ETV Bharat / entertainment

ಕೃಷಿ ತಾಪಂಡ ಮೇಲೆ 'ಜಾಸ್ತಿ ಪ್ರೀತಿ' ಅಂತಿದ್ದಾರೆ ನವಗ್ರಹ ಹೀರೋ! - Jasti Preeti Film

author img

By ETV Bharat Karnataka Team

Published : May 2, 2024, 8:31 AM IST

ಜಾಸ್ತಿ ಪ್ರೀತಿ ಟ್ರೈಲರ್
ಜಾಸ್ತಿ ಪ್ರೀತಿ ಟ್ರೈಲರ್

ಮಿಡಿದ ಹೃದಯಗಳ ಮೌನರಾಗ ಅಡಿ ಬರಹದ ಜಾಸ್ತಿ ಪೀತಿ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.

ನವಗ್ರಹ ಸಿನಿಮಾದಿಂದಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಧರ್ಮಕೀರ್ತಿ ರಾಜ್. ರೋನಿ ಚಿತ್ರದ ಬಳಿಕ ಧರ್ಮಕೀರ್ತಿ ರಾಜ್ ಕ್ಯಾಚೀ ಟೈಟಲ್ ಹೊಂದಿರುವ 'ಜಾಸ್ತಿ ಪ್ರೀತಿ' ಎಂಬ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದಾರೆ. 'ಮಿಡಿದ ಹೃದಯಗಳ ಮೌನರಾಗ' ಎಂಬ ಅಡಿಬರಹವಿರುವ ಜಾಸ್ತಿ ಪ್ರೀತಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ, ಇದೀಗ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕುತೂಹಲ ಕೆರಳಿಸಿದೆ. ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವುದು ಅರುಣ್ ಮಾನವ್.

ಜಾಸ್ತಿ ಪ್ರೀತಿ ಟ್ರೈಲರ್
ಜಾಸ್ತಿ ಪ್ರೀತಿ ಟ್ರೈಲರ್

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ‌ ಅರುಣ್ ಮಾನವ್, ಪ್ರೀತಿಯ ಅವ್ಯಕ್ತಭಾವ ಜಾಸ್ತಿ ಪ್ರೀತಿಯಾಗಿದೆ. ಸಿನಿಮಾ ಹುಟ್ಟಲು ಫೇಸ್‌ಬುಕ್ ಪೇಜ್ ಕಾರಣವಾಗಿದೆ. ಹೀಗೆ ಒಮ್ಮೆ ಎಫ್‌ಬಿ ನೋಡುವಾಗ ಒಂದು ಹುಡುಗಿಯ ಫೋಟೋ ನೋಡಿ ಕರುಳು ಚುರ್ ಅನಿಸಿತು. ಅದರ ಎಳೆಯನ್ನು ತೆಗೆದುಕೊಂಡು ಕಾಲ್ಪನಿಕ ಚಿತ್ರಕಥೆ ಬರೆಯಲಾಯಿತು. ಎಲ್ಲಿಯೂ ನೋಡದೇ ಇರತಕ್ಕಂತ ಪ್ರೀತಿಯನ್ನು ಇದರಲ್ಲಿ ನೋಡಬಹುದು. ಇನ್ನು ಯಾವುದೇ ವ್ಯಕ್ತಿಗೆ ಸಂಬಂದಪಟ್ಟಿರುವುದಿಲ್ಲ. ಬಂದಿರತಕ್ಕಂತ ಕಥೆಗಳು ಇರುವುದಿಲ್ಲ. ಯಾವ ದೃಶ್ಯವು ಹಿಂದಿನ ಚಿತ್ರದಲ್ಲಿ ನೋಡಿದಂತೆ ಭಾಸವಾಗುವುದಿಲ್ಲ. ವಿಭಿನ್ನ ನಿರೂಪಣೆ ಹೊಂದಿದ್ದು, ಪ್ರಾರಂಭದಿಂದ ಕೊನೆತನಕ ಊಹಿಸಲು ಕಷ್ಟವಾಗುತ್ತದೆ. ಪ್ರೀತಿಯನ್ನು ತೋರ್ಪಡಿಸಲಿಕ್ಕೆ ಆಗುವುದಿಲ್ಲವೋ, ಆಗ ಸೋತು ಹೋಗುತ್ತಾನೆ. ಅದನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಬಂಗಾರಪೇಟೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ಬೇಗನೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ ಅಂದರು.

ಜಾಸ್ತಿ ಪ್ರೀತಿ ಟ್ರೈಲರ್
ಜಾಸ್ತಿ ಪ್ರೀತಿ ಟ್ರೈಲರ್

ಇನ್ನು ನಾಯಕ ಧರ್ಮಕೀರ್ತಿ ರಾಜ್ ಮಾತನಾಡಿ ಇದು ಇಂಟೆನ್ಸ್ ಲವ್‌ಸ್ಟೋರಿ. ಏಳೆ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾಗೆ ಏನೂ ಕಮ್ಮಿ ಮಾಡಿಲ್ಲ. ಎಲ್ಲರೂ ಫ್ಯಾಶನ್‌ನಿಂದ ಕೆಲಸ ಮಾಡಿದ್ದಾರೆ. ಇಂದು ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಯಾರು ಸಿನಿಮಾ ನೋಡಲು ಬರುತ್ತಿಲ್ಲ. ಆದರೂ ನಿರ್ಮಾಪಕರು ಧೈರ್ಯ ಮಾಡಿ, ನಂಬಿಕೆಯಿಂದ ಹಣ ಹೂಡಿದ್ದಾರೆ. ಒಳ್ಳೆ ಅಂಶಗಳು ಇರುವುದರಿಂದ ಚಿತ್ರ ನೋಡಲು ಬರುತ್ತಾರೆಂಬ ವಿಶ್ವಾಸವಿದೆ. ನನ್ನ ಅಭಿನಯದ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ನನಗೂ ಒಂದೆ ಕಡೆ ಬ್ರೇಕ್ ಸಿಗಬೇಕಂಬ ಹಂಬಲವಿದೆ. ಈ ಚಿತ್ರದಿಂದ ಸಿಗಬಹುದು. ಅದಕ್ಕಾಗಿ ಕಾಯ್ತಾ ಇದ್ದೇನೆ ಅಂತಾರೆ ಧರ್ಮಕೀರ್ತಿ ರಾಜ್.

ಧರ್ಮಕೀರ್ತಿ ರಾಜ್​​ಗೆ ಜೋಡಿಯಾಗಿ ಕೃಷಿ ತಾಪಂಡ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಜೋಡಿಗಳಾಗಿ ಮುರಳಿರಾಮ್ ಹಾಗು ಶೋಭರಾಣಿ. ಇವರೊಂದಿಗೆ ಬ್ಯಾಂಕ್‌ಜನಾರ್ಧನ್, ಸುಚೇಂದ್ರಪ್ರಸಾದ್, ಮೈಸೂರು ರಮಾನಂದ್, ಎಂ.ಎನ್.ಲಕ್ಷೀದೇವಿ, ಮಧುಮಂದಗೆರೆ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ದಿನಕ್ಕೆ ಡಾಲಿ 'ಕೋಟಿ' ಚಿತ್ರತಂಡದಿಂದ ವಿಶೇಷ ವಿಡಿಯೋ - Kotee

ಹಾಗೆಯೇ ಸಾಹಿತಿ, ಕವಿ, ಚಿಂತಕ, ವಿಮರ್ಶಕ ಹಾಗೂ ಚಿತ್ರ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಮಾತನಾಡಿ ಇವರು ಹೇಳುವಂತೆ ಕನ್ನಡ ಸಿನಿಮಾ ಬೇರೆ ಬೇರೆ ರೀತಿಯಲ್ಲಿ ಬೆಳೆದಿದೆ. ಅನೇಕ ಚಿತ್ರಗಳು ಜಗತ್ತಿನ ಸಿನಿಮಾಗಳ ಎದುರು ಸವಾಲು ಒಡ್ಡುವಂತ ಕೆಲಸ ಮಾಡುತ್ತಿದೆ. ಅದೇ ಸಾಲಿನಲ್ಲಿ ಜಾಸ್ತಿ ಪ್ರೀತಿ ಸೇರುತ್ತದೆ. ಸಿನಿಮಾ ಎಂಬುದು ಉದ್ಯಮವಾಗಿದೆ. ನೂರಾರು ಜನರ ಪ್ರತಿಭೆ ಮತ್ತು ಪರಿಶ್ರಮ ಒಳಗೊಂಡಿದೆ. ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಅಲ್ಲಿನ ಪ್ರಸಿದ್ಧ ಕವಿಗಳು ಸಾಹಿತ್ಯ ರಚಿಸುತ್ತಾರೆ. ನಮ್ಮಲ್ಲಿ ಕಡಿಮೆ ಇದ್ದಾರೆ. ಕುಮಾರವ್ಯಾಸ ಹೆಸರಿನಲ್ಲಿ ಚಿತ್ರಪ್ರಶಸ್ತಿ ನೀಡಬೇಕು. ಅರುಣ್‌ಗೆ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದರು.

ವಿನೀತ್ ರಾಜ್ ಮೆನನ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತೀಶ್.ಸಿ.ಎಸ್-ಬಿ.ಆರ್.ಮಲ್ಲಿಕಾರ್ಜುನ್, ಸಂಕಲನ ವೆಂಕಟೇಶ್. ಯುಡಿವಿ, ನೃತ್ಯ ಗೋವಿಂದ್.ವಿ.ಮಾಲೂರು, ಸಾಹಸ ಕುಂಗು ಫೂ ಚಂದ್ರು ಅವರದಾಗಿದೆ. ಜೇಂಕಾರ್ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

ಪೂರ್ಣ ಶ್ರೀ ಎಂಟರ್‌ಪ್ರೈಸಸ್ ಮುಖಾಂತರ ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಂ ಕೊಡತಿ ಬಂಡವಾಳ ಹೂಡಿರುವುದು ಹೊಸ ಅನುಭವ. ಎಸ್‌ಆರ್‌ಕೆ ಕೃಷ್ಣಪ್ಪ ಸರ್ಜಾಪುರ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಟ್ರೈಲರ್​ನಿಂದಲೇ ಕುತೂಹಲ ಹುಟ್ಟಿಸಿರೋ ಜಾಸ್ತಿ ಪ್ರೀತಿ ಸಿನಿಮಾ ಎಲೆಕ್ಷನ್ ಫಲಿತಾಂಶ ಬಂದ ಬಳಿಕ ತೆರೆಗೆ ಬರಲಿದೆ.

ಇದನ್ನೂ ಓದಿ: 'ನೀ ನನ್ನ ಜಗದ ಬೆಳಕು': ಮುದ್ದಿನ ಮಡದಿ ಅನುಷ್ಕಾ ಬರ್ತ್​ಡೇಗೆ ವಿರಾಟ್​​ ಸ್ಪೆಷಲ್​ ವಿಶ್​​ - Anushka Sharma Birthday

ETV Bharat Logo

Copyright © 2024 Ushodaya Enterprises Pvt. Ltd., All Rights Reserved.