ETV Bharat / entertainment

ಶಾಹಿದ್​​ ಕಪೂರ್​ರನ್ನು ನಿರ್ಲಕ್ಷಿಸಿದರಾ ಕರೀನಾ?: ವೈರಲ್​​ ವಿಡಿಯೋ ನೋಡಿ

author img

By ETV Bharat Karnataka Team

Published : Feb 21, 2024, 10:51 AM IST

Updated : Feb 21, 2024, 11:39 AM IST

ವದಂತಿಯ ಮಾಜಿ ಪ್ರೇಮಪಕ್ಷಿಗಳಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಮುಖಾಮುಖಿಯಾದರೂ ಕಂಡರೂ ಕಾಣದಂತೆ ಮುನ್ನಡೆದಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Did Kareena Kapoor Just Ignore Shahid Kapoor
ಶಾಹಿದ್​​ ಕಪೂರ್​ರನ್ನು ನಿರ್ಲಕ್ಷಿಸಿದ್ರಾ ಕರೀನಾ?

'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ - 2024' ಸಮಾರಂಭ ನಿನ್ನೆ ಸಂಜೆ ಮುಂಬೈನಲ್ಲಿ ನಡೆದಿದೆ. ಚಿತ್ರರಂಗದ ಖ್ಯಾತನಾಮರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವದಂತಿಯ ಮಾಜಿ ಪ್ರೇಮಪಕ್ಷಿಗಳಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಕೂಡ ಹಾಜರಿದ್ದರು. ಪಾಪರಾಜಿಗಳು ಆನ್​ ಲೈನ್​ನಲ್ಲಿ ಶೇರ್ ಮಾಡಿರುವ ವಿಡಿಯೋಗಳಲ್ಲಿ, ಕರೀನಾ ಅವರು ಶಾಹಿದ್ ಅವರನ್ನು ನಿರ್ಲಕ್ಷಿಸಿದಂತೆ ತೋರಿದೆ. ಪಕ್ಕದಲ್ಲೇ ಇದ್ದರೂ ಕೂಡ ಕಂಡರೂ ಕಾಣದಂತೆ ವರ್ತಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕರೀನಾ ಮತ್ತು ಶಾಹಿದ್ ಅವರ ಮುಖಾಮುಖಿ ಕಂಡ ಅಭಿಮಾನಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸೋದನ್ನು ತಡೆಯಲು ಸಾಧ್ಯವಾಗಿಲ್ಲ. ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ್ದು, ಸಾಕಷ್ಟು ಕಾಮೆಂಟ್ಸ್ ಬಂದಿವೆ. ಒಂದು ಕ್ಲಿಪ್‌ನಲ್ಲಿ, ಶಾಹಿದ್ ಕಪೂರ್ ಕೃಷ್ಣ ಡಿಕೆ ಮತ್ತು ರಾಜ್ ನಿಡಿಮೋರು ಅವರೊಂದಿಗೆ ನಿಂತು ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಅದೇ ವೇಳೆ ಕರೀನಾ ಆಗಮಿಸಿದ್ದಾರೆ. ಶಾಹಿದ್​ ಅವರನ್ನು ಕಂಡರೂ ಕಾಣದಂತೆ ಮುನ್ನಡೆದು ರಾಜ್‌ ಅವರಿಗೆ ಮಾತ್ರ ನಮಸ್ಕರಿಸಿದರು. ಶಾಹಿದ್ ಅವರು ಕರೀನಾ ಅವರು ಹೋದದನ್ನು ಗಮನಿಸಿದಂತೆ ತೋರಿದೆ.

ಕರೀನಾ ಕಪೂರ್ ಖಾನ್​​ ಮುನ್ನಡೆದ ನಂತರ ಶಾಹಿದ್ ನಗುಮೊಗದಲ್ಲಿ ತಮ್ಮ ಕೆಲಸ ಮುಂದುವರಿಸಿದ್ದಾರೆ. ನಟಿಯ ಸುತ್ತ ಅವರ ತಂಡ ಉಪಸ್ಥಿತವಿತ್ತು. ಕರೀನಾ ಮಿನುಗುವ ಗೋಲ್ಡನ್ ಉಡುಗೆಯಲ್ಲಿ ಕಂಗೊಳಿಸಿದ್ದು, ಹೈಹೀಲ್ಸ್ ಧರಿಸಿದ್ದರು. ಶಾಹಿದ್ ನೇವಿ ಬ್ಲ್ಯೂ ಸೂಟ್​ ಧರಿಸಿದ್ದರು.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

ಅಭಿಮಾನಿಗಳು, ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಶಾಹಿದ್ ಅವರ ವ್ಯಕ್ತಿತ್ವ ಮತ್ತು ಹ್ಯೂಮರ್ ಅನ್ನು ಹಲವರು ಶ್ಲಾಘಿಸಿದರೆ, ಕೆಲವರು ಮುಜುಗರವುಳ್ಳ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದರು. ಶಾಹಿದ್ ಅವರ ನಗು ಮತ್ತು ಕರೀನಾ ಅವರ ನೋಟವನ್ನು ಗಮನಿಸಿದ ಹಲವರು ಕಾಮೆಂಟ್​​ ಮಾಡಿದ್ದಾರೆ. ಇಬ್ಬರ ಪಾಸ್ಟ್ ಅನ್ನೂ ಸಹ ಉಲ್ಲೇಖಿಸಿದ್ದಾರೆ. 2004 ರಿಂದ 2007ರವರೆಗೆ ಈ ಜೋಡಿ ಡೇಟಿಂಗ್​ನಲ್ಲಿದ್ದರು. ನಂತರ, ಶಾಹಿದ್​ ಕಪೂರ್​ ಮೀರಾ ರಜ್​​ಪೂತ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮತ್ತೊಂದೆಡೆ ಕರೀನಾ ಅವರು ನಟ, ರಾಜವಂಶಸ್ಥ ಸೈಫ್ ಅಲಿ ಖಾನ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದು, ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಇಬ್ಬರೂ ತಮ್ಮ ಪ್ರೇತ್ಯಕ ಮಾರ್ಗದಲ್ಲಿ ಸಂತಸಭರಿತ ಜೀವನ ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್​​​, ನಯನತಾರಾಗೆ 'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಪ್ರಶಸ್ತಿ

Last Updated : Feb 21, 2024, 11:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.