ETV Bharat / entertainment

'ರಾಮಾಯಣ' ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ: ರಣ್​​ಬೀರ್ ಕಪೂರ್ ಹೆಡ್​ಸ್ಟ್ಯಾಂಡ್ ಫೋಟೋ ವೈರಲ್ - Ranbir Kapoor Headstand

author img

By ETV Bharat Karnataka Team

Published : Mar 24, 2024, 7:18 PM IST

Ranbir Kapoor Headstand
ರಣ್​​ಬೀರ್ ಕಪೂರ್ ಹೆಡ್​ಸ್ಟ್ಯಾಂಡ್

ಬಾಲಿವುಡ್​ ಸೂಪರ್ ಸ್ಟಾರ್ ರಣ್​​ಬೀರ್ ಕಪೂರ್ ಅವರ ಶಿರ್ಷಾಸನ ಫೋಟೋ ಆನ್​ಲೈನ್​ನಲ್ಲಿ ವೈರಲ್​ ಆಗಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರವಿನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸಿನಿಮಾ ಸುತ್ತಲಿನ ಉತ್ಸಾಹ ದೊಡ್ಡ ಮಟ್ಟದಲ್ಲಿದೆ. ಬಾಲಿವುಡ್​ನ ಬಹುಬೇಡಿಕೆ ತಾರೆ ರಣ್​​ಬೀರ್ ಕಪೂರ್ ಭಗವಾನ್​​ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಒಂದು ಊಹೆ. ಯಾವುದು ಕೂಡಾ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಚಿತ್ರತಂಡ ಬರುವ ತಿಂಗಳು ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆಗಳಿವೆ. ನಟ ತಮ್ಮ ಪಾತ್ರಕ್ಕಾಗಿ ಪೂರ್ವ ತಯಾರಿ, ಕಠಿಣ ಅಭ್ಯಾಸ ಮಾಡುತ್ತಿರುವ ಇತ್ತೀಚಿನ ಫೋಟೋವೊಂದು ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಸೂಪರ್​ ಸ್ಟಾರ್ ರಣ್​​ಬೀರ್ ಕಪೂರ್ ಅವರ ಫಿಟ್ನೆಸ್​ ಟ್ರೈನರ್ ನಮ್​ವುಕ್​​ ಕಂಗ್ (Nam-Wook Kang), ನಟನ ವರ್ಕ್​​ಔಟ್​ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ರಣ್​​ಬೀರ್ ಕಪೂರ್ ಜಿಮ್ ವೇರ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಿನ ಫೋಕಸ್ ಮತ್ತು ಡೆಡಿಕೇಶನ್​​​​ನೊಂದಿಗೆ ಅನಿಮಲ್​ ಸ್ಟಾರ್ 'ಹೆಡ್‌ಸ್ಟ್ಯಾಂಡ್' (ಶಿರ್ಷಾಸನ) ಮಾಡುತ್ತಿರುವುದನ್ನು ಕಾಣಬಹುದು. ಈ ಫೋಟೋಗೆ, "ಮೊದಲ ಹೆಡ್‌ಸ್ಟ್ಯಾಂಡ್, ರಾಮಾಯಣ, ನ್ಯೂ ಸ್ಕಿಲ್, ಟ್ರೇನಿಂಗ್‌ ವಿತ್‌ ನಮ್, ಪ್ರಿಪರೇಶನ್​​" ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ರಾಮಾಯಣ ಎಂದು ಉಲ್ಲೇಖಿಸಿರುವುದರಿಂದ ಅಂತೆಕಂತೆಗಳ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಿದೆ.

ಫಿಟ್ನೆಸ್​ ತರಬೇತುದಾರರ ಈ ಪೋಸ್ಟ್, 'ರಾಮಾಯಣ' ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ರಣ್​​​ಬೀರ್ ಕಪೂರ್ ಸಿದ್ಧರಾಗುತ್ತಿರುವ ಸುಳಿವು ಬಿಟ್ಟುಕೊಟ್ಟಿದೆ. ಈ ಪೋಸ್ಟ್ ಶೇರ್ ಆಗುತ್ತಿದ್ದಂತೆ ಅಪಾರ ಸಂಖ್ಯೆಯ ನೆಟ್ಟಿಗರು, ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ್ದಾರೆ. "ನಿಜವಾಗಿಯೂ ಸ್ಫೂರ್ತಿದಾಯಕ", "ಬೆಳ್ಳಿ ಪರದೆ ಮೇಲೆ ಭಗವಾನ್ ರಾಮನ ಪರಿಪೂರ್ಣ ಚಿತ್ರಣ ಸಿದ್ಧತೆಯಲ್ಲಿದೆ" ಎಂಬಂತಹ ಕಾಮೆಂಟ್‌ಗಳನ್ನು ಮಾಡೋ ಮುಖೇನ ಸಿನಿಪ್ರಿಯರು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮಾಯಣ: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸಿದ ಯಶ್​, ರಣ್​ಬೀರ್, ಸಾಯಿ ಪಲ್ಲವಿ - Ramayana

ಹಿಂದೂ ಮಹಾಕಾವ್ಯ 'ರಾಮಾಯಣ' ಆಧಾರಿತ ಬಹುನಿರೀಕ್ಷಿತ ಚಿತ್ರದಲ್ಲಿ ಸೌತ್​​ ಸೂಪರ್ ಸ್ಟಾರ್ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಂಬಲಾಗಿದೆ. ಅದಾಗ್ಯೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಏಪ್ರಿಲ್ 17, ರಾಮನವಮಿ ಸಂದರ್ಭ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ಯಶ್​​ 'ಟಾಕ್ಸಿಕ್'​ನಲ್ಲಿ ಕರೀನಾ, ಸಾಯಿ ಪಲ್ಲವಿ, ಶ್ರುತಿ ಹಾಸನ್​?: 'ಊಹಾಪೋಹದಿಂದ ದೂರವಿರಿ' - Toxic

ರಾಮಾಯಣ ಅಲ್ಲದೇ ನಟ ರಣ್​​ಬೀರ್ ಕಪೂರ್ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಆ್ಯಂಡ್ ವಾರ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದ್ದು, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಕೂಡ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಸಿನಿಮಾ ಬರೋ ವರ್ಷ ಕ್ರಿಸ್ಮಸ್ ಸಂದರ್ಭ ಬಿಡುಗಡೆಯಾಗಲಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್ ಪಾರ್ಕ್‌' ಪ್ರಾಜೆಕ್ಟ್​ ಕೂಡ ನಟನ ಕೈಯಲ್ಲಿದೆ. 2023ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಅನಿಮಲ್​ ಚಿತ್ರದ ಮತ್ತೊಂದು ಭಾಗವಿದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.