ETV Bharat / entertainment

'ದಸರಾ' ತಂಡದಿಂದ ಮತ್ತೊಂದು ಸಿನಿಮಾ: ರಗಡ್‌ ಲುಕ್‌ನಲ್ಲಿ ನಾನಿ, ಫಸ್ಟ್‌ ಲುಕ್‌ ರಿವೀಲ್ - Nani Movie

author img

By ETV Bharat Karnataka Team

Published : Apr 1, 2024, 7:16 PM IST

Tollywood actor Nani is a new movie
ಟಾಲಿವುಡ್ ನಟ ನಾನಿ ಅಭಿನಯದ ಹೊಸ ಸಿನಿಮಾ

ದಸರಾ ಸಿನಿಮಾ ಬಳಿಕ ನಿರ್ದೇಶಕ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ಟಾಲಿವುಡ್ ನಟ ನಾನಿ ಮತ್ತೆ ಒಂದಾಗಿದ್ದಾರೆ. ಸದ್ಯ ಸಿನಿಮಾಗೆ 'ನಾನಿ 33' ಎಂದು ಟೈಟಲ್ ಇಡಲಾಗಿದೆ.

'ದಸರಾ' ಧಮಾಕ ಬಳಿಕ ನ್ಯಾಚುರಲ್ ಸ್ಟಾರ್ ಖ್ಯಾತಿಯ ನಟ ನಾನಿ ಈಗ ಮತ್ತೊಮ್ಮೆ ಅದೇ ತಂಡದೊಂದಿಗೆ ಕೈ ಜೋಡಿಸಿದ್ದು, ಹೊಸ ಸಿನಿಮಾದಲ್ಲಿ ಅಭಿನಯಿಸಲು ರೆಡಿಯಾಗಿದ್ದಾರೆ. ಟಾಲಿವುಡ್‌ ನಟನಿಗೆ ಇದು 33ನೇ ಸಿನಿಮಾ.

ನಿರ್ದೇಶಕ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಕಾಂಬೋದ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ. ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ರಗಡ್ ಲುಕ್‌ನಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಈ ಪೋಸ್ಟರ್​ನಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ತೋರಿಸಲಾಗಿದೆ. ಕ್ರಾಂತಿ ಪ್ರಾರಂಭವಾಗುವ ಮೊದಲು ಹಿಂಸಾಚಾರವು ಅದರ ಸರಿಯಾದ ರೂಪ ಪಡೆಯುತ್ತದೆ. ಮತ್ತೊಂದು ಪವರ್ ಪ್ಯಾಕ್ಡ್ ಆ್ಯಕ್ಷನ್​​​ನೊಂದಿಗೆ ನಾನಿ ಪರಿಚಯ ಎಂದು ಶ್ರೀಕಾಂತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

ದಸರಾ ತೆರೆಕಂಡು ಒಂದು ವರ್ಷವಾಗಿದೆ. ಈ ಖುಷಿಯಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಸದ್ಯ 'ನಾನಿ 33' ಎಂದು ಟೈಟಲ್ ಇಡಲಾಗಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಮಾಸ್ ಆ್ಯಕ್ಷನ್ ಎಂಟರ್‌ಟೈನರ್ 'ದಸರಾ' ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು.

ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್‌ನಡಿ ಸುಧಾಕರ್ ಚೆರುಕುರಿ ಅವರು ನಾನಿ ನಟನೆಯ 33ನೇ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನಿ ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2025ಕ್ಕೆ ಸಿನಿಮಾ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂಓದಿ: ಆರ್​​​​ಸಿ ಸ್ಟುಡಿಯೋ ಜೊತೆ ಹ್ಯಾಟ್ರಿಕ್ ಹೀರೋ ಹೊಸ ಸಿನಿಮಾ ಘೋಷಣೆ - Shiva Rajkumar new movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.