ETV Bharat / health

ಮೆದುಳಿನ ಆರೋಗ್ಯ ರಕ್ಷಣೆಗೆ ಕೇಂದ್ರದಿಂದ ಕಾರ್ಯಪಡೆ ರಚನೆ - National Task Force on Brain Health

author img

By PTI

Published : Apr 20, 2024, 5:03 PM IST

BRAIN HEALTH
BRAIN HEALTH

ಕಳೆದ ಮೂರು ದಶಕಗಳಿಂದ ನರವೈಜ್ಞಾನಿಕ ಸಮಸ್ಯೆಗಳ ಹೆಚ್ಚಳ ಕಂಡ ಹಿನ್ನೆಲೆ ಈ ಕುರಿತು ಟಾಸ್ಕ್​ ಫೋರ್ಸ್​ ಅನ್ನು ಸರ್ಕಾರ ರಚಿಸಿದೆ.

ನವದೆಹಲಿ: ಮೆದುಳಿನ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಕಾರ್ಯಪಡೆಯನ್ನು ರಚಿಸುವ ಮೂಲಕ ಮೆದುಳಿನ ಆರೋಗ್ಯ ರಕ್ಷಣೆಯ ಪ್ರವೇಶ ಮತ್ತು ಗುಣಮಟ್ಟವನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸುಧಾರಿಸಲಿದೆ.

ಮಿದುಳಿನ ಆರೋಗ್ಯವು ಉದಯೋನ್ಮುಖ ಮತ್ತು ಬೆಳೆಯುತ್ತಿರುವ ಪರಿಕಲ್ಪನೆಯಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಭಾಗವಾಗಿ ಮತ್ತು ಎಸ್​ಡಿಜಿಗಳನ್ನು ಸಾಧಿಸಲು ಎಲ್ಲರಿಗೂ ಮೆದುಳಿನ ಆರೋಗ್ಯವನ್ನು ಒದಗಿಸಲು ಮತ್ತು ತಡೆಗಟ್ಟುವ, ಪ್ರಚಾರ ಮತ್ತು ಪುನರ್ವಸತಿ ಡೊಮೇನ್‌ಗಳನ್ನು ಒಳಗೊಂಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಂಗವೈಕಲ್ಯತೆಗೆ ಕಾರಣ ನರವೈಜ್ಞಾನಿಕ ವ್ಯವಸ್ಥೆಗಳ ಅಸ್ವಸ್ಥತೆಯಾಗಿದ್ದು, ಇದು ಜೀವನ ವರ್ಷಗಳ ಹೊಂದಣಿಕೆ ಮಾಡುವ ಜೊತೆಗೆ ಜಾಗತಿಕವಾಗಿ ಸಾವಿಗೆ ಕಾರಣವಾಗುತ್ತಿರುವ ಎರಡನೇ ಕಾರಣವಾಗಿದೆ. ಇದರಿಂದ ವರ್ಷಕ್ಕೆ 9 ಮಿಲಿಯನ್​ ಜನರು ಸಾವನ್ನಪ್ಪುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಭಾರತದಲ್ಲಿನ ಬಹುತೇಕ ಅಧ್ಯಯನಗಳು ಪಾರ್ಶ್ವವಾಯು, ಅಪಸ್ಮಾರ, ತಲೆ ನೋವು, ಪಾರ್ಕಿನ್ಸನ್​ ಮತ್ತು ಡೆಮನ್ಶಿಯಗಳ ಹೊರೆ ಕುರಿತು ತಿಳಿಸುತ್ತಿವೆ. ಈ ಸಮಸ್ಯೆಗಳು ನಗರದ ಜನಸಂಖ್ಯೆಯಲ್ಲಿ ಹೆಚ್ಚು ವರದಿಯಾಗುತ್ತಿವೆ.

ರಾಷ್ಟ್ರೀಯ ಆರೋಗ್ಯ ಕಾಳಜಿ ಲಭ್ಯತೆ ಸುಧಾರಣೆಯಲ್ಲಿನ ಪ್ರಗತಿ ಹೊರತಾಗಿ, ವಯಸ್ಸು ಸ್ಥಿತಿ, ಭೌಗೋಳಿಕತೆ ಮತ್ತು ಲಿಂಗಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಆಧಾರಿತವಾಗಿದೆ. ಈ ಸಮಸ್ಯೆಗಳಿಂದ ರಕ್ಷಣೆ, ತಡೆಗಟ್ಟುವಿಕೆ, ಸರಿಯಾದ ಕಾಳಜಿ ಮತ್ತು ಪುನರ್ವಸತಿ ಮೂಲಕ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು. ಭಾರತದಲ್ಲಿ ನರವೈಜ್ಞಾನಿಕ ಆರೋಗ್ಯ ಮತ್ತು ಚೇತರಿಕೆ, ರಕ್ಷಣೆಯ ಸೇವೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ.

ನರ ಸಮಸ್ಯೆ ಆರೈಕೆ ಕ್ಷೇತ್ರದ ತಾಂತ್ರಿಕ ತಜ್ಞರ ಮತ್ತು ಸಂಬಂಧ ಪಟ್ಟ ಇಲಾಖೆಯ ವಿಶ್ಲೇಷಣೆಯ ಶಿಫಾರಸಿನ ಅನುಸಾರ ರಾಷ್ಟ್ರೀಯ ಮೆದುಳಿನ ಆರೋಗ್ಯ ರಕ್ಷಣೆ ಕಾರ್ಯಪಡೆ ರಚಿಸಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರಾದೇಶಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಮೆದುಳಿನ ಆರೋಗ್ಯದ ಗುಣಮಟ್ಟ ಮತ್ತು ಲಭ್ಯತೆಗಳನ್ನು ಸುಧಾರಿಸಲು ಇದನ್ನೂ ಶಿಫಾರಸು ಮಾಡಲಾಗಿದೆ.

ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ನರವೈಜ್ಞಾನಿಕ ಸಮಸ್ಯೆಗಳಿರುವ ರೋಗಿಗಳಿಗೆ ಪರಿಣಾಮಕಾರಿ, ಸಮಯೋಚಿತ ರೋಗ ನಿರ್ಣಯ, ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸುವುದು. ನರವೈಜ್ಞಾನಿಕ ಸಮಸ್ಯೆಗಳ ಪ್ರಚಾರ, ನಿರ್ವಹಣೆ ಮತ್ತು ತಡೆಗಟ್ಟುವಿಕೆಗಾಗಿ ಕಾರ್ಯತಂತ್ರಗಳನ್ನು ರೂಪಿಸಲು, ರಚನಾತ್ಮಕ ವ್ಯವಸ್ಥೆಯನ್ನು ಬಲಪಡಿಸಲು ಈ ಟಾಸ್ಕ್​ಫೋರ್ಸ್​​​ ನಿರ್ದಿಷ್ಟ ಕ್ರಮವನ್ನು ಶಿಫಾರಸು ಮಾಡುತ್ತದೆ.

ನರವೈಜ್ಞಾನಿಕ ಪರಿಸ್ಥಿತಿಗಳೊಂದಿಗೆ ವಾಸಿಸುವ ವ್ಯಕ್ತಿಗಳಿಗೆ ಒಟ್ಟಾರೆ ಯೋಗಕ್ಷೇಮ ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸೇವೆಗಳು ಮತ್ತು ಮಧ್ಯಸ್ಥಿಕೆಗಳನ್ನು ಒದಗಿಸಲು ಬೆಂಬಲ ಪುನರ್ವಸತಿ ಮೂಲಸೌಕರ್ಯ ವ್ಯವಸ್ಥೆಯನ್ನು ರಚಿಸುವ ಮಾರ್ಗಗಳನ್ನು ಈ ಟಾಸ್ಕ್​ಫೋರ್ಸ್​​ ಶಿಫಾರಸು ಮಾಡುತ್ತದೆ. ಜುಲೈ 15ಕ್ಕೆ ಟಾಸ್ಕ್​ ಫೋರ್ಸ್​ ವರದಿ ಸಲ್ಲಿಸಲಿದೆ.

ಇದನ್ನೂ ಓದಿ: ರಾಸಾಯನಿಕ ಸಂಕೇತದ ಜೊತೆಗೆ ಮಿದುಳಿನ ಆರೋಗ್ಯ ಸುಧಾರಣೆಗೆ ವ್ಯಾಯಾಮ ಪರಿಣಾಮಕಾರಿ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.