ETV Bharat / health

ಮಕ್ಕಳಲ್ಲಿ ಕಡಿಮೆ ತೂಕದ ದರ ಇಳಿಕೆ; ಸ್ಥೂಲಕಾಯತೆ 4 ಪಟ್ಟು ಹೆಚ್ಚಳ-ಲ್ಯಾನ್ಸೆಟ್​ ವರದಿ

author img

By PTI

Published : Mar 1, 2024, 10:00 PM IST

ಮಕ್ಕಳು ಮತ್ತು ಹದಿಹರೆಯದವರನ್ನು ಕಾಡುತ್ತಿದ್ದ ಅಪೌಷ್ಟಿಕತೆ ಕಡಿಮೆಯಾಗಿದ್ದು, ಸ್ಥೂಲಕಾಯತೆ ಹೆಚ್ಚಾಗಿ ಕಾಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.

12-dot-5-mn-children-teens-in-india-obese-in-2022-lancet-study
12-dot-5-mn-children-teens-in-india-obese-in-2022-lancet-study

ನವದೆಹಲಿ: 2022ರಲ್ಲಿ ಭಾರತದಲ್ಲಿ 5ರಿಂದ 19 ವರ್ಷದ 12.5 ಮಿಲಿಯನ್​ ಮಕ್ಕಳು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಇದರಲ್ಲಿ 7.3 ಮಿಲಿಯನ್​ ಹುಡುಗರಾದರೆ, 5.2 ಮಿಲಿಯನ್​ ಹುಡುಗಿಯರು ಎಂದು ದಿ ಲ್ಯಾನ್ಸೆಟ್​ ಜರ್ನಲ್​ ವರದಿ ತಿಳಿಸಿದೆ.

ಜಾಗತಿಕವಾಗಿ ಅಧಿಕ ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರು ಹಾಗೂ ವಯಸ್ಕರ ಸಂಖ್ಯೆ 1 ಬಿಲಿಯನ್​ ದಾಟಿದೆ. ಸ್ಥೂಲಕಾಯ ಮತ್ತು ಕಡಿಮೆ ತೂಕ ಎರಡು ಅಪೌಷ್ಟಿಕಾಂಶದ ಎರಡು ರೂಪ. ಇದು ಜನರ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇತ್ತೀಚಿನ ಅಧ್ಯಯನವು ಕಳೆದ 33 ವರ್ಷಗಳ ಅಪೌಷ್ಟಿಕಾಂಶದ ಎರಡೂ ರೂಪದ ಕುರಿತು ವಿವರವಾದ ಚಿತ್ರಣ ನೀಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಅಂದಾಜಿಸಿದಂತೆ ಜಾಗತಿಕವಾಗಿ ಮಕ್ಕಳು ಮತ್ತು ಹದಿಹರೆಯದವರ ಸ್ಥೂಲಕಾಯತೆ ದರ 1990ರ ದರಕ್ಕೆ ಹೋಲಿಸಿದಾಗ 2022ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. 1990ರಲ್ಲಿ ವಯಸ್ಕರಲ್ಲಿ ಹೆಚ್ಚಿದ್ದ ಸ್ಥೂಲಕಾಯತೆ ಇದೀಗ ಶಾಲಾ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯತೆ ಸಾಂಕ್ರಾಮಿಕತೆ ಹೆಚ್ಚುತ್ತಿರುವುದು ಕಾಳಜಿಯ ವಿಚಾರ ಎಂದು ಯುಕೆಯ ಇಂಪಿರಿಯಲ್​ ಕಾಲೇಜ್​​ ಲಂಡನ್​ನ ಪ್ರೊ.ಮಜಿದ್​ ಎಜ್ಜಾತಿ ತಿಳಿಸಿದ್ದಾರೆ.

ಅಪೌಷ್ಟಿಕತೆ ಸಮಸ್ಯೆ: ಇದೇ ವೇಳೆ ಜಾಗತಿಕವಾಗಿ ನೂರಾರು ಮಿಲಿಯನ್​ ಮಂದಿಯನ್ನು ಅಪೌಷ್ಟಿಕತೆ ಕೂಡ ಕಾಡುತ್ತದೆ. ವಿಶೇಷವಾಗಿ ಜಗತ್ತಿನ ಬಡ ಪ್ರದೇಶದಲ್ಲಿ ಈ ಬೆಳವಣಿಗೆ ಹೆಚ್ಚು. ವಯಸ್ಕರಲ್ಲಿ ಜಾಗತಿಕ ಸ್ಥೂಲಕಾಯತೆ ದರದಲ್ಲಿ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚಾದರೆ, ಪುರುಷರಲ್ಲಿ ಮೂರು ಪಟ್ಟು ಅಧಿಕವಾಗಿದೆ. ಒಟ್ಟಾರೆ 2022ರಲ್ಲಿ 159 ಮಿಲಿಯನ್​ ಮಕ್ಕಳು ಮತ್ತು ಹದಿಹರೆಯದವರು ಮತ್ತು 879 ಮಿಲಿಯನ್​ ವಯಸ್ಕರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

ಭಾರತದಲ್ಲಿ ವಯಸ್ಕರ ಸ್ಥೂಲಕಾಯತೆ 1990ರಲ್ಲಿ 1.2ರಷ್ಟಿದ್ದರೆ, 2022ರಲ್ಲಿ 9.8ರಷ್ಟಿದೆ. ಮಹಿಳೆಯರಲ್ಲಿ 0.5ರಷ್ಟಿದ್ದರೆ, ಪುರುಷರಲ್ಲಿ 5.4ರಷ್ಟಿದೆ. 2022ರಲ್ಲಿ 44 ಮಿಲಿಯನ್​ ಮಹಿಳೆಯರು ಮತ್ತು 26 ಮಿಲಿಯನ್​ ಪುರುಷರು ಸ್ಥೂಲಕಾಯತೆ ಹೊಂದಿರುವ ಅಂಕಿಅಂಶವಿದೆ.

ಕಡಿಮೆ ತೂಕ ದರ ಇಳಿಕೆ: 1990 ಮತ್ತು 2022ರ ನಡುವೆ ಜಾಗತಿಕವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಡಿಮೆ ತೂಕದಿಂದ ಬಳಲುತ್ತಿರುವ ಸಂಖ್ಯೆ ಕಡಿಮೆಯಾಗಿದೆ. ಬಾಲಕರಲ್ಲಿ ಮೂರನೇ ಒಂದು ಭಾಗ ಮತ್ತು ಬಾಲಕಿಯರಲ್ಲಿ ಐದನೇ ಒಂದು ಪ್ರಮಾಣದಲ್ಲಿ ಈ ಸಮಸ್ಯೆಗೆ ತುತ್ತಾಗಿದ್ದಾರೆ. 1990ರಲ್ಲಿದ್ದ 0.1ರಷ್ಟಿದ್ದ ಸ್ಥೂಲಕಾಯತೆ ದರ 2022ರಲ್ಲಿ 3.1ರಷ್ಟಾಗಿದೆ. ಹುಡುಗಿಯರಲ್ಲಿ 0.1ರಷ್ಟಾದರೆ, ಹುಡುಗರಲ್ಲಿ 3.9ರಷ್ಟಾಗಿದೆ.

ಈ ಅಧ್ಯಯನಕ್ಕಾಗಿ ಸಂಶೋಧಕರು, 190 ದೇಶದಲ್ಲಿ ಪ್ರತಿನಿಧಿಸಿದ್ದು, ಐದು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 220 ಮಿಲಿಯನ್‌ಗಿಂತ ಹೆಚ್ಚಿನ ಜನರ ತೂಕ ಮತ್ತು ಎತ್ತರದ ಮಾಪನ ಮಾಡಿ ವಿಶ್ಲೇಷಿಸಿದ್ದಾರೆ. 1,500 ಸಂಶೋಧಕರು ಈ ಅಧ್ಯಯನಕ್ಕೆ ಕೆಲಸ ಮಾಡಿದ್ದು, ಅವರು ಬಿಎಂಐ ಮೂಲಕ 1990 ರಿಂದ 2022ರವರೆಗೆ ಜಾಗತಿಕವಾಗಿ ಸ್ಥೂಲಕಾಯ ಮತ್ತು ಕಡಿಮೆ ತೂಕದ ಬದವಾಣೆ ಗಮನಿಸಿದ್ದಾರೆ.

1990ರಿಂದ 2022ರವೆಗೆ ಜಾಗತಿಕವಾಗಿ ಎಲ್ಲಾ ದೇಶದಲ್ಲಿ ಸ್ಥೂಲಕಾಯದ ದರವು ಹುಡುಗ ಮತ್ತು ಹುಡುಗಿಯರಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. 1999ರಲ್ಲಿ 10.3ರಷ್ಟಿದ್ದ ಕಡಿಮೆ ತೂಕವು ಹುಡುಗಿಯರಲ್ಲಿ 2022ರಲ್ಲಿ 8.2ರಷ್ಟಿದೆ. ಹುಡುಗರಲ್ಲಿ ಈ ದರ ಕ್ರಮವಾಗಿ 16.7ರಿಂದ 10.8ಕ್ಕೆ ಇಳಿಕೆ ಕಂಡಿದೆ.

44 ದೇಶದಲ್ಲಿ ಕಡಿಮೆ ತೂಕದ ದರದಲ್ಲಿ ಇಳಿಕೆಯಾಗಿದೆ. 2022ರಲ್ಲಿ ಸರಿಸುಮಾರು 160 ಮಿಲಿಯನ್​ ಮಕ್ಕಳು ಮತ್ತು ಹದಿಹರೆಯದವರು ಸ್ಥೂಲಕಾಯತೆ ಪರಿಣಾಮಕ್ಕೆ ಒಳಗಾಗಿದ್ದಾರೆ. 2022ರಲ್ಲಿ 77 ಮಿಲಿಯನ್​ ಹುಡುಗಿಯರು ಮತ್ತು 108 ಹುಡುಗರು ಕಡಿಮೆ ತೂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಭಾರತದ 12.5 ಮಿಲಿಯನ್​ ಮಕ್ಕಳಲ್ಲಿ, ಜಾಗತಿಕವಾಗಿ 8ರಲ್ಲಿ ಒಬ್ಬರಿಗೆ ಸ್ಥೂಲಕಾಯ ಸಮಸ್ಯೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.