ETV Bharat / sports

ಕೆಲವೇ ದಿನಗಳಲ್ಲಿ ಐಪಿಎಲ್​ ಆರಂಭ: ಲಂಡನ್​ನಿಂದ ಸ್ವದೇಶಕ್ಕೆ ವಿರಾಟ್​ ವಾಪಸ್​

author img

By PTI

Published : Mar 17, 2024, 7:09 PM IST

Kohli back in India for IPL  virat join RCB training camp  virat son Akaay  Royal Challengers Bangalore
ಸೇರಲಿದ್ದಾರೆ ಆರ್​ಸಿಬಿ

Virat Kohli IPL 2024: ಐಪಿಎಲ್ 2024ಕ್ಕೆ ಎಲ್ಲವೂ ಸಿದ್ಧವಾಗಿದೆ. ಸೀಸನ್ 17 ಮಾರ್ಚ್ 22 ರಂದು ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ ಆಡಲು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಲಂಡನ್‌ನಿಂದ ಮುಂಬೈ ತಲುಪಿದ್ದಾರೆ. ಅಕಾಯ್​ ಜನಿಸಿದ ನಂತರ ಕೊಹ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.

ಮುಂಬೈ (ಮಹಾರಾಷ್ಟ್ರ): ಇನ್ನು 5 ದಿನಗಳಲ್ಲಿ 2024ರ ಐಪಿಎಲ್ ಆರಂಭವಾಗಲಿರುವ ಹಿನ್ನೆಲೆ ಆಯಾ ತಂಡಗಳ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಎಲ್ಲರ ಕಣ್ಣು ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮೇಲೆ ನೆಟ್ಟಿತ್ತು. ವೈಯಕ್ತಿಕ ಕಾರಣಗಳಿಂದ ಸುಮಾರು ಎರಡು ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ವಿರಾಟ್ ಈ ಬಾರಿಯ ಐಪಿಎಲ್​ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ವಿರಾಟ್ ಯಾವಾಗ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಇದೀಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಮಗು ಅಕಾಯ್​ ಕೊಹ್ಲಿ ಹುಟ್ಟಿದ ನಂತರ ಲಂಡನ್‌ನಿಂದ ಭಾರತಕ್ಕೆ ಬಂದ ವಿರಾಟ್​ ಕೊಹ್ಲಿ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡರು. ಈ ಹೊಸ ಲುಕ್‌ನಲ್ಲಿ ವಿರಾಟ್ ಅವರನ್ನು ನೋಡಿದ ನಂತರ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಬಿಳಿ ಗಡ್ಡವಿರುವ ಅಕಾಯ್​ ಡ್ಯಾಡಿ' ಎಂಬ ಶೀರ್ಷಿಕೆಯೊಂದಿಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಭಾರತಕ್ಕೆ ಬಂದ ನಂತರ ವಿರಾಟ್ ಶೀಘ್ರದಲ್ಲೇ ಆರ್‌ಸಿಬಿ ಕ್ಯಾಂಪ್ ಸೇರಿ ಅಭ್ಯಾಸ ಆರಂಭಿಸಲಿದ್ದಾರೆ. ಮಾರ್ಚ್ 22 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದೊಂದಿಗೆ 2024ರ ಐಪಿಎಲ್ ಆರಂಭವಾಗಲಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಈ ಸೀಸನ್​ ಆರಂಭಿಸುವ ನಿರೀಕ್ಷೆಯಲ್ಲಿವೆ.

ಈ ಮಧ್ಯೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ದಂಪತಿಗೆ ಫೆಬ್ರವರಿ 15 ರಂದು ಗಂಡು ಮಗುವಾಗಿತ್ತು. ಈ ದಂಪತಿಗೆ ಆಗಲೇ ಮಗಳು (ವಾಮಿಕಾ) ಜನಿಸಿದ್ದಳು. ಎರಡನೇ ಬಾರಿಗೆ ತಂದೆಯಾಗುವ ಕಾರಣ ಕಳೆದ ಎರಡು ತಿಂಗಳಿಂದ ವಿರಾಟ್ ಲಂಡನ್‌ನಲ್ಲಿದ್ದಾರೆ. ಈ ಕಾರಣದಿಂದಾಗಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಕಳೆದುಕೊಂಡರು. ಈ ವಿಷಯವನ್ನು ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. 2024ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಕೊನೆಯ ಬಾರಿಗೆ ಆಡಿದ್ದರು. ಮತ್ತು ಮಾರ್ಚ್ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ಆನ್‌ವೆಲ್ ಇನ್ ಬಾಕ್ಸ್ ಪ್ರಮೋಷನ್ ಕಾರ್ಯಕ್ರಮದಲ್ಲಿ ವಿರಾಟ್ ಭಾಗವಹಿಸುವ ಸಾಧ್ಯತೆಯಿದೆ.

ಓದಿ: WPL Final: ಮಂಧಾನ ಪಡೆಗೆ ಲ್ಯಾನಿಂಗ್ ತಂಡದ ಸವಾಲು: ಚೊಚ್ಚಲ ಕಪ್​ ಗೆಲ್ಲುತ್ತಾ ಆರ್​ಸಿಬಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.