ETV Bharat / health

myCGHS ಐಒಎಸ್​ ಆ್ಯಪ್​ ಬಿಡುಗಡೆ ಮಾಡಿದ ಕೇಂದ್ರ; ಇದೀಗ ಬೆರಳ ತುದಿಯಲ್ಲೇ ಪಡೆಯಬಹುದು ಆರೋಗ್ಯ ಸೇವೆ - Govt Launches myCGHS iOS App

author img

By ETV Bharat Karnataka Team

Published : Apr 4, 2024, 12:12 PM IST

ministry-of-health-and-family-welfare-launched-the-mycghs-app-for-the-ios-ecosystem
ministry-of-health-and-family-welfare-launched-the-mycghs-app-for-the-ios-ecosystem

myCGHS ಮೂಲಕ ಫಲಾನುಭವಿಗಳಿಗೆ ಇದೀಗ ತಾವು ಕುಳಿತಲ್ಲಿಂದಲೇ ಆರೋಗ್ಯ ಸೇವೆ ಕುರಿತು ಮಾಹಿತಿ ಪಡೆಯಬಹುದಾಗಿದೆ.

ನವದೆಹಲಿ: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಫಲಾನುಭವಿಗಳು ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ, ಮಾಹಿತಿ ಮತ್ತು ಸೇವೆಯನ್ನು ಕೈ ಬೆರಳ ತುದಿಯಲ್ಲೇ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಐಒಎಸ್‌ಗಾಗಿ myCGHS ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

myCGHS ಐಒಎಸ್​ ಆ್ಯಪ್​ ಅನ್ನು ಹಿಮಾಚಲ ಪ್ರದೇಶದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ)ದ ತಾಂತ್ರಿಕ ತಂಡ ಮತ್ತು ಎನ್​ಐಸಿ ಆರೋಗ್ಯ ತಂಡ ಅಭಿವೃದ್ಧಿಪಡಿಸಿದೆ. ಈ ಸುಲಭದಾಯಕ ಅಪ್ಲಿಕೇಷನ್​​ ಅನೇಕ ವೈಶಿಷ್ಟ್ಯ ಹೊಂದಿದ್ದು, ಸಿಜಿಎಚ್​ಎಸ್​ ಫಲಾನುಭವಿಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಪ್ರವೇಶವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಈ ಆ್ಯಪ್​ ಬಿಡುಗಡೆ ಬಳಿಕ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ, myCGHS ಆ್ಯಪ್​​ ಕೇಂದ್ರ ಸರ್ಕಾರದ ಆರೋಗ್ಯ ಸೇವೆಯು ಅಗತ್ಯವಾಗಿದೆ. ಇದು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್​ಎಸ್​) ಫಲನಾಭವಿಗಳನ್ನು ಸಬಲೀಕರಣ ಮಾಡುವ ಜೊತೆಗೆ ಅವರ ಬೆರಳ ತುದಿಯಲ್ಲಿ ಆರೋಗ್ಯ ಸೇವೆ ಕುರಿತ ಅಗತ್ಯ ಸೌಲಭ್ಯದ ಮಾಹಿತಿ ಪಡೆಯಬಹುದಾಗಿದೆ. ತಂತ್ರಜ್ಞಾನದ ಬಳಕೆ ಮೂಲಕ ಆರೋಗ್ಯ ಸೇವೆಯ ಲಭ್ಯತೆ ಮತ್ತು ಗುಣಮಟ್ಟದ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದೆ

ಫಲಾನುಭವಿಗಳಿಗೆ ಲಭ್ಯವಿದೆ ಈ ಸೌಲಭ್ಯ: myCGHS ಆ್ಯಪ್​ ವಿಶಾಲ ದೃಷ್ಟಿಯ ಸೇವೆ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ ವೈದ್ಯರ ಅಪಾಯಿಂಟ್​ಮೆಂಟ್​ ಅನ್ನು ಆನ್​ಲೈನ್​ ಮೂಲಕವೇ ಬುಕ್​ ಮತ್ತು ಕ್ಯಾನ್ಸಲ್​ ಮಾಡುವ ಸೌಲಭ್ಯ ಕಲ್ಪಿಸುತ್ತದೆ. ಸಿಜಿಎಚ್​ಎಸ್​ ಕಾರ್ಡ್​​ ಡೌನ್​ಲೋಡಿಂಗ್​, ಸೂಚ್ಯಂಕ ದರ, ಸಿಜಿಎಚ್​ಎಸ್​ ಲ್ಯಾಬ್​ ಮೂಲಕ ಲ್ಯಾಬ್​ ವರದಿ ಪಡೆಯುವಿಕೆ, ಔಷಧಗಳ ಇತಿಹಾಸ ಪತ್ತೆ, ವೈದ್ಯಕೀಯ ಮರುಪಾವತಿ ಕುರಿತ ಮಾಹಿತಿ, ಶಿಫಾರಸುಗಳ ಮಾಹಿತಿ ಲಭ್ಯತೆ, ಹತ್ತಿರದಲ್ಲಿನ ವೆಲ್​ನೆಸ್​ ಸೆಂಟರ್​​ ಪತ್ತೆ ಜೊತೆಗೆ ಸುದ್ದಿ ಮತ್ತು ಮುಖ್ಯಾಂಶದ ಕುರಿತು ಮಾಹಿತಿ ನೀಡುತ್ತದೆ. ಇನ್ನು ಹತ್ತಿರದಲ್ಲಿನ ಆಸ್ಪತ್ರೆ, ಲ್ಯಾಬ್​ ಮತ್ತು ಡೆಂಟಲ್​ ಘಟಕ ಮತ್ತು ವೆಲ್​ನೆಸ್​ ಕೇಂದ್ರ ಮತ್ತು ಕಚೇರಿಯ ಸಂಪರ್ಕದ ಮಾಹಿತಿಯನ್ನು ಈ ಆ್ಯಪ್​​​ ನಿಮಗೆ ಬೆರಳ ತುದಿಯಲ್ಲೇ ನೀಡುತ್ತದೆ. ​

ಈ ಆ್ಯಪ್​ ಎರಡು ಹಂತದ ದೃಢೀಕರಣ ಮತ್ತು ಕಾರ್ಯಾಚರಣೆಯ ಸೆಕ್ಯೂರಿಟಿ ಫೀಚರ್​​ ಅನ್ನು ಕೂಡಾ​ ಹೊಂದಿದೆ. ಎಂಪಿನ್​ ಮೂಲಕ ಬಳಕೆದಾರರ ಆರೋಗ್ಯ ಮಾಹಿತಿಯ ಗೌಪತ್ಯೆ ಕಾಪಾಡಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

myCGHS ಆ್ಯಪ್​ ಇದೀಗ ಐಒಎಸ್​ ಮತ್ತು ಆ್ಯಂಡ್ರಾಯ್ಡ್​​ ​​ ಫ್ಲಾಟ್​ಫಾರ್ಮ್​ನಲ್ಲಿ ಡೌನ್​ಲೋಡ್​​ಗೆ ಲಭ್ಯವಿದ್ದು, ಉಚಿತವಾಗಿ ಇದನ್ನು ಪಡೆಯಬಹುದಾಗಿದೆ. ಸಿಜಿಎಚ್​ಎಸ್​​ ಫಲಾನುಭವಿಗಳು ಈ ಹೊಸ ತಂತ್ರಜ್ಞಾನದ ಮೂಲಕವಾಗಿ ಅಪರಿಮಿತ ಆರೋಗ್ಯ ಸೇವೆ ಪಡೆಯಲು ಉತ್ತೇಜಿಸಲಾಗುವುದು.

ಇದನ್ನೂ ಓದಿ: ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಸದಸ್ಯರ ಸಂಖ್ಯೆ ಎಷ್ಟು..? ಸರ್ಕಾರದ ಮಾರ್ಗಸೂಚಿಯಲ್ಲೇನಿದೆ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.