ETV Bharat / sports

ಐಪಿಎಲ್​ 2024: ಆರ್​ಸಿಬಿಗೆ 177 ರನ್​ಗಳ ಟಾರ್ಗೆಟ್; ತವರಿನಲ್ಲಿ ಸಿಗುವುದೇ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್​? - IPL 2024

author img

By ETV Bharat Karnataka Team

Published : Mar 25, 2024, 10:03 PM IST

ಆರ್​ಸಿಬಿ
ಆರ್​ಸಿಬಿ

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಪಂಜಾಬ್​ ಕಿಂಗ್ಸ್​ 177 ರನ್​ಗಳ ಟಾರ್ಗೆಟ್​ ಅನ್ನು ರಾಯಲ್​ ಚಾಲೆಂಜರ್ಸ್ ಬೆಂಗಳೂರಿಗೆ ನೀಡಿದೆ.

ಬೆಂಗಳೂರು : ಆಕ್ರಮಣಕಾರಿಯಾಗಿ ಬೌಲಿಂಗ್​ ಮಾಡಿದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಬೌಲರ್ಸ್, ​ ಪಂಜಾಬ್​ ಕಿಂಗ್ಸ್​ ಅನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡ ಪಂಜಾಬ್​ 176 ರನ್​ಗಳನ್ನು ಗಳಿಸಿದೆ. ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಆರ್​ಸಿಬಿಗೆ ಗೆಲ್ಲಲು 177 ರನ್​ಗಳ ಅವಶ್ಯಕತೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 17ನೇ ಆವೃತ್ತಿಯ ಐಪಿಎಲ್​ನ ಆರನೇ ​ಪಂದ್ಯ ನಡೆಯುತ್ತಿದೆ.

ಆರ್​ಸಿಬಿ ಟಾಸ್​ ಗೆದ್ದು ಪಂಜಾಬ್​ಗೆ ಬ್ಯಾಟಿಂಗ್​​ಗೆ ಆಹ್ವಾನಿಸಿತು. ಅದರಂತೆ ಆರಂಭಿಕರಾಗಿ ಪಂಜಾಬ್​ ಪರ ನಾಯಕ ಶಿಖರ್​ ಧವನ್​ ಮತ್ತು ಜಾನಿ ಬೈರ್‌ಸ್ಟೋವ್ ಆಗಮಿಸಿದರು. ಆದರೆ, ಉತ್ತಮ ದಾಂಡಿಗ ಜಾನಿ ಬೈರ್​ಸ್ಟೋವ್​ (8) ಬೇಗನೆ ವಿಕೆಟ್​ ಕಳೆದುಕೊಂಡರು. ನಂತರ ಒಂದಾದ ಶಿಖರ್​ ಧವನ್​ ಮತ್ತು ಪ್ರಭ್​ಸಿಮ್ರಾನ್ ಸಿಂಗ್ ಜೋಡಿ​ ಅರ್ಧಶತಕದ ಜೊತೆಯಾಟ ಆಡಿತು. ಮನಮೋಹಕ ಎರಡು ಸಿಕ್ಸರ್​ ಮತ್ತು ಎರಡು ಬೌಂಡರಿ ಹೊಡೆದು ಮಿಂಚಿದ ಪ್ರಭ್​ಸಿಮ್ರಾನ್ ಸಿಂಗ್ 25 ರನ್​ಗಳಿಗೆ ತಮ್ಮ ಆಟವನ್ನು ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಳ್ಳುವ ಮೂಲಕ ಕೊನೆಗೊಳಿಸಿದರು.

ಮಂದಗತಿ ಆಟವಾಡಿದ ಧವನ್​ 37 ಚೆಂಡುಗಳಲ್ಲಿ ಆರ್ಕಷಕ 5 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ ಅರ್ಧಶತಕದ ಹೊಸ್ತಿನಲ್ಲಿ ಔಟ್​ ಆದರು. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ತಂಡವನ್ನು ಗೆಲುವಿನಡೆಗೆ ಸಾಗಿಸಿ ಲಿಯಾಮ್ ಲಿವಿಂಗ್‌ಸ್ಟೋನ್ (17) ವಿಕೆಟ್​ ನೀಡಿದರು. ಇನ್ನುಳಿದಂತೆ ಯಾವುದೇ ಪಂಜಾಬ್​ ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಸ್ಯಾಮ್​ ಕರ್ರನ್​ (23),ಜಿತೇಶ್ ಶರ್ಮಾ (27) ಭರವಸೆ ಮೂಡಿಸಲಿಲ್ಲ. ಕೊನೆಯಲ್ಲಿ ಶಶಾಂಕ್ ಸಿಂಗ್ ಕೇವಲ 8 ಚೆಂಡುಗಳಲ್ಲಿ ಎರಡು ಸಿಕ್ಸರ್​ ಮತ್ತು ಒಂದು ಬೌಂಡರಿ ಸಹಾಯದಿಂದ 21 ರನ್​​ಗಳನ್ನು​ ಕಲೆ ಹಾಕಿ ಹರ್‌ಪ್ರೀತ್ ಬ್ರಾರ್ (2) ಜೊತೆ ಅಜೇಯರಾಗಿ ಉಳಿದರು.

ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​ಸಿಬಿ ಸೋಲಿಗೆ ಕಳಪೆ ಬೌಲಿಂಗ್ ವಿಭಾಗವೇ ಕಾರಣ ಎಂದು ಟೀಕೆ ಮಾಡಲಾಗಿತ್ತು. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ ಬೌಲರ್ಸ್​ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟಿಲ್ಲ ಹಾಗೂ ಬೇಕಾದ ಸಂದರ್ಭದಲ್ಲಿ ವಿಕೆಟ್​ಗಳನ್ನು ತೆಗೆಯುವಲ್ಲಿ ತಮ್ಮ ಕೌಶಲ್ಯವನ್ನು ತೋರಿರುವುದು ಅಭಿಮಾನಿಗಳಲ್ಲಿ ತುಸು ಸಂತಸ ಮೂಡಿಸಿದೆ.

ಈ ಬಾರಿಯ ಮಿನಿ ಹರಾಜಿನಲ್ಲಿ ದುಬಾರಿ ಬೆಲೆಗೆ ಆರ್​ಸಿಬಿ ಬಿಡ್​ ಮಾಡಿದ ವೇಗದ ಬೌಲರ್​ ಅಲ್ಜಾರಿ ಜೋಸೆಫ್ ಮಾತ್ರ ತಮ್ಮ ಲಯ ಕಂಡುಕೊಳ್ಳುವಲ್ಲಿ ಎಡುವಿದ್ದು, 4 ಓವರ್​ಗಳಲ್ಲಿ ಬರೋಬ್ಬರಿ 43 ರನ್​ಗಳನ್ನು ಬಿಟ್ಟುಕೊಟ್ಟಿದ್ದಾರೆ. ​ಗ್ಲೆನ್​ ಮ್ಯಾಕ್ಸ್​ವೆಲ್​, ಮೊಹಮ್ಮದ್ ಸಿರಾಜ್ 2 ಮತ ವಿಕೆಟ್​ ಕಂಬಳಿಸಿದರೆ, ಯಶ್ ದಯಾಳ್ ಮತ್ತು ಅಲ್ಜಾರಿ ಜೋಸೆಫ್ ತಲಾ ಒಂದೊಂದು ವಿಕೆಟ್​ ಪಡೆದರು.

ತಂಡಗಳು : ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್​ಸಿಮ್ರಾನ್ ಸಿಂಗ್, ಸ್ಯಾಮ್ ಕರ್ರನ್​, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹರ್​.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್​ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಅಲ್ಜಾರಿ ಜೋಸೆಫ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಇದನ್ನೂ ಓದಿ : ಐಪಿಎಲ್​ 2024: ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್​ ಆಯ್ಕೆ, ತವರಿನಲ್ಲಿ ಗೆಲುವಿನ ನಿರೀಕ್ಷೆ - IPL 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.