ಶಾರುಖ್​​​, ನಯನತಾರಾಗೆ 'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಪ್ರಶಸ್ತಿ

author img

By ETV Bharat Karnataka Team

Published : Feb 21, 2024, 8:46 AM IST

Updated : Feb 21, 2024, 8:51 AM IST

Dadasaheb Phalke Awards 2024

ಜವಾನ್​​ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಶಾರುಖ್​ ಖಾನ್​ ಮತ್ತು ನಯನತಾರಾ 'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಪ್ರಶಸ್ತಿ 2024 ಸಮಾರಂಭದಲ್ಲಿ ಅತ್ಯುತ್ತಮ ನಟ - ನಟಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಸೌತ್​​ ಲೇಡಿ ಸೂಪರ್​ ಸ್ಟಾರ್ ಜನಪ್ರಿಯತೆ​ಯ ನಯನತಾರಾ ಮತ್ತು ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್​ ಖಾನ್​ ಅವರಿಗೆ ಪ್ರತಿಷ್ಟಿತ ಪ್ರಶಸ್ತಿ ಒಲಿದು ಬಂದಿದೆ. 2023ರ ಬ್ಲಾಕ್​ಬಸ್ಟರ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಜವಾನ್'ನಲ್ಲಿನ ಅಮೋಘ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024ರಲ್ಲಿ 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ನಯನತಾರಾ ಮತ್ತು ಎಸ್​ಆರ್​ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ನಯನತಾರಾ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ಜವಾನ್​​ ಸಹನಟ ಶಾರುಖ್ ಖಾನ್ ಪ್ರದಾನ ಮಾಡಿದ್ದಾರೆ.

ಬಾಲಿವುಡ್​ ಕಿಂಗ್​​ ಖ್ಯಾತಿಯ ಶಾರುಖ್ ಖಾನ್​ ತಮ್ಮ 'ಜವಾನ್' ಸಹನಟಿಗೆ ಪ್ರಶಸ್ತಿ ಹಸ್ತಾಂತರಿಸಿದ ಹಲವು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ವೈರಲ್​​ ಕ್ಲಿಪ್‌ನಲ್ಲಿ, ಶಾರುಖ್ ಖಾನ್ ನಯನತಾರಾ ಅವರನ್ನು ವೇದಿಕೆಗೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಎಸ್​​ಆರ್​ಕೆ ಎಂದಿನಂತೆ ಬಹಳ ಪ್ರೀತಿಯಿಂದ ನಟಿಯ ಕೈ ಹಿಡಿದು ವೇದಿಕೆ ಏರಲು ಸಹಾಯ ಮಾಡಿದ್ದಾರೆ. ಜವಾನ್​ ಸಹ ನಟರು ವೇದಿಕೆಯಲ್ಲಿ ತಮ್ಮ ಚಿತ್ರದ ಸೂಪರ್ ಹಿಟ್​ 'ಚಲೇಯಾ' ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಕೂಡ ಕಂಡುಬಂದಿದೆ. ಎಸ್​​ಆರ್​ಕೆ ಫ್ಯಾನ್ಸ್​​ ಪೇಜ್​ಗಳು ಕಾರ್ಯಕ್ರಮದ ಹಲವು ವಿಡಿಯೋಗಳನ್ನು ಹಂಚಿಕೊಂಡಿವೆ.

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024ರಲ್ಲಿ 'ಜವಾನ್' ಚಿತ್ರದಲ್ಲಿನ ಅಭಿನಯಕ್ಕಾಗಿ ಎಸ್‌ಆರ್‌ಕೆ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ, 'ಚಕ್ ದೇ ಇಂಡಿಯಾ' ನಟ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಪೊಲೀಸ್ ಪಾತ್ರದಲ್ಲಿ ಮತ್ತು ಎಸ್‌ಆರ್‌ಕೆ ಅವರ ಲೇಡಿ ಲವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 7ರಂದು ಬಿಡುಗಡೆಯಾದ 'ಜವಾನ್' ಚಿತ್ರವನ್ನು ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶಿಸಿದ್ದರು. ಶಾರುಖ್ ಖಾನ್​ ಮತ್ತು ಅಟ್ಲೀ ಕುಮಾರ್​​ ಕಾಂಬಿನೇಶನ್​ನ ಮೊದಲ ಪ್ರಾಜೆಕ್ಟ್​ ಇದು. ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ಧಿ ಡೋಗ್ರಾ, ಲಹರ್ ಖಾನ್, ಗಿರಿಜಾ ಓಕ್ ಮತ್ತು ಸಂಜೀತಾ ಭಟ್ಟಾಚಾರ್ಯ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ: ಕಾಟೇರ ಚಿತ್ರದ ಟೈಟಲ್ ವಿಚಾರ: ನಟ ದರ್ಶನ್ -ನಿರ್ಮಾಪಕ ಉಮಾಪತಿ ನಡುವೆ ಜಟಾಪಟಿ

ಪಠಾಣ್​ ಬಳಿಕ ಬಂದ ಶಾರುಖ್​ ಖಾನ್​ ಅವರ ಜವಾನ್​​​ ಪ್ರೇಕ್ಷಕರನ್ನು ರಂಜಿಸಿದ್ದು ಮಾತ್ರವಲ್ಲದೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಎರಡೂ ಚಿತ್ರಗಳು 1,000 ಕೋಟಿ ರೂ.ನ ಕ್ಲಬ್​ ಸೇರುವಲ್ಲಿ ಯಶ ಕಂಡಿದೆ. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ ಈ ಚಿತ್ರಗಳು ಸೂಪರ್ ಡೂಪರ್​ ಹಿಟ್​ ಆಗಿವೆ. ನಂತರ ಬಂದ ಡಂಕಿ ಕೂಡ ಯಶಸ್ವಿ ಆಗಿದೆ. ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: BAFTA ಫಿಲ್ಮ್ ಅವಾರ್ಡ್ಸ್ ಮುಗಿಸಿ ಮುಂಬೈಗೆ ಮರಳಿದ ದೀಪಿಕಾ; ಸ್ಟೈಲಿಶ್​​ ಲುಕ್​ನಲ್ಲಿ ಕಂಗೊಳಿಸಿದ ನಟಿ

Last Updated :Feb 21, 2024, 8:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.