ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

author img

By ETV Bharat Karnataka Team

Published : Feb 21, 2024, 10:22 AM IST

Updated : Feb 21, 2024, 11:36 AM IST

Dadasaheb Phalke International Film Awards

'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ - 2024'ರ ವಿಜೇತರ ಪಟ್ಟಿ ಇಲ್ಲಿದೆ.

ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ - 2024' ಸಮಾರಂಭ ಫೆಬ್ರವರಿ 20, ಮಂಗಳವಾರ ಸಂಜೆ ಮುಂಬೈನಲ್ಲಿ ಜರುಗಿತು. ಈ ವಿಶೇಷ ಸಂದರ್ಭದಲ್ಲಿ ಶಾರುಖ್ ಖಾನ್, ನಯನತಾರಾ, ಅನಿಲ್ ಕಪೂರ್, ಕರೀನಾ ಕಪೂರ್ ಖಾನ್, ಸಂದೀಪ್ ರೆಡ್ಡಿ ವಂಗಾ, ರಾಣಿ ಮುಖರ್ಜಿ, ಶಾಹಿದ್ ಕಪೂರ್ ಸೇರಿದಂತೆ ಅನೇಕ ಗಣ್ಯರು ಕಾಣಿಸಿಕೊಂಡರು. ಈ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್ ಅವರ 'ಜವಾನ್' ಮತ್ತು ರಣ್​​ಬೀರ್ ಕಪೂರ್ ಅವರ 'ಅನಿಮಲ್' ಹೆಚ್ಚಿನ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿಜೇತರ ಪಟ್ಟಿ ಇಲ್ಲಿದೆ..

ಪ್ರಶಸ್ತಿ ವಿಜೇತರ ಪಟ್ಟಿ:

ಅತ್ಯುತ್ತಮ ಖಳನಾಯಕ - ಬಾಬಿ ಡಿಯೋಲ್ (ಅನಿಮಲ್​).

ಅತ್ಯುತ್ತಮ ನಿರ್ದೇಶಕ - ಸಂದೀಪ್ ರೆಡ್ಡಿ ವಂಗಾ (ಅನಿಮಲ್​).

ಅತ್ಯುತ್ತಮ ನಟಿ - ನಯನತಾರಾ (ಜವಾನ್).

ಅತ್ಯುತ್ತಮ ನಟ - ಶಾರುಖ್ ಖಾನ್ (ಜವಾನ್).

ಅತ್ಯುತ್ತಮ ನಟ (ವಿಮರ್ಶಕರು) - ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್).

ಅತ್ಯುತ್ತಮ ಸಂಗೀತ ನಿರ್ದೇಶಕ - ಅನಿರುದ್ಧ್ ರವಿಚಂದರ್

ಅತ್ಯುತ್ತಮ ಹಿನ್ನೆಲೆ ಗಾಯಕ - ವರುಣ್ ಜೈನ್.

ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಿಲ್ಪಾ ರಾವ್.

ವೆಬ್ ಸರಣಿಯಲ್ಲಿ ಅತ್ಯುತ್ತಮ ನಟಿ - (ವಿಮರ್ಶಕರು) ಕರಿಷ್ಮಾ ತನ್ನಾ (ಸ್ಕೂಪ್).

ಸಂಗೀತ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ - ಕೆ.ಜೆ. ಯೇಸುದಾಸ್

ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ - ಮೌಶುಮಿ ಚಟರ್ಜಿ

ವರ್ಷದ ಟಿವಿ ಸರಣಿ - ಘುಮ್ ಹೈ ಕಿಸಿ ಕೆ ಪ್ಯಾರ್ ಮೇ.

ಟಿವಿ ಸರಣಿಯಲ್ಲಿ ಅತ್ಯುತ್ತಮ - ನಟ ನೀಲ್ ಭಟ್.

ಟಿವಿ ಸರಣಿಯಲ್ಲಿ ಅತ್ಯುತ್ತಮ - ನಟಿ ರೂಪಾಲಿ ಗಂಗೂಲಿ.

ಇದನ್ನೂ ಓದಿ: ಶಾರುಖ್​​​, ನಯನತಾರಾಗೆ 'ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಪ್ರಶಸ್ತಿ

ಕಾರ್ಯಕ್ರಮದಲ್ಲಿ 'ಸ್ಯಾಮ್ ಬಹದ್ದೂರ್' ಚಿತ್ರದಲ್ಲಿನ ಅದ್ಭುತ ನಟನೆಗಾಗಿ ವಿಕ್ಕಿ ಕೌಶಲ್ ಅವರು ಅತ್ಯುತ್ತಮ ನಟ (ವಿಮರ್ಶಕರ ಪ್ರಶಸ್ತಿ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ನಟನಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಅದಾಗ್ಯೂ ಅವರು ಈ ಗೌರವಕ್ಕಾಗಿ ವಿಶೇಷ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ವೇದಿಕೆಯಲ್ಲಿ ಪ್ಲೇ ಮಾಡಲಾದ ಈ ವಿಡಿಯೋದಲ್ಲಿ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BAFTA ಫಿಲ್ಮ್ ಅವಾರ್ಡ್ಸ್ ಮುಗಿಸಿ ಮುಂಬೈಗೆ ಮರಳಿದ ದೀಪಿಕಾ; ಸ್ಟೈಲಿಶ್​​ ಲುಕ್​ನಲ್ಲಿ ಕಂಗೊಳಿಸಿದ ನಟಿ

ಸ್ಯಾಮ್ ಬಹದ್ದೂರ್ ಚಿತ್ರದಲ್ಲಿನ ನನ್ನ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ತೀರ್ಪುಗಾರರಿಗೆ ಬಹಳ ಧನ್ಯವಾದಗಳು. ಕ್ಷಮಿಸಿ, ನಾನಿಂದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಕೆಲ ಕಾರಣಗಳಿಂದ ನಾನು ಮುಂಬೈನಿಂದ ಹೊರಗಿದ್ದೇನೆ. ಆದರೆ, ಈ ಗೌರವಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Last Updated :Feb 21, 2024, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.