ETV Bharat / entertainment

'ಬಡೇ ಮಿಯಾ ಛೋಟೆ ಮಿಯಾ': ಅಕ್ಷಯ್​, ಟೈಗರ್ ಶ್ರಾಫ್​​ ನಟನೆಯ ಟ್ರೇಲರ್​​ ಮೆಚ್ಚಿದ ಪ್ರೇಕ್ಷಕರು - BMCM Trailer

author img

By ETV Bharat Karnataka Team

Published : Mar 26, 2024, 5:02 PM IST

BMCM Trailer
ಬಡೇ ಮಿಯಾ ಛೋಟೆ ಮಿಯಾ

BMCM Trailer: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಬಹುನಿರೀಕ್ಷಿತ 'ಬಡೇ ಮಿಯಾ ಛೋಟೆ ಮಿಯಾ' ಸಿನಿಮಾದ ಟ್ರೇಲರ್​ ಇಂದು ಅನಾವರಣಗೊಂಡಿದೆ.

ಬಾಲಿವುಡ್ ಬಹುಬೇಡಿಕೆ ಕಲಾವಿದರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಬಡೇ ಮಿಯಾ ಛೋಟೆ ಮಿಯಾ'. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾದ ಟ್ರೇಲರ್​ಗೆ ಸಿನಿಪ್ರಿಯರು ಕಾದು ಕುಳಿತಿದ್ದರು.

ಟ್ರೇಲರ್​ಗೆ ಬಹುತೇಕ ಸಕಾರಾತ್ಮಕ ಸ್ಪಂದನೆ: ಅಂತಿಮವಾಗಿ 'ಬಡೇ ಮಿಯಾ ಛೋಟೆ ಮಿಯಾ' ಟ್ರೇಲರ್ ಇಂದು​​ ಅನಾವರಣಗೊಂಡಿದೆ. ಅಕ್ಷಯ್ ಮತ್ತು ಟೈಗರ್ ಜೊತೆಗೆ ಚಿತ್ರದಲ್ಲಿ ಮಾನುಷಿ ಛಿಲ್ಲರ್ ಮತ್ತು ಅಲಯಾ ಎಫ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ರಿಲೀಸ್​ ಆಗಿರೋ ಟ್ರೇಲರ್​​​ಗೆ​​ ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ಕೆಲವರಷ್ಟೇ ಸಾಧಾರಣವಾಗಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಹಲವರು ಸಿನಿಮಾ ವೀಕ್ಷಿಸುವ ಕಾತರ ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಆಗಲಿದೆ.

ಟ್ರೇಲರ್ ವಿಮರ್ಶೆ : ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್ ಎಕ್ಸ್​ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, 'ಬಡೇ ಮಿಯಾ ಛೋಟೆ ಮಿಯಾ'ನ ಎಂಟ್ರಿ 'ಬಾಪ್ ಲೆವೆಲ್​​' ಎಂದು ವರ್ಣಿಸಿದ್ದಾರೆ. ಜೊತೆಗೆ, ಪವರ್​ಫುಲ್ ಟ್ರೆಲರ್​ ವೀಕ್ಷಿಸಲು ಇತರರನ್ನು ಒತ್ತಾಯಿಸಿದ್ದಾರೆ.

ಮತ್ತೊರ್ವ ಬಳಕೆದಾರ ಪ್ರತಿಕ್ರಿಯಿಸಿ, ಟ್ರೇಲರ್ ಅನ್ನು ಈ ಹಿಂದಿನ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಹೋಲಿಸಿದ್ದಾರೆ. ಪಠಾಣ್ ಮತ್ತು ವಾರ್​ನಂತಹ ಚಿತ್ರಗಳ ಟ್ರೇಲರ್‌ಗಳನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ. ಮೊದಲ ದಿನದ ಮೊದಲ ಶೋ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷ ಸೆಟ್ಟೇರಲಿದೆ ಜೂ. ಎನ್​ಟಿಆರ್ - ​ಪ್ರಶಾಂತ್ ನೀಲ್ ಸಿನಿಮಾ: 2 ಭಾಗಗಳಲ್ಲಿ ನಿರ್ಮಾಣ - JR NTR

ಎಕ್ಸ್​ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ನಾವು ಬಹಳ ಹಳೇ ಸ್ನೇಹಿತರು. ಒಬ್ಬರು ಇನ್ನೊಬ್ಬರಿಗಾಗಿ ಜೀವ ಕೊಡಬಹುದು ಜೊತೆಗೆ ಒಬ್ಬರು ಇನ್ನೊಬ್ಬರ ಪ್ರಾಣವನ್ನೂ ತೆಗೆಯಬಹುದು. ಬಡೇ ಮಿಯಾ ಛೋಟೆ ಮಿಯಾ ಮುಖಾಮುಖಿ" ಎಂದು ಬರೆದಿದ್ದಾರೆ. ಮತ್ತೋರ್ವ ನೆಟ್ಟಿಗ ಕಾಮೆಂಟ್​ ಮಾಡಿ, "ಬಡೇ ಮಿಯಾ ಛೋಟೆ ಮಿಯಾ ಟ್ರೇಲರ್. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರೋ ಹಿನ್ನೆಲೆ ಆಕರ್ಷಕವಾಗಿದೆ. ಬ್ಲಾಕ್​ಬಸ್ಟರ್​ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ'' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಭಾರತ: ಫೋಟೋಗಳಲ್ಲಿ ನೋಡಿ ಕಲರ್​ಫುಲ್ ಹೋಳಿ - Holi 2024

ಅಲಿ ಅಬ್ಬಾಸ್ ಜಾಫರ್​ ನಿರ್ದೇಶನದ ಬಡೇ ಮಿಯಾ ಛೋಟೆ ಮಿಯಾ ಏಪ್ರಿಲ್ 10 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಜಾಕಿ ಭಗ್ನಾನಿ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿರೋ ಈ ಚಿತ್ರ ಗೆಲ್ಲುವ ಸೂಚನೆ ಕೊಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.