ETV Bharat / entertainment

ತಪ್ಪು ಸಾಬೀತಾದರೆ ಪ್ರಜ್ವಲ್‌ ರೇವಣ್ಣಗೆ ಕಠಿಣ ಶಿಕ್ಷೆಯಾಗಲಿ: ನಟ ಚೇತನ್ - Hassan Pen Drive Case

author img

By ETV Bharat Karnataka Team

Published : Apr 30, 2024, 6:48 PM IST

Updated : Apr 30, 2024, 7:26 PM IST

ಚೇತನ್
ಚೇತನ್

ಹಾಸನ ಪೆನ್​ಡ್ರೈವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸಿದ್ದಾರೆ.

ಸದ್ಯ ದೇಶಾದ್ಯಂತ ಲೋಕಸಭಾ ಚುನಾವಣೆಗಿಂತಲೂ ಹಾಸನದ ಪೆನ್​ಡ್ರೈವ್ ಪ್ರಕರಣವೇ ಹೆಚ್ಚು ಸದ್ದು ಮಾಡುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿವೆ. ಈ ಪ್ರಕರಣಕ್ಕೆ 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸಿದ್ದಾರೆ.

ನಟ ಚೇತನ್ ಪೋಸ್ಟ್​​: ತಪ್ಪು ಸಾಬೀತಾದರೆ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಆಗಬೇಕೆಂದು ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾದದ್ದು. ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೊಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸಲು ಧೈರ್ಯದಿಂದ ಮುಂದೆ ಬರುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಪೆನ್​​​ ಡ್ರೈವ್​​ ಸಮಸ್ಯೆಯನ್ನು ಸಾವಿರಾರು ನಿರ್ಭಯಾಗಳಿಗೆ ಹೋಲಿಸಿ, ಅದಕ್ಕೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳೆಯರ ನಡೆ ಹಾಸ್ಯಾಸ್ಪದ'' ಎಂದು ತಿಳಿಸಿದ್ದಾರೆ.

ಮತ್ತೊಂದು ಸೋಷಿಯಲ್​ ಮೀಡಿಯಾ ಪೋಸ್ಟ್​​ನಲ್ಲಿ, ''ಬೃಹತ್​ ಲೈಂಗಿಕ ಹಗರಣದಲ್ಲಿ 2,900 ಪೆನ್​​​ ಡ್ರೈವ್​​ ಚಿತ್ರಗಳು/ವಿಡಿಯೋಗಳನ್ನು ಕಾರ್ಯರೂಪಕ್ಕೆ ತರಲು ಆರೋಪಿ ಪ್ರಜ್ವಲ್​​​ ರೇವಣ್ಣ ನಡೆಸಿದ ಸಂಪೂರ್ಣ ನಿರ್ಭಯತೆಯು ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ. ಪೆನ್​ ಡ್ರೈವ್​ ಸಾರ್ವಜನಿಕಗೊಳಿಸಿದರೆ ಅವರ ಪಕ್ಷ/ಕುಟುಂಬ ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಭಯವಿರಲಿಲ್ಲವೇ? ಭಾರತೀಯ ಆಳುವ ರಾಜವಂಶಗಳ ದ್ವೇಷಪೂರಿತ ಅಹಂಕಾರ ಆಶ್ಚರ್ಯಕರವಾಗಿದೆ'' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಮಾನತು: ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - REVANNA SUSPEND FROM JDS

ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್ಐಟಿ, ಕಿರುಕುಳಕ್ಕೊಳಗಾದ ಐವರು ಮಹಿಳೆಯರಿಂದ ಮಾಹಿತಿ ಕಲೆಹಾಕಿದೆ. ಈ ಮಧ್ಯೆ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ.

ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್​​ಐಟಿಗೆ ವಹಿಸಿದೆ.

ಇಂದು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿ ಜೆಡಿಎಸ್ ಆದೇಶ ಹೊರಡಿಸಿದೆ.

Last Updated :Apr 30, 2024, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.