3ನೇ ಟೆಸ್ಟ್​: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ 434 ರನ್​ಗಳ ಜಯ; ಟೆಸ್ಟ್​ ಇತಿಹಾಸದಲ್ಲೇ ದೊಡ್ಡ ಗೆಲುವು

author img

By PTI

Published : Feb 18, 2024, 5:07 PM IST

Updated : Feb 18, 2024, 7:06 PM IST

ಇಂಗ್ಲೆಂಡ್​ ವಿರುದ್ದ ಭಾರತಕ್ಕೆ 434 ರನ್​ಗಳ ಜಯ

ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ನಲ್ಲಿ ಭಾರತ ದೊಡ್ಡ ಅಂತರದ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ರಾಜ್​ಕೋಟ್: ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ನಲ್ಲಿ ಭಾರತ 434 ರನ್​ಗಳ ಗೆಲುವು ಸಾಧಿಸಿದೆ. ಇದು ಟೆಸ್ಟ್​ ಇತಿಹಾಸದಲ್ಲೇ ಭಾರತದ ಅತಿ ದೊಡ್ಡ ಅಂತರದ ಗೆಲುವಾಗಿದೆ.

ರಾಜ್‌ಕೋಟ್‌ನ ಸೌರಾಷ್ಟ್ರ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌​ನಲ್ಲಿ 430 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು 557 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 122 ರನ್ ಗಳಿಸಿ ಸರ್ವಪತನ ಕಾಣುವ ಮೂಲಕ ಸೋಲನುಭವಿಸಿತು. ಅಲ್ಲದೆ ಇದು ಇಂಗ್ಲೆಂಡ್‌ನ ಎರಡನೇ ಅತಿ ದೊಡ್ಡ ಅಂತರದ ಸೋಲಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ದ 562 ರನ್​ಗಳಿಂದ ಸೋಲನ್ನು ಕಂಡಿದ್ದರು. 5 ಟೆಸ್ಟ್​ಗಳ​ ಸರಣಿಯಲ್ಲಿ​ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಪರ ಜೈಸ್ವಾಲ್​ ಅಜೇಯವಾಗಿ ದ್ವಿಶತಕ ಸಿಡಿಸಿದರೇ, ಶುಭಮನ್​ ಗಿಲ್​9 ರನ್​ಗಳಿಂದ ಶತಕ ವಂಚಿತರಾದರು. ಬೌಲಿಂಗ್​ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 5, ಕುಲದೀಪ್ ಯಾದವ್​ 2 ವಿಕೆಟ್ ಪಡೆದರು. ಬುಮ್ರಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಟೆಸ್ಟ್​ನಲ್ಲಿ ಭಾರತದ ದೊಡ್ಡ ಅಂತರದ ಗೆಲುವುಗಳು

434 ರನ್​ಗಳ ಗೆಲುವು​ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್ 2024
372 ರನ್​ಗಳ ಗೆಲುವು ನ್ಯೂಜಿಲೆಂಡ್​ ವಿರುದ್ಧ ಮುಂಬೈ 2021
337 ರನ್​ಗಳ ಗೆಲುವು ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿ 2015
321 ರನ್​ಗಳ ಗೆಲುವು ನ್ಯೂಜಿಲೆಂಡ್ ವಿರುದ್ಧ ಇಂದೋರ್ 2016
320 ರನ್​ಗಳ ಗೆಲುವು ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ 2008

ಇಂಗ್ಲೆಂಡ್​ನ ಅತಿ ದೊಡ್ಡ ಅಂತರದ ಸೋಲು

562 ರನ್‌ಗಳು ಆಸ್ಟ್ರೇಲಿಯಾ ವಿರುದ್ಧ ಓವಲ್ ಮೈದಾನ 1934
434 ಭಾರತ ವಿರುದ್ಧ ರಾಜ್‌ಕೋಟ್ 2024
425 ವೆಸ್ಟ್​ಇಂಡಿಸ್​ ವಿರುದ್ಧ ಮ್ಯಾಂಚೆಸ್ಟರ್ 1976
409 ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್ 1948
405 ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್ 2015

ಸರಣಿಯ ನಾಲ್ಕನೇ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ - ಸರ್ಫರಾಜ್ ತಂದೆಗೆ ಥಾರ್ ಕಾರು ಗಿಫ್ಟ್: ಆನಂದ್ ಮಹೀಂದ್ರಾ ಘೋಷಣೆ

Last Updated :Feb 18, 2024, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.