ETV Bharat / business

ಜೊಮಾಟೊ ಸಿಇಒ ರಹಸ್ಯ ಮದುವೆ ಬಹಿರಂಗವಾಗಿದ್ದು ಹೇಗೆ; ವಧು ಯಾರು? - Zomato CEO Deepinder Goyal marriage

author img

By ETV Bharat Karnataka Team

Published : Mar 23, 2024, 3:46 PM IST

http://10.10.50.85:6060/reg-lowres/23-March-2024/zomoto_2303newsroom_1711180319_232.jpg
http://10.10.50.85:6060/reg-lowres/23-March-2024/zomoto_2303newsroom_1711180319_232.jpg

ಜೊಮಾಟೊ ಸಿಇಒ ದೀಪಿಂದರ್ ಗೋಯಲ್​ ತಿಂಗಳ ಹಿಂದೆಯೇ ಮದುವೆಯಾಗಿದ್ದು, ಇದನ್ನು ಅವರು ಬಹಿರಂಗ ಪಡಿಸಿರಲಿಲ್ಲ

ಹೈದರಾಬಾದ್​: ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್​ ಗೋಯಲ್​ ಮೆಕ್ಸಿಕೊದ ಮಾಡೆಲ್​ ಮತ್ತು ಉದ್ಯಮಿ ಗ್ರೇಸಿಯ ಮುನೊಜ್​ ಅವರನ್ನು ಮದುವೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿಂಗಳ ಹಿಂದೆಯೇ ಅವರ ಮದುವೆಯಾಗಿದ್ದು, ಇದನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಇದೀಗ ಗ್ರೇಸಿಯಾ ಅವರ ಸಾಮಾಜಿಕ ಜಾಲತಾಣದಲ್ಲಿ ಬಯೋ ಬದಲಾದ ಹಿನ್ನೆಲೆ ಅವರ ಮದುವೆ ಸುದ್ದಿ ಹೊರ ಬಿದ್ದಿದೆ. ದೀಪಿಂದರ್​ ಗೋಯಲ್​​ ಇದಕ್ಕೂ ಮೊದಲು ಕಂಚನಾ ಜೋಶಿ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೆಕ್ಸಿಕೊದ ರೂಪದರ್ಶಿಯನ್ನು ಎರಡನೇ ಮದುವೆಯಾಗಿದ್ದಾರೆ.

ರಹಸ್ಯ ಮದುವೆ: ದೀಪಿಂದರ್​ ಐಐಟಿಯಲ್ಲಿ ಓದುವಾಗಲೇ ಕಂಚನಾ ಎಂಬುವರನ್ನು ಮದುವೆಯಾಗಿದ್ದು, ಪ್ರತ್ಯೇಕಗೊಂಡಿದ್ದರು. ಇದೀಗ ಎರಡನೇ ಮದುವೆಯನ್ನು ಗೌಪ್ಯವಾಗಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಿಂದ ಈ ಮಾಹಿತಿ ಬಹಿರಂಗವಾಗಿದೆ.

ಯಾರು ಈ ಗ್ರೇಸಿಯಾ ​: ಅವರ ಸಾಮಾಜಿಕ ಜಾಲತಾಣದ ಬಯೋ ಅನುಸಾರ ಗ್ರೆಸಿಯಾ ಮೆಕ್ಸಿಕೊದಲ್ಲಿ ಹುಟ್ಟಿದ್ದಾರೆ. ರೂಪದರ್ಶಿಯಾಗಿರುವ ಅವರು, 2022ರ ಮೆಟ್ರೊಪಾಲಿಟನ್​ ಫ್ಯಾಷನ್​ ವೀಕ್​ನ ವಿನ್ನರ್​ ಆಗಿದ್ದಾರೆ. ಬಳಿಕ ಮಾಡೆಲಿಂಗ್​ ತೊರೆದು ಸ್ಟಾರ್ಟ್​ ಅಪ್​ ಆರಂಭಿಸಿದ್ದು, ಸದ್ಯ ಅವರು ಇದೇ ವೃತ್ತಿ ಮುಂದುವರೆಸಿದ್ದಾರೆ.

ಸದ್ಯ ಗ್ರೇಸಿಯಾ ಭಾರತದಲ್ಲಿದ್ದು, ದೆಹಲಿಗೆ ಆಗಮಿಸಿದ್ದು, ಕೆಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, ಅವರು ನನ್ನ ಹೊಸ ಮನೆ, ನನ್ನ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.

ಜೊಮಾಟೊ ಸಂಸ್ಥಾಪಕ: ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ದೀಪಿಂದರ್​ ಕನ್ಸಲ್ಟಂಟ್​​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ 2008ರಲ್ಲಿ ಗುರುಗ್ರಾಮ್​, ಹರ್ಯಾಣ,ದಲ್ಲಿ ಜೊಮೊಟೊವನ್ನು ಆರಂಭಿಸಿದರು. ಇಂದು ಜೊಮಾಟೊ ದೇಶದೆಲ್ಲೆಡೆ ಸಾವಿರಾರು ನಗರದಲ್ಲಿ ಸೇವೆ ಒದಗಿಸುತ್ತಿದೆ.

ಶುದ್ದ ಸಸ್ಯಹಾರಿ ಫ್ಲೀಟ್: ಜೊಮಾಟೊ ಇತ್ತೀಚಿಗೆ ಸಸ್ಯಾಹಾರಿಗಳಿಗೆ ವಿಶೇಷ ಸೇವೆ ನೀಡುವ ಉದ್ದೇಶ 'ಪ್ಯೂರ್​​ ವೆಜ್​ ಮೋಡ್'​​ ಹಾಗೂ 'ಪ್ಯೂರ್​ ವೆಜ್​ ಫ್ಲೀಟ್'​ ಪರಿಚಯಿಸಿತ್ತು. ಮಾಂಸಾಹಾರ ಮತ್ತು ಸಸ್ಯಾಹಾರದ ಬಾಕ್ಸ್​​ಗಳನ್ನು ಒಟ್ಟಿಗೆ ಕೊಂಡೊಯ್ಯುವಾಗ ವಾಸನೆಗಳ ಸಮಸ್ಯೆಗಳು ಎದುರಾಗುತ್ತಿತ್ತು. ಈ ಕಾರಣದಿಂದ ನಾವು ಪ್ಯೂರ್ ವೆಜ್ ಫ್ಲೀಟ್​​​ ಪರಿಚಯಿಸಿ, ಸಸ್ಯಾಹಾರವನ್ನು ಪ್ರತ್ಯೇಕವಾಗಿ ಡೆಲಿವರಿ ಮಾಡುವ ನಿರ್ಧಾರ ಕೈಗೊಂಡೆವು ಎಂದು ದೀಪಿಂದರ್​ ತಿಳಿಸಿದ್ದರು. ಅಲ್ಲದೇ ಇದಕ್ಕಾಗಿ ಡೆಲಿವರಿ ಪಾರ್ಟನರ್​ಗಳಿಗೆ ಹಸಿರು ಬಣ್ಣದ ಉಡುಗೆ ಪರಿಚಯಿಸಿದೆ. ಹಸಿರು ಬಣ್ಣದಲ್ಲಿ ಡಬ್ಬದಲ್ಲಿ ಸಸ್ಯಹಾರ ಮತ್ತು ಕೆಂಪು ಬಣ್ಣದಲ್ಲಿ ಮಾಂಸಾಹಾರ ಸೇವೆಗೆ ಮುಂದಾಯಿತು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆ ಹಸಿರು ಬಣ್ಣದ ಉಡುಗೆಯನ್ನು ಹಿಂಪಡೆಯಲಾಯಿತು.

ಇದನ್ನೂ ಓದಿ: ಜೊಮಾಟೊ 'ಶುದ್ಧ ಸಸ್ಯಾಹಾರ ಮೋಡ್‌'ಗೆ ಪರ-ವಿರೋಧ ಪ್ರತಿಕ್ರಿಯೆ: Zomato ಸಿಇಒ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.