ETV Bharat / entertainment

'ರಾಮಾಯಣ' ಚಿತ್ರದ ಬಜೆಟ್​ ₹800 ಕೋಟಿ: ಬಿಡುಗಡೆ​​ ಯಾವಾಗ ಗೊತ್ತಾ? - Ramanaya

author img

By ETV Bharat Karnataka Team

Published : May 14, 2024, 10:39 AM IST

'ರಾಮಾಯಣ' ಚಿತ್ರದ ಬಜೆಟ್​ ಮತ್ತು ಬಿಡುಗಡೆ ದಿನಾಂಕ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

'Ramanaya' movie
'ರಾಮಾಯಣ' ಸಿನಿಮಾ (ETV Bharat)

'ರಾಮಾಯಣ'. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸೆಟ್​​ನಿಂದ ಫೋಟೋ, ವಿಡಿಯೋಗಳು ವೈರಲ್​​ ಆಗುತ್ತಿವೆ. ಬಾಲಿವುಡ್​​ ನಟ ರಣ್​​ಬೀರ್ ಕಪೂರ್, ಸೌತ್ ಕ್ವೀನ್ ಸಾಯಿ ಪಲ್ಲವಿ, ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್ ಯಶ್​​ ಮುಖ್ಯಭೂಮಿಕೆಯ ಚಿತ್ರದ ಕುರಿತು ಅಂತೆಕಂತೆಗಳು ಜೋರಾಗಿವೆ. ಇದೀಗ ಬಜೆಟ್​ ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಹುಬೇಡಿಕೆಯ ತಾರೆಯರ ಚಿತ್ರಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. 'ದಂಗಲ್', 'ಛಿಚೋರೆ' ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿತೇಶ್ ತಿವಾರಿ ಕನಸಿನ ಯೋಜನೆ ಇದಾಗಿದೆ. ಚಿತ್ರದ ಕೆಲಸಗಳು ಬಹಳ ದಿನಗಳ ಹಿಂದೆಯೇ ಆರಂಭವಾಗಿವೆ. ಇತ್ತೀಚೆಗೆ, ಚಿತ್ರದ ರಣ್​​ಬೀರ್, ಸಾಯಿ ಪಲ್ಲವಿ, ಅರುಣ್ ಗೋವಿಲ್ ಮತ್ತು ಲಾರಾ ದತ್ತಾ ಅವರ ಲುಕ್ ಸೋರಿಕೆಯಾಗಿತ್ತು. ಇದೀಗ ಮೇಕಿಂಗ್, ಬಜೆಟ್, ರಿಲೀಸ್​​ ಡೆಟ್ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ.

ವರದಿಗಳ ಪ್ರಕಾರ, ರಾಮಾಯಣ ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗದ ಮೇಕಿಂಗ್ ಬಜೆಟ್ 800 ಕೋಟಿ ರೂಪಾಯಿಗೂ ಹೆಚ್ಚೆಂದು ಹೇಳಲಾಗುತ್ತಿದೆ. ಇದರೊಂದಿಗೆ 'ರಾಮಾಯಣ' ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಿಗ್​ ಬಜೆಟ್ ಚಿತ್ರವಾಗಲಿದೆ. 2023ರಲ್ಲಿ ಬಿಡುಗಡೆಯಾದ 'ಆದಿಪುರುಷ್' ಈವರೆಗಿನ ಭಾರತೀಯ ಚಿತ್ರರಂಗದ ಅತಿದೊಡ್ಡ ಬಜೆಟ್​​ನ ಚಿತ್ರ ಎನ್ನಲಾಗಿದೆ. ಇದನ್ನು ನಿರ್ಮಿಸಲು 700 ಕೊಟಿ ರೂ. ವೆಚ್ಚವಾಗಿದೆ.

ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ಅಲ್ಲು ಅರ್ಜುನ್? ನಟ ಕೊಟ್ಟ ಸ್ಪಷ್ಟನೆ ಹೀಗಿದೆ - Allu Arjun

'ರಾಮಾಯಣ' ಭಾರತೀಯರ ನಂಬಿಕೆಯ ಪ್ರತಿರೂಪ. ಇದು ಕೇವಲ ಸಿನಿಮಾವಲ್ಲ. ಬದಲಾಗಿ, ಭಾರತೀಯರ ಭಾವನೆಗಳಿಗೆ ಸಂಬಂಧಿಸಿದ ಪೌರಾಣಿಕ ವಿಷಯ ಎಂದು ನಿರ್ಮಾಪಕರು ಹೇಳಿದ್ದಾರೆ. ಅದಕ್ಕಾಗಿಯೇ ನಿರ್ದೇಶಕರು ಸೇರಿದಂತೆ ಸಂಪೂರ್ಣ ಚಿತ್ರತಂಡ 'ರಾಮಾಯಣ'ಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಅದ್ಭುತ ದೃಶ್ಯಗಳು ಮತ್ತು ವಿಎಫ್‌ಎಕ್ಸ್ ಅನುಭವ ಸಿಗಲಿದೆ. ಅದಕ್ಕಾಗಿಯೇ ದೊಡ್ಡ ಪ್ರಮಾಣದ ಬಜೆಟ್​ ಮೀಸಲಿಡಲಾಗಿದೆ.

ಇದನ್ನೂ ಓದಿ: ಅಕ್ಷಯ್​​-ಪ್ರಿಯದರ್ಶನ್ ಕಾಂಬೋದಲ್ಲಿ ಹೊಸ ಸಿನಿಮಾ: ಈ ಮೂವರಲ್ಲಿ ಯಾರು ಹೀರೋಯಿನ್? - Akshay Kumar Movie Updates

ಸಿನಿಮಾ ಕೆಲಸ ಸುಮಾರು 2 ರಿಂದ 3 ವರ್ಷಗಳವರೆಗೆ ಮುಂದುವರಿಯುತ್ತದೆ. ಅದ್ಭುತ ದೃಶ್ಯಗಳಿಗಾಗಿ ಟೆಕ್ನಾಲಜಿ ಮೇಲೆ ಅವಲಂಬಿತವಾಗಿರುವುದರಿಂದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೂ ಸಹ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಹಾಗಾಗಿ ಚಿತ್ರ 2027ರ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಅಲ್ಲಿಗೆ ರಾಮಾಯಣ ಭಾಗ 1 ತಯಾರಾಗಲು ಮೂರು ವರ್ಷ ಸಮಯ ಹಿಡಿಯುತ್ತದೆ. ಆದಾಗ್ಯೂ, ಎಲ್ಲದಕ್ಕೂ ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.