ಪ್ಯಾರಿಸ್ ಒಲಿಂಪಿಕ್​​​ ಕೋಟಾ ಖಚಿತಪಡಿಸಿಕೊಂಡ ಅನುಷ್ ಅಗರ್‌ವಾಲಾ​

author img

By ETV Bharat Karnataka Team

Published : Feb 20, 2024, 7:05 AM IST

Anush Agarwalla

ಅನುಷ್ ಅಗರ್‌ವಾಲಾ, ಡ್ರೆಸ್ಸೇಜ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಖಚಿತಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಒಕ್ಕೂಟವು ಅಂತಿಮ ಹೆಸರನ್ನು ಸಂಘಟಕರಿಗೆ ಕಳುಹಿಸುವ ಮೊದಲು ಫೈನಲ್​​ ಟ್ರಯಲ್​ ನಡೆಸಲಿದೆ.

ನವದೆಹಲಿ: 2023ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಅನುಷ್ ಅಗರ್‌ವಾಲಾ, ಡ್ರೆಸ್ಸೇಜ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಸ್ವೀಕರಿಸಿದ್ದಾರೆ. ಈಕ್ವೆಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್‌ಐ) ಸೋಮವಾರ ಈ ವಿಚಾರವನ್ನು ಪ್ರಕಟಿಸಿದೆ.

ಹ್ಯಾಂಗ್‌ಝೌನಲ್ಲಿ, ಕಂಚಿನ ಪದಕ ಗೆದ್ದಿದ್ದ ಅನುಷ್​​ ಅಗರ್‌ವಾಲಾ ಅವರ ನಾಲ್ಕು ಪ್ರಮುಖ ಈವೆಂಟ್‌ಗಳಲ್ಲಿನ ಪರ್ಫಾಮೆನ್ಸ್ ಆಧರಿಸಿ ಕೋಟಾವನ್ನು ನಿಗದಿಪಡಿಸಲಾಗಿದೆ. ರೊಕ್ಲಾ, ಪೋಲೆಂಡ್ (73.485%) ಕ್ರೋನೆನ್‌ಬರ್ಗ್, ನೆದರ್ಲ್ಯಾಂಡ್ಸ್ (74.4%), ಫ್ರಾಂಕ್‌ಫರ್ಟ್, ಜರ್ಮನಿ (72.9%), ಮತ್ತು ಮೆಚೆಲೆನ್, ಬೆಲ್ಜಿಯಂ (74.2%) ಆಟಗಳನ್ನು ಪರಿಗಣಿಸಲಾಗಿದೆ. ರಾಷ್ಟ್ರೀಯ ಒಕ್ಕೂಟವು ಅಂತಿಮ ಹೆಸರನ್ನು ಸಂಘಟಕರಿಗೆ ಕಳುಹಿಸುವ ಮೊದಲು ಫೈನಲ್​​ ಟ್ರಯಲ್​ ನಡೆಸಲಿದೆ.

"ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ನಾನು ಬಹಳ ಹೆಮ್ಮೆ ಪಡುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಬಾಲ್ಯದ ಕನಸು ಮತ್ತು ರಾಷ್ಟ್ರಕ್ಕಾಗಿ ಈ ಐತಿಹಾಸಿಕ ಕ್ಷಣದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ" ಎಂದು 24ರ ಹರೆಯದ ಅಗರ್‌ವಾಲಾ ತಿಳಿಸಿದ್ದಾರೆ. ಯುವ ಕುದುರೆ ಸವಾರ ಈ ಕೋಟಾವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಶಿಸಿದ್ದಾರೆ.

"ನನ್ನ ಕೆಲಸಗಳನ್ನು ಮುಂದುವರಿಸುತ್ತೇನೆ. ಏಕಾಗ್ರತೆ, ಶಿಸ್ತು, ಕಠಿಣ ಕೆಲಸ ಮತ್ತು ಗುರಿಯತ್ತ ಗಮನ ಹರಿಸಿ ಅವುಗಳನ್ನು ಸಾಧಿಸುತ್ತೇನೆ. ಈ ಪ್ರತಿಷ್ಠಿತ ಹಂತದಲ್ಲಿ ಭಾರತವನ್ನು ಪ್ರತಿನಿಧಿಸಲು ನಾನು ಆಯ್ಕೆಯಾಗುತ್ತೇನೆ ಎಂದು ನನಗೆ ವಿಶ್ವಾಸವಿದೆ" ಎಂದು ಅಗರ್‌ವಾಲಾ ತಿಳಿಸಿದ್ದಾರೆ. ಇಎಫ್‌ಐನ ಪ್ರಧಾನ ಕಾರ್ಯದರ್ಶಿ ಜೈವೀರ್ ಸಿಂಗ್ ಅವರು ಯುವ ಕುದುರೆ ಸವಾರನನ್ನು ಅಭಿನಂದಿಸಿದ್ದಾರೆ.

"ಡ್ರೆಸ್ಸೇಜ್ ಈವೆಂಟ್‌ನಲ್ಲಿ ವೈಯಕ್ತಿಕ ಕೋಟಾ ಹಂಚಿಕೆ ಕುರಿತು ನಾವು ಇಂದು ಎಫ್‌ಇಐನಿಂದ ಅಧಿಕೃತ ಮಾಹಿತಿ ಪಡೆದುಕೊಂಡಿದ್ದೇವೆ. ಎಫ್‌ಇಐ ಈವೆಂಟ್‌ಗಳಲ್ಲಿ ಅನುಷ್ ಭಾರತದ ಕೋಟಾವನ್ನು ಪಡೆದಿರುವುದು ಹೆಮ್ಮೆಯ ವಿಷಯ" ಎಂದು ಜೈವೀರ್ ತಿಳಿಸಿದರು. "ಭಾರತೀಯ ಸವಾರರು ಮುನ್ನುಗ್ಗುತ್ತಿದ್ದಾರೆ. ಈ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಭಾರತ ಪ್ರಾತಿನಿಧ್ಯವನ್ನು ಹೊಂದುವುದರಲ್ಲಿ ಆಶ್ಚರ್ಯವೇನಿಲ್ಲ'' ಎಂದು ಜೈವೀರ್ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ ಕಡೆಗಣಿಸುವುದು ಒಳ್ಳೆಯದಲ್ಲ: ಆಟಗಾರರಿಗೆ ಜಯ್ ಶಾ ಎಚ್ಚರಿಕೆ

ಫಾವುಡಾ ಮಿರ್ಜಾ 2020ರ ಟೋಕಿಯೋ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರಿಗಿಂತ ಮೊದಲು ಇಮ್ತಿಯಾಜ್ ಅನೀಸ್ (2000), ಇಂದ್ರಜಿತ್ ಲಂಬಾ (1996) ಮತ್ತು ದರ್ಯಾ ಸಿಂಗ್ (1980) ಅವರು ಮಾತ್ರ ಉನ್ನತ ಮಟ್ಟದ ಕ್ರೀಡಾ ಹಂತದಲ್ಲಿ ಸ್ಪರ್ಧಿಸಬಹುದಾಗಿತ್ತು. ಇದೀಗ ಅನುಷ್ ಅಗರ್‌ವಾಲಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: 3ನೇ ಟೆಸ್ಟ್​: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ 434 ರನ್​ಗಳ ಜಯ; ಟೆಸ್ಟ್​ ಇತಿಹಾಸದಲ್ಲೇ ದೊಡ್ಡ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.