ETV Bharat / sports

ರಣಜಿ ಟ್ರೋಫಿ 2024: ಫೈನಲ್​ನಲ್ಲಿ ವಿದರ್ಭ ಎದುರು ಗೆದ್ದು, 42ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಮುಂಬೈ

author img

By ETV Bharat Karnataka Team

Published : Mar 14, 2024, 5:20 PM IST

Etv Bharat
Etv Bharat

ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ವಿದರ್ಭ ವಿರುದ್ದ ಅಜಿಂಕ್ಯಾ ರಹಾನೆ ನೇತೃತ್ವದ ಮುಂಬೈ ತಂಡ ಗೆಲುವು ಸಾಧಿಸಿದೆ.

ಮುಂಬೈ: ರಣಜಿ ಟ್ರೋಫಿ 2023 - 24 ಫೈನಲ್​ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ 169 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ 42ನೇ ಬಾರಿಗೆ ರಣಜಿ ಟ್ರೋಪಿಗೆ ಮುತ್ತಿಕ್ಕಿದೆ. ಮುಂಬೈ ನೀಡಿದ್ದ 568 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಿದರ್ಭ ತಂಡ 368 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟ್ರೋಫಿ ಕೈಚೆಲ್ಲಿತು.

ವಾಂಖೆಡ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ​ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್​ಗಳಿಗೆ ಸರ್ವಪತನ ಕಂಡಿತು. ಶಾರ್ದೂಲ್ ಠಾಕೂರ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್​ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶಾರ್ದೂಲ್ 75 ರನ್‌ಗಳ ಇನ್ನಿಂಗ್ಸ್‌ ಕೊಡುಗೆಯಿಂದ ಮುಂಬೈ 224ರ ಗಡಿ ತಲುಪಿತು. ಇದಕ್ಕುತ್ತರವಾಗಿ ವಿದರ್ಭ ತಂಡ ಕೇವಲ 105 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಮುಂಬೈ ಎರಡನೇ ಇನ್ನಿಂಗ್ಸ್‌ನಲ್ಲಿ 119 ರನ್‌ಗಳ ಮುನ್ನಡೆ ಸಾಧಿಸಿತು.

ನಂತರ 119 ರನ್‌ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದ ಮುಂಬೈ ತಂಡದ ಆಟಗಾರರು ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 418 ರನ್​ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮುಶೀರ್ ಖಾನ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಅಜಿಂಕ್ಯ ರಹಾನೆ 73 ರನ್ ಗಳಿಸಿದರೇ, ಶ್ರೇಯಸ್ ಅಯ್ಯರ್ 95 ರನ್ ಗಳಿಸಿದರು. ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ಅದ್ಭುತ ಶತಕ ಸಿಡಿಸಿದರು. 10 ಬೌಂಡರಿಗಳನ್ನು ಒಳಗೊಂಡಂತೆ 136 ರನ್ ಚಚ್ಚಿದರು. ಉಳಿದಂತೆ ಶಮ್ಸ್ ಮುಲಾನಿ ಅರ್ಧಶತಕ ಇನಿಂಗ್ಸ್ ಆಡಿದರು.

ವಿದರ್ಭ ಪರ ಹರ್ಷ್ ದುಬೆ 5 ವಿಕೆಟ್ ಪಡೆದರೆ, ಯಶ್ ಠಾಕೂರ್ 3, ಆದಿತ್ಯ ಠಾಕ್ರೆ ಮತ್ತು ಅಮನ್ ಮೊಖಾಡೆ ತಲಾ ಒಂದು ವಿಕೆಟ್ ಪಡೆದರು. ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಇನ್ನಿಂಗ್ಸ್‌ನಲ್ಲಿ 418 ರನ್ ಗಳಿಸಿದ ಮುಂಬೈ ವಿದರ್ಭ ಗೆಲುವಿಗೆ 538 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ವಿದರ್ಭ 368 ರನ್‌ಗಳಿಗೆ ಆಲೌಟ್ ಆಯಿತು. ವಿದರ್ಭ ಪರ ನಾಯಕ ಹಾಗೂ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ ಶತಕ ಸಿಡಿಸಿದರೇ, ಹರ್ಷ್ ದುಬೆ 65 ಮತ್ತು ಕರುಣ್ ನಾಯರ್ 74 ರನ್ ಗಳಿಸಿದರು. ಇದರ ಹೊರತಾಗಿ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಥರ್ವೆ ಟೈಡೆ (32), ಧ್ರುವ್ ಶೋರೆ (28), ಅಮನ್ ಮೊಖಡೆ (32), ಯಶ್ ರಾಥೋಡ್ (7), ಆದಿತ್ಯ (3), ಯಶ್ ಠಾಕೂರ್ (6), ಉಮೇಶ್ ಯಾದವ್ 6 ರನ್ ಗಳಿಸಿ ಔಟಾದರು.

ಬೌಲಿಂಗ್​ನಲ್ಲಿ ಮುಂಬೈ ಪರ ತನುಷ್ ಕೋಟ್ಯಾನ್ 4, ಮುಶೀರ್ ಖಾನ್ ಮತ್ತು ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಹಾಗೂ ಶಮ್ಸ್ ಮುಲಾನಿ ಮತ್ತು ಧವಳ್ ಕುಲಕರ್ಣಿ ತಲಾ ಒಂದು ವಿಕೆಟ್ ಪಡೆದರು.

ಎರಡಕ್ಕಿಂತ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದ ತಂಡಗಳು

  • ಮುಂಬೈ- 42
  • ಕರ್ನಾಟಕ- 8
  • ದೆಹಲಿ- 7
  • ಮಧ್ಯಪ್ರದೇಶ- 5
  • ಬರೋಡಾ- 5
  • ಸೌರಾಷ್ಟ್ರ- 2
  • ಬಂಗಾಳ- 2
  • ವಿದರ್ಭ- 2
  • ರಾಜಸ್ಥಾನ- 2
  • ತಮಿಳುನಾಡು- 2
  • ಹೈದರಾಬಾದ್- 2
  • ರೈಲ್ವೇಸ್- 2
  • ಮಹಾರಾಷ್ಟ್ರ- 2

ಇದನ್ನೂ ಓದಿ: ವಿದೇಶಿ ಕ್ರಿಕೆಟ್​ ಮಂಡಳಿಗಳ ಜೊತೆ ರಾಜ್ಯ ಸಂಸ್ಥೆಗಳ ನೇರ ಒಪ್ಪಂದಕ್ಕೆ ಬಿಸಿಸಿಐ ಕಡಿವಾಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.