ETV Bharat / sports

ಐಪಿಎಲ್​ ಚಾಂಪಿಯನ್ಸ್​ಗೆ ₹20 ಕೋಟಿ ಬಹುಮಾನ: ವಿರಾಟ್​ಗೆ ಆರೆಂಜ್​ ಕ್ಯಾಪ್​: ಯಾರಿಗೆಲ್ಲ ಪ್ರಶಸ್ತಿ? - IPL 2024 Award Winners

author img

By ETV Bharat Karnataka Team

Published : May 27, 2024, 8:24 AM IST

ಐಪಿಎಲ್​ 2024ರ ಚಾಂಪಿಯನ್​ ಆಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೊರಹೊಮ್ಮಿದೆ. ಈ ಬಾರಿ ವಿಶೇಷ ಗೌರವಗಳನ್ನು ಮುಡಿಗೇರಿಸಿಕೊಂಡ ಆಟಗಾರರ ಮಾಹಿತಿ ಇಲ್ಲಿದೆ.

IPL 2024 Award Winners
ಐಪಿಎಲ್​ ಪ್ರಶಸ್ತಿ ವಿಜೇತರು (IANS)

ಚೆನ್ನೈ: ಏಕಪಕ್ಷೀಯ ಪಂದ್ಯವಾಗಿ ಕಂಡುಬಂದ ಐಪಿಎಲ್​ 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ 8 ವಿಕೆಟ್​ಗಳ ಜಯ ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಮಿಚೆಲ್​ ಸ್ಟಾರ್ಕ್​ ಸೇರಿದಂತೆ ಎಲ್ಲ ಬೌಲರ್​ಗಳ ಮಾರಕ ದಾಳಿ ಹಾಗೂ ವೆಂಕಟೇಶ್ ಅಯ್ಯರ್ ಅಜೇಯ ಅರ್ಧಶತಕದ ಬಲದಿಂದ ಕೆಕೆಆರ್ ಗೆದ್ದು ಬೀಗಿತು.

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುವ ಹೈದರಾಬಾದ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರ ಫಲಿಸಲಿಲ್ಲ. ಮೊದಲ ಓವರ್​ನಿಂದಲೇ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ ಸನ್​ರೈಸರ್ಸ್​ 18.3 ಓವರ್​ಗಳಲ್ಲಿ ಕೇವಲ 113 ರನ್​ಗಳಿಗೆ ಆಲೌಟ್​ ಆಯಿತು. ಟೂರ್ನಿಯುದ್ದಕ್ಕೂ ಗುಡುಗಿದ್ದ ಸನ್‌ರೈಸರ್ಸ್ ಬ್ಯಾಟರ್​​ಗಳು ಫೈನಲ್​ನಲ್ಲಿ ಮಂಕಾದರು. 114 ರನ್‌ಗಳ ಅಲ್ಪ ಮೊತ್ತವನ್ನು 10.3 ಓವರ್​ಗಳಲ್ಲೇ ಬೆನ್ನಟ್ಟಿದ ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​ ಇತಿಹಾಸ ಬರೆಯಿತು.

ಈ ಹಿಂದೆ 2012, 2014ರಲ್ಲಿ ಗೌತಮ್​ ಗಂಭೀರ್​ ನೇತೃತ್ವದಲ್ಲಿ ಕೋಲ್ಕತ್ತಾ ಚಾಂಪಿಯನ್​ ಆಗಿತ್ತು. ಈ ವರ್ಷ ಮೆಂಟರ್​ ಆಗಿ ಮರಳಿ ಪರ್ಪಲ್​ ಆರ್ಮಿ ಸೇರಿದ್ದ ಗಂಭೀರ್,​ ತಂಡಕ್ಕೆ ಮತ್ತೊಂದು ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಹಲವಾರು ಹೊಸ ಪ್ರತಿಭೆಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಅದರಂತೆ ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರಿಗೆ ವಿವಿಧ ಪ್ರಶಸ್ತಿ, ಗೌರವಗಳನ್ನು ನೀಡಲಾಗಿದೆ. ಈ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.

ಚಾಂಪಿಯನ್​ ಪ್ರಶಸ್ತಿ: ಕೋಲ್ಕತ್ತಾ ನೈಟ್​ ರೈಡರ್ಸ್​ - 20 ಕೋಟಿ ರೂ. ನಗದು ಬಹುಮಾನ

ರನ್ನರ್ಸ್​ ಅಪ್​: ಸನ್‌ರೈಸರ್ಸ್ ಹೈದರಾಬಾದ್ - 12.5 ಕೋಟಿ ರೂ. ನಗದು

ಮೋಸ್ಟ್ ವ್ಯಾಲುಯೇಬಲ್​ ಪ್ಲೇಯರ್: ಸುನೀಲ್​ ನರೈನ್ (482 ರನ್​, 17 ವಿಕೆಟ್​​- ಕೆಕೆಆರ್​)

ಎಮರ್ಜಿಂಗ್​ ಪ್ಲೇಯರ್​: ನಿತೀಶ್​ ಕುಮಾರ್ ರೆಡ್ಡಿ

ಆರೆಂಜ್​ ಕ್ಯಾಪ್​​: ವಿರಾಟ್​ ಕೊಹ್ಲಿ (741 ರನ್, ಆರ್​ಸಿಬಿ​)

ಪರ್ಪಲ್ ಕ್ಯಾಪ್​: ಹರ್ಷಲ್​ ಪಟೇಲ್​ (24 ವಿಕೆಟ್​, ಪಂಜಾಬ್​ ಕಿಂಗ್ಸ್​​)

ಗೇಮ್​ ಚೇಂಜರ್​ ಆಫ್​ ದಿ ಸೀಸನ್​: ಸುನೀಲ್​ ನರೈನ್ (ಕೆಕೆಆರ್​)

ಇಲೆಕ್ಟ್ರಿಕ್​ ಸ್ಟ್ರೈಕರ್​ ಆಫ್​ ದಿ ಸೀಸನ್​: ಜಾಕ್​ ಪ್ರೆಸರ್​ ಮಕ್ಗರ್ಕ್​​

ಪರ್ಫೆಕ್ಟ್​ ಕ್ಯಾಚ್​ ಆಫ್​ ದಿ ಸೀಸನ್​: ರಮಣದೀಪ್​ ಸಿಂಗ್​

ಫೇರ್​​ಪ್ಲೇ ಅವಾರ್ಡ್​: ಸನ್‌ರೈಸರ್ಸ್ ಹೈದರಾಬಾದ್

ಇದನ್ನೂ ಓದಿ: IPL Final: ದಶಕಗಳ ಬಳಿಕ ಚಾಂಪಿಯನ್​ ಪಟ್ಟಕೇರಿದ​ ಕೆಕೆಆರ್​​ ​ - KKR won the IPL trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.