ETV Bharat / entertainment

'ಧೀರೇನ್ ರಾಮ್ ಕುಮಾರ್' ಇನ್ಮುಂದೆ 'ಧೀರೇನ್​ ಆರ್​ ರಾಜ್​ ಕುಮಾರ್' - Actor Dheeren name changed

author img

By ETV Bharat Karnataka Team

Published : Apr 30, 2024, 10:48 AM IST

ಕೆ.ಆರ್.ಜಿ ಸ್ಟುಡಿಯೋಸ್​ನಿಂದ ಧೀರೇನ್​ ಹೊಸ ಹೆಸರು ಘೋಷಣೆ
ಕೆ.ಆರ್.ಜಿ ಸ್ಟುಡಿಯೋಸ್​ನಿಂದ ಧೀರೇನ್​ ಹೊಸ ಹೆಸರು ಘೋಷಣೆ

ನಟ ಧೀರೇನ್ ರಾಮ್ ಕುಮಾರ್​ ತಮ್ಮ ಹೆಸರನ್ನು ಧೀರೇನ್​ ಆರ್​ ರಾಜ್​ ಕುಮಾರ್ ಆಗಿ ಬದಲಾಯಿಸಿಕೊಂಡು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಣ್ಣದ ಲೋಕದಲ್ಲಿ ಯಶಸ್ವಿಗಾಗಿ ನಟ - ನಟಿಯರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುವುದು ಹೊಸತೇನಲ್ಲ. ಇದೀಗ ನಟ ಧೀರೇನ್ ರಾಮ್ ಕುಮಾರ್​ ಅವರನ್ನು ಧೀರೇನ್​ ಆರ್​ ರಾಜ್​ ಕುಮಾರ್ ಆಗಿ ಕೆ.ಆರ್.ಜಿ. ಸ್ಟುಡಿಯೋಸ್ ಮರು ಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ.

ಈ ಹಿಂದೆ ಶಿವ 123 ಚಿತ್ರದಿಂದ ಧೀರೇನ್ ರಾಮ್ ಕುಮಾರ್ ಮಾಸ್ ಲುಕ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ‌ ಕೊಟ್ಟಿದ್ದರು. ಆದರೆ, ಈ ಸಿನಿಮಾ ಧೀರೇನ್ ರಾಮ್ ಕುಮಾರ್ ಅಂದುಕೊಂಡಂತೆ ಹೆಸರು ತಂದುಕೊಡಲಿಲ್ಲ. ಹೀಗಾಗಿ ಧೀರೇನ್ ರಾಮ್ ಹೆಸರು ಬದಲಾವಣೆ ಮಾಡಿಕೊಂಡು ಈಗ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ರತ್ನನ್ ಪ್ರಪಂಚ ಮೂಲಕ ರೋಹಿತ್ ಪದಕಿ, ಪೌಡರ್ ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, ಗುರುದೇವ್ ಹೊಯ್ಸಳ ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ‌ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.

ಪ್ರಸ್ತುತವಾಗಿ ಬಹು ನಿರೀಕ್ಷಿತ "ಉತ್ತರಕಾಂಡ" ಚಿತ್ರ ಸೆಟ್ಟೇರಿದ್ದು, "ಪೌಡರ್" ಚಿತ್ರದ ಡಬ್ಬಿಂಗ್ ಕಾರ್ಯಗಳ ಸಾಗುತ್ತಿದೆ. ಸದ್ಯದಲ್ಲೇ ಧೀರೇನ್ ಆರ್​ ರಾಜ್ ಕುಮಾರ್ ಸಿನಿಮಾ ಶುರುವಾಗಲಿದೆ.

ಇದನ್ನೂ ಓದಿ: ಆರ್​. ಚಂದ್ರು ನಿರ್ಮಾಣದ 'ಫಾದರ್' ಸಿನಿಮಾಗೆ ಕರುನಾಡ ಚಕ್ರವರ್ತಿಯ ಸಪೋರ್ಟ್ - Father kannada movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.