ETV Bharat / sports

IPL: ಸನ್​ರೈಸರ್ಸ್​ಗೆ 212 ರನ್​ಗಳ ಗುರಿ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​ - CSK Vs SRH

author img

By ETV Bharat Karnataka Team

Published : Apr 28, 2024, 10:08 PM IST

IPL: ಸನ್​ರೈಸರ್ಸ್​ಗೆ 212 ರನ್​ಗಳ ಗುರಿ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​
IPL: ಸನ್​ರೈಸರ್ಸ್​ಗೆ 212 ರನ್​ಗಳ ಗುರಿ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​

ಹೈದರಾಬಾದ್​ಗೆ 212 ರನ್​ಗಳ ಗುರಿ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​

ಚೆನ್ನೈ: ಐಪಿಎಲ್​ನ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು​ ಮುಖಾಮುಖಿಯಾಗಿವೆ.

ಎಂ.ಎ.ಚಿದಾಂಬರಂ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಚೆನ್ನೈ ನಿಗದಿತ 20 ಓವರ್​ಗಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (98) ಮತ್ತು ಡ್ಯಾರೆಲ್ ಮಿಚೆಲ್ (52) ಅವರ ಅತ್ಯುತ್ತಮ ಇನ್ನಿಂಗ್ಸ್ ನೆರವಿನಿಂದ 3 ವಿಕೆಟ್​ ನಷ್ಟಕ್ಕೆ 212 ರನ್​ಗಳನ್ನು ಪೇರಿಸಿದೆ. ಉಳಿದಂತೆ ಅಜಿಂಕ್ಯಾ ರಹಾನೆ (9), ಶಿವಂ ದುಬೆ (39*), ಧೋನಿ (5*) ರನ್​ ಕೊಡುಗೆ ನೀಡಿದ್ದಾರೆ.

ಗಾಯಕ್ವಾಡ್​ ಶತಕ ವಂಚಿತ: ಸಿಎಸ್​ಕೆ ಆರಂಭಿಕ ಬ್ಯಾಟರ್ ಋತುರಾಜ್​ ಗಾಯಕ್ವಾಡ್​ ಭರ್ಜರಿ ಬ್ಯಾಟ್​ ಬೀಸಿದ್ದಾರೆ. 54 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸ್​ರ ಸಮೇತ 98 ರನ್​ ಸಿಡಿಸಿದ್ದಾರೆ. ಶತಕಕ್ಕೆ 2 ರನ್​ಗಳು ಬೇಕಿದ್ದಾಗ ಬೌಂಡರಿ ಸಿಡಿಸಲು ಹೋಗಿ ನಿತೀಶ್​ ರೆಡ್ಡಿಗೆ ಕ್ಯಾಚ್​ ನೀಡಿ ಶತಕ ವಂಚಿತರಾದರು.

ಗಾಯಕ್ವಾಡ್​ ಮಿಚೆಲ್​ ಜೊತೆಯಾಟ: ಅಜಿಂಕ್ಯ ರಹಾನೆ ನಿರ್ಗಮಿಸಿದ ಬಳಿಕ ಬ್ಯಾಟಿಂಗ್ ಗೆ ಬಂದ ಡ್ಯಾರೆಲ್ ಮಿಚೆಲ್ ಎರಡನೇ ವಿಕೆಟ್​ಗೆ ಋತುರಾಜ್ ಗಾಯಕ್ವಾಡ್ ಜತೆ ಸೇರಿ 107 ರನ್ ಗಳ ಜೊತೆಯಾಟ ಆಡಿದರು.

ಎರಡನೇ ಇನ್ನಿಂಗ್ಸ್​: ಬೃಹತ್​ ಗುರಿಯನ್ನು ಪಡೆದು ಕಣಕ್ಕಿಳಿದಿರುವ ಹೈದರಾಬಾದ್​ ತಂಡ 3.5 ಓವರ್​ವೇಳೆಗೆ 40 ರನ್​ ಕಲೆ ಹಾಕಿ 3 ವಿಕೆಟ್​ಗಳನ್ನು ಕಳಳೆದುಕೊಂಡಿದೆ. ​

ಇದನ್ನೂ ಓದಿ: IPL: ವಿಲ್​ ಜಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್​: ಆರ್​ಸಿಬಿಗೆ ಶರಣಾದ ಟೈಟಾನ್ಸ್​ - RCB BEATS GT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.