ETV Bharat / entertainment

ತಾಜ್​​ ಮಹಲ್​ ಪ್ಯಾಲೆಸ್​ನಲ್ಲಿ ಆಲಿಯಾ ಭಟ್​ ಬರ್ತ್​ಡೇ ಸೆಲೆಬ್ರೇಶನ್ - ವಿಡಿಯೋ

author img

By ETV Bharat Karnataka Team

Published : Mar 15, 2024, 12:41 PM IST

Alia Bhatt Birtdhay
ಆಲಿಯಾ ಭಟ್​ ಬರ್ತ್​ಡೇ

ಬಾಲಿವುಡ್​ ನಟಿ ಆಲಿಯಾ ಭಟ್ ತಮ್ಮ 31ನೇ ಹುಟ್ಟುಹಬ್ಬವನ್ನು ಮುಂಬೈನ ತಾಜ್ ಮಹಲ್ ಪ್ಯಾಲೆಸ್‌ನಲ್ಲಿ (ರಾಯಲ್​ ಹೋಟೆಲ್​​)ನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಅವರಿಗಿಂದು ಜನ್ಮದಿನದ ಸಂಭ್ರಮ. 31ನೇ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾಗಳು ಶುಭ ಕೋರುತ್ತಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಬೆಡಗಿಯ ಫೋಟೋ-ವಿಡಿಯೋಗಳು ಸದ್ದು ಮಾಡುತ್ತಿವೆ. ಸಿನಿಪ್ರಿಯರು, ಅಭಿಮಾನಿಗಳು ನಟಿಯ ಸಿನಿ ಸಾಧನೆ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ.

ಗ್ರ್ಯಾಂಡ್​ ಬರ್ತ್​ಡೇ ಸೆಲೆಬ್ರೇಶನ್: ಬಾಲಿವುಡ್​​​ನಲ್ಲಿ ಗುರುತಿಸಿಕೊಂಡಿರುವ ಆಲಿಯಾ ಭಟ್​​​ ನಿನ್ನೆ ತಡರಾತ್ರಿ ಕುಟುಂಬಸ್ಥರಾದ ರಣ್​​​ಬೀರ್ ಕಪೂರ್, ಇಶಾ ಅಂಬಾನಿ, ಆಕಾಶ್ ಅಂಬಾನಿ, ನೀತು ಕಪೂರ್ ಮತ್ತು ಶಾಹೀನ್ ಭಟ್ ಸೇರಿದಂತೆ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಆಚರಿಸಿಕೊಂಡಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೆಸ್‌ನಲ್ಲಿ (ರಾಯಲ್​ ಹೋಟೆಲ್​) ಡಿನ್ನರ್ ಪಾರ್ಟಿ ಹಮ್ಮಿಕೊಂಡಿದ್ದರು. ಈವೆಂಟ್​ನಲ್ಲಿ ಆಲಿಯಾ ಮಿನುಗುವ ಔಟ್​ಫಿಟ್​​ ಧರಿಸಿ ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತೊಂದೆಡೆ, ಪತಿ-ಸೂಪರ್​ ಸ್ಟಾರ್ ರಣ್​​ಬೀರ್ ಕಪೂರ್ ಕಂಪ್ಲೀಟ್​​ ಬ್ಲ್ಯಾಕ್​​ ವೇರ್​​ನಲ್ಲಿ ಸಿಂಪ್ಲಿ ಸ್ಟೈಲಿಶ್​ ಎನಿಸುವಂತೆ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೇಶನ್​​​ಗೆ ಆಗಮಿಸುತ್ತಿರುವ ತಾರಾಬಳಗದ ಫೋಟೋ-ವಿಡಿಯೋಗಳನ್ನು ಮುಂಬೈ ಮೂಲದ ಪಾಪರಾಜಿಗಳು ಶೇರ್ ಮಾಡಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಆಲಿಯಾ ಕಳೆದ ವರ್ಷ ಕೂಡ ತಮ್ಮ ಜನ್ಮದಿನವನ್ನು ಲಂಡನ್‌ನಲ್ಲಿ ರಣ್​​​ಬೀರ್ ಸೇರಿದಂತೆ ಕೆಲವರ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದರು. ಅಂದಿನ ಫೋಟೋಗಳೂ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಕೊಂಡಿದ್ದವು.

ಇದನ್ನೂ ಓದಿ: ಪವರ್ ಸ್ಟಾರ್ 'ಜಾಕಿ' ಸೇರಿ ಈ ವಾರ ಬಿಡುಗಡೆ ಆಗುತ್ತಿರುವ ಚಿತ್ರಗಳಿವು

ಆಲಿಯಾ ಭಟ್​ ಸಿನಿ ಪಯಣ: ಬಾಲಿವುಡ್​ನಲ್ಲಿ ನಟಿ-ನಿರ್ಮಾಪಕಿ ಅಲ್ಲದೇ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಆಲಿಯಾ ಭಟ್ 2012ರಲ್ಲಿ ಸಿನಿಪಯಣ ಆರಂಭಿಸಿದರು. ಸ್ಟೂಡೆಂಟ್ ಆಫ್ ದಿ ಇಯರ್ ನಟಿಯ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ಭರ್ಜರಿ ಯಶ ನಂತರ ಹೈವೇ, ಗಲ್ಲಿ ಬಾಯ್, ಡಾರ್ಲಿಂಗ್ಸ್, ಕಪೂರ್ ಆ್ಯಂಡ್​ ಸನ್ಸ್, ಗಲ್ಲಿ ಬಾಯ್​, ಶಾಂದಾರ್, ಬದ್ರಿನಾಥ್ ಕಿ ದುಲ್ಹನಿಯಾ, 2 ಸ್ಟೇಟ್ಸ್, ಡಿಯರ್ ಝಿಂದಗಿ, ಕಲಂಕ್, ರಾಝಿ, ಆರ್​ಆರ್​ಆರ್​, ಗಂಗೂಬಾಯಿ ಕಥಿಯಾವಾಡಿ, ಬ್ರಹ್ಮಾಸ್ತ್ರ, ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಕಳೆದ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ನಟಿ) ಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆರಂಭದಲ್ಲಿ ಹಲವು ಟೀಕೆಗೊಳಗಾದ ಆಲಿಯಾ ಭಟ್​ ಸದ್ಯ ಭಾರತೀಯ ಚಿತ್ರರಂಗದ ಟಾಪ್​​ ಹೀರೋಯಿನ್​​. ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾಗೆ ಖ್ಯಾತ ನಿರ್ದೇಶಕ ರಾಜಮೌಳಿ ನೀಡಿದ ಸಲಹೆ ಏನ್​ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.