ETV Bharat / bharat

ಸಮವಸ್ತ್ರವು ಲಿಂಗ ಭೇದ ಮಾಡುವುದಿಲ್ಲ: ಕ್ಯಾಪ್ಟನ್ ಸುಮನ್ ಸಿಂಗ್

author img

By ETV Bharat Karnataka Team

Published : Jan 23, 2024, 7:11 PM IST

ಕ್ಯಾಪ್ಟನ್ ಸುಮನ್ ಸಿಂಗ್
ಕ್ಯಾಪ್ಟನ್ ಸುಮನ್ ಸಿಂಗ್

ಈ ಬಾರಿ ದೆಹಲಿಯಲ್ಲಿ ನಡೆಯಲಿರುವ 75ನೇ ಗಣರಾಜ್ಯೋತ್ಸವ ಪರೇಡ್​ನಲ್ಲಿ ಥೀಮ್ 'ನಾರಿ ಶಕ್ತಿ' ಇರಲಿದೆ.

ನವದೆಹಲಿ : ರಕ್ಷಣಾ ಪಡೆಗಳು ಪುರುಷ ಪ್ರಾಬಲ್ಯದ ವಲಯ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ, ಈ ವಿಶಿಷ್ಟ ಪುರುಷ ಪ್ರಾಬಲ್ಯದ ನಂಬಿಕೆಯನ್ನು ಧಿಕ್ಕರಿಸಿ, ಈ ಬಾರಿ 75 ನೇ ಗಣರಾಜ್ಯೋತ್ಸವ ಪರೇಡ್​ನಲ್ಲಿ ಥೀಮ್ 'ನಾರಿ ಶಕ್ತಿ' ಪಡೆ ಭಾಗವಹಿಸಲಿದೆ.

ಮುಂಬರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಕಮಾಂಡಿಂಗ್ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಲವಾರು ಮಹಿಳಾ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಿದರು. ಸರ್ವತ್ರ ಸೇತುವೆಯ ಕೋರ್ ಆಫ್ ಇಂಜಿನಿಯರ್ ಕ್ಯಾಪ್ಟನ್ ಸುಮನ್ ಸಿಂಗ್ ಅವರು ಈಟಿವಿ ಭಾರತ್‌ದೊಂದಿಗೆ ಮಾತನಾಡುತ್ತಾ, ಭಾರತೀಯ ಸೇನೆಗೆ ಸೇರುವಲ್ಲಿ ಆಕೆಯ ಹಿಂದಿನ ಹೋರಾಟಗಳು ಮತ್ತು ಪ್ರೇರಣೆಯ ಬಗ್ಗೆ ಮಾತನಾಡಿದರು.

"ನನ್ನ ತಂದೆ ಮಧ್ಯಪ್ರದೇಶದಲ್ಲಿ ಅರಣ್ಯ ಇಲಾಖೆಯಲ್ಲಿ ಅಕೌಂಟೆಂಟ್ ಆಗಿದ್ದರೆ, ನನ್ನ ಸಹೋದರ ಮಧ್ಯಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್​​​​ಟೇಬಲ್​​ ಆಗಿದ್ದಾರೆ. ನನ್ನ ಸಹೋದರ ಮೊದಲಿನಿಂದಲೂ ನನಗೆ ತುಂಬಾ ಬೆಂಬಲ ನೀಡುತ್ತಿದ್ದಾರೆ" ಎಂದು ಕ್ಯಾಪ್ಟನ್ ಸುಮನ್ ಸಿಂಗ್ ಅವರು ಹೇಳಿದರು.

"ನಾನು ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ನನ್ನ ಇಡೀ ಕುಟುಂಬದಲ್ಲಿ ನಾನು ಮೊದಲ ಮಹಿಳಾ ಅಧಿಕಾರಿ" ಎಂದು ಅವರು ಹೆಮ್ಮೆ ಕೂಡಾ ವ್ಯಕ್ತಪಡಿಸಿದರು. ರಕ್ಷಣಾ ಪಡೆಗಳು ಪುರುಷ ಪ್ರಾಬಲ್ಯದ ಪ್ರದೇಶವಾಗಿದೆ ಎಂಬ ವಿಶಿಷ್ಟ ಗ್ರಹಿಕೆಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, "ಇದು ಸತ್ಯವಲ್ಲ. ನಾವು ಸಮವಸ್ತ್ರದಲ್ಲಿದ್ದರೆ, ನೀವು ಯಾರು ಎಂಬುದು ಮುಖ್ಯವಲ್ಲ" ಎಂದು ವ್ಯಂಗ್ಯವಾಡಿದರು.

ಅದೇ ರೀತಿ, ಗಣರಾಜ್ಯೋತ್ಸವ 2024 ರ ಪರೇಡ್‌ನಲ್ಲಿ ಭಾಗವಹಿಸಲಿರುವ ಇನ್ನೋರ್ವ ಮಹಿಳಾ ಅಧಿಕಾರಿ ಲೆಫ್ಟಿನೆಂಟ್ ದೀಪ್ತಿ ರಾಣಾ ಅವರು ಮಾತನಾಡಿ, "ಇದೊಂದು ಉತ್ತಮ ಅನುಭವ. ನಾವು ದೀರ್ಘಕಾಲ ಅಭ್ಯಾಸ ಮಾಡುತ್ತಿದ್ದೇವೆ ಮತ್ತು ಜನವರಿ 26 ರಂದು ದೆಹಲಿ ತಲುಪಲು ನಾವು ಸಿದ್ಧರಾಗಿದ್ದೇವೆ." ಎಂದರು.

ರಕ್ಷಣಾ ಪಡೆಗಳು ಪುರುಷ ಪ್ರಾಬಲ್ಯದ ಪ್ರದೇಶಗಳು ಎಂಬ ವಿಶಿಷ್ಟ ಗ್ರಹಿಕೆಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, "ಸಮವಸ್ತ್ರವು ಲಿಂಗವನ್ನು ನೋಡುವುದಿಲ್ಲ. ನಾವೆಲ್ಲರೂ ಸಮಾನವಾಗಿ ಪರಿಗಣಿಸಲ್ಪಡುತ್ತೇವೆ ಮತ್ತು ನೀವು ಗಂಡು ಅಥವಾ ಹೆಣ್ಣು ಎಂಬುದು ಮುಖ್ಯವಲ್ಲ" ಎಂದು ತಿಳಿಸಿದರು.

ಭಾರತೀಯ ಸೇನೆಯಲ್ಲಿ ಮೊದಲ ಬಾರಿಗೆ ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆಗೊಂಡ ಐವರು ಮಹಿಳಾ ಅಧಿಕಾರಿಗಳಲ್ಲಿ ನಾಲ್ವರು ಈ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಲೆಫ್ಟಿನೆಂಟ್‌ಗಳಾದ ದೀಪ್ತಿ ರಾಣಾ, ಅನಿಕಾ ಸೆವ್ದಾ, ಆದ್ಯ ಝಾ ಮತ್ತು ಹೆಚ್ ಎನೋನಿ ಸೇರಿದ್ದಾರೆ.

ಇದನ್ನೂ ಓದಿ : ಗಣರಾಜ್ಯೋತ್ಸವ ಪರೇಡ್​ಗೆ ಪಂಜಾಬ್​ ಟ್ಯಾಬ್ಲೋ ನಿಗದಿತ ಥೀಮ್​ನಲ್ಲಿ ರೂಪಿಸಿಲ್ಲ: ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.