ETV Bharat / sports

ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದು ದಾಖಲೆ ಬರೆದ ದೀಪಾ ಕರ್ಮಾಕರ್ - Dipa Karmakar

author img

By ANI

Published : May 27, 2024, 10:25 AM IST

Updated : May 27, 2024, 10:38 AM IST

ತಾಷ್ಕೆಂಟ್​ನಲ್ಲಿ ನಡೆದ ಏಷ್ಯನ್ ಜಿಮ್ನಾಸ್ಟಿಕ್ಸ್​ ​ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರತಿಭೆ ದೀಪಾ ಕರ್ಮಾಕರ್ ಅವರು ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಜಿಮ್ನಾಸ್ಟ್‌ ದೀಪಾ ಕರ್ಮಾಕರ್
ಜಿಮ್ನಾಸ್ಟ್‌ ದೀಪಾ ಕರ್ಮಾಕರ್ (ANI)

ಉಜ್ಬೇಕಿಸ್ಥಾನ್: ಇಲ್ಲಿನ ತಾಷ್ಕೆಂಟ್ನಲ್ಲಿ ನಡೆದ ಏಷ್ಯನ್ ಜಿಮ್ನಾಸ್ಟಿಕ್ಸ್​ ​ಚಾಂಪಿಯನ್‌ಶಿಪ್‌ನಲ್ಲಿ ದೀಪಾ ಕರ್ಮಾಕರ್ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದರು.

30 ವರ್ಷದ ದೀಪಾ ಕರ್ಮಾಕರ್ ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ಒಟ್ಟು 13.566 ಅಂಕ ಗಳಿಸುವ ಮೂಲಕ ಈ ಚಾರಿತ್ರಿಕ ಸಾಧನೆ ಮಾಡಿದರು.

ದಕ್ಷಿಣ ಕೊರಿಯಾದ ಕಿಮ್ ಸನ್ ಹಯಾಂಗ್ 13.466 ಅಂಕಗಳೊಂದಿಗೆ ಬೆಳ್ಳಿ ಮತ್ತು ಜ್ಯೋ ಕ್ಯೊಂಗ್ ಬಿಯಾಲ್​ 12.966 ಅಂಕ ಪಡೆದು ಕಂಚು ಗಳಿಸಿದರು.

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಿಮ್ನಾಸ್ಟ್‌ಗಳು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. ಈ ಹಿಂದೆ, ಕಾಂಟಿನೆಂಟಲ್​ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕಗಳು ಬಂದಿದ್ದವು.

ಭಾರತೀಯ ಕ್ರೀಡಾ ಪ್ರಾಧಿಕಾರ ಪ್ರತಿಕ್ರಿಯೆ: 'ಏಷ್ಯನ್ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ನಿರ್ಮಾಣವಾಗಿದೆ. ಪ್ರತಿಷ್ಟಿತ ಚಾಂಪಿಯನ್‌ಶಿಪ್‌ನಲ್ಲಿ ದೀಪಾ ಕರ್ಮಾಕರ್ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ, 2015ರಲ್ಲಿ ಇವರು ಕಂಚಿನ ಪದಕ ಗೆದ್ದಿದ್ದರು' ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಐಪಿಎಲ್​ ಚಾಂಪಿಯನ್ಸ್​ಗೆ ₹20 ಕೋಟಿ ಬಹುಮಾನ: ವಿರಾಟ್​ಗೆ ಆರೆಂಜ್​ ಕ್ಯಾಪ್​: ಯಾರಿಗೆಲ್ಲ ಪ್ರಶಸ್ತಿ? - IPL 2024 Award Winners

Last Updated : May 27, 2024, 10:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.