಟೆಯಲ್ಲಿ ಶೇ.100 ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರಿರುವ ಮತಗಟ್ಟೆ ಇದು. ಇಲ್ಲಿ 111 ಮತದಾರರಿದ್ದಾರೆ. ನೆರಿಯ ಗ್ರಾಮದ ಬಾಂಜರು ಸಮುದಾಯ ಭವನದಲ್ಲಿ ಈ ಮತಗಟ್ಟೆ ಇದೆ.

polling
ಬೆಳ್ತಂಗಡಿಯ ಬಾಂಜರು ಮಲೆ ಮತಗಟ್ಟೆ

ಇದನ್ನೂ ಓದಿ: Karnataka voting turnout: ಮಧ್ಯಾಹ್ನ 3ರವರೆಗೆ ರಾಜ್ಯದ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮಾಹಿತಿ ಇಲ್ಲಿದೆ - KARNATAKA STATE VOTING TURNOUT

ಕರ್ನಾಟಕದ ದಕ್ಷಿಣ ಭಾಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹರಡಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಧ್ಯಾಹ್ನ ಮೂರು ಗಂಟೆವರೆಗೆ ಶೇ.50.93ರಷ್ಟು ವೋಟಿಂಗ್ ಆಗಿದೆ.

Last Updated :Apr 26, 2024, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.