ETV Bharat / entertainment

ಯೂರೋಪ್​ನಲ್ಲಿ ರಿಯಲ್ ಸ್ಟಾರ್ 'ಯುಐ' ಜಪ - UI movie songs work

author img

By ETV Bharat Karnataka Team

Published : May 22, 2024, 12:32 PM IST

Updated : May 22, 2024, 1:06 PM IST

ನಟ ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ 'ಯುಐ' ಚಿತ್ರದ ಹಾಡುಗಳ ಸೌಂಡ್​​ ಮಿಕ್ಸಿಂಗ್ ಕೆಲಸ ಯೂರೋಪ್​ನಲ್ಲಿ ನಡೆಯುತ್ತಿದೆ.

ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ  'ಯುಐ' ಚಿತ್ರ ತಂಡ ಬ್ಯುಸಿ
ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ 'ಯುಐ' ಚಿತ್ರ ತಂಡ ಬ್ಯುಸಿ (ETV Bharat)

"A"ಇಂದ "UI" ಎಲ್ಲಿಗೆ ಪಯಣ...? (UPENDRA INSTAGRAM VIDEO)

ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಬುದ್ಧಿವಂತ ನಿರ್ದೇಶಕ ಹಾಗೂ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಬರೋಬ್ಬರಿ 7ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಉಪ್ಪಿ ಡೈರೆಕ್ಷನ್ ಅಂದ್ಮೇಲೆ ರೆಗ್ಯೂಲರ್ ಸಿನಿಮಾ ನೋಡುವುದಕ್ಕೆ ಆಗುತ್ತಾ? ಉಪೇಂದ್ರ ಸಿನಿಮಾವನ್ನು ನೋಡುವ ರೀತಿನೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಕೂಡ ಇದನ್ನು ಸಾಬೀತು ಮಾಡಿವೆ. ಈಗ 'ಯುಐ' ಕೂಡ ಉಪೇಂದ್ರ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇವೆ. ಅದಕ್ಕೆ ಸಾಕ್ಷಿ ಎಂಬಂತೆ ರಿವೀಲ್ ಆಗಿರುವ ಟೀಸರ್ ಹಾಗು ಟ್ರೋಲ್ ಸಾಂಗ್.

ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ ಯುಐ ಚಿತ್ರದ ಮೂಲಕ ಒಂದು ಮೆಸೇಜ್ ಹೇಳೋದಿಕ್ಕೆ ಹೊರಟಿದ್ದಾರೆ. ಸದ್ಯ ಟ್ರೋಲ್ ಹಾಡಿನಿಂದ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಈ ಹಾಡಿನಲ್ಲಿ ಹೇಳುವ ಮೂಲಕ ಅಭಿಮಾನಿ ಬಳಗದಲ್ಲಿ ತಲೆಗೆ ಹುಳ ಬಿಟ್ಟಿದ್ದಾರೆ. ಈಗ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಜೊತೆ ಉಪೇಂದ್ರ ಯುರೋಪ್​ನಲ್ಲಿ ಬೀಡು ಬಿಟ್ಟಿದ್ದು, ಯುಐ ಚಿತ್ರದ ಹಾಡುಗಳ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಉಪೇಂದ್ರ ಯುಐ ಚಿತ್ರವನ್ನು ಬಹಳ ವಿಶೇಷವಾಗಿ ತೋರಿಸಬೇಕು ಎಂಬ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುರೋಪ್​ನಲ್ಲಿ ಯುಐ ಚಿತ್ರದ ಸೌಂಡ್​ ಮಿಕ್ಸಿಂಗ್​ ಕೆಲಸದ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಇನ್ನು, ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಯುಐ ದುಬಾರಿ ಇದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೆ, ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಇಷ್ಟೆಲ್ಲಾ ಹೈಲೆಟ್ಸ್​ ಒಳಗೊಂಡಿರುವ ಯುಐ ಚಿತ್ರದ ಟೀಸರ್​ನ್ನು ಕತ್ತಲೆಯಲ್ಲಿ ಹೇಳಲಾಗಿದೆ. ಸಲಗ ಸಿನಿಮಾದ ಬಳಿಕ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗು ನವೀನ್ ಮನೋಹರ್​ ಜೊತೆ ಜಂಟಿಯಾಗಿ ನಿರ್ಮಾಣ ಮಾಡಿರೋ ಯುಐ ಸಿನಿಮಾ ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಯುಐ ಸಿನಿಮಾದ ಮೂಲಕ ಉಪೇಂದ್ರ ಏನು ಹೇಳೋದಿಕ್ಕೆ ಹೊರಟಿದ್ದಾರೆಂಬ ಕುತೂಹಲ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಮಂಚು ಮನೋಜ್ ನಟನೆಯ 'ಮಿರಾಯ್' ಸಿನಿಮಾಗೆ ಕಿಚ್ಚನ ಬೆಂಬಲ - Mirai Movie

Last Updated : May 22, 2024, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.