ETV Bharat / bharat

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಸಚಿನ್ ತೆಂಡೂಲ್ಕರ್, ಸೈನಾ ನೆಹ್ವಾಲ್, ಅನಿಲ್ ಕುಂಬ್ಳೆ ಭಾಗಿ

author img

By ETV Bharat Karnataka Team

Published : Jan 22, 2024, 5:09 PM IST

ಅಯೋಧ್ಯೆಯಲ್ಲಿ ಜರುಗಿದ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಕ್ರೀಡಾಪಟುಗಳು ಭಾಗಿಯಾಗಿ ರಾಮಲಲ್ಲನ ದರ್ಶನ ಪಡೆದು ಪುನೀತರಾದರು.

ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ಅಯೋಧ್ಯೆ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ಭಗವಾನ್ ರಾಮ ಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ವೈಭವಪೇತವಾಗಿ ನೆರವೇರಿತು. ಈ ನಿಟ್ಟಿನಲ್ಲಿ ಜೈ ಶ್ರೀ ರಾಮ್‌ನ ದಿವ್ಯ ಘೋಷಗಳ ಪ್ರತಿಧ್ವನಿಯು ನಗರದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರತಿಧ್ವನಿಸಿದೆ. ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ರಾಜಕಾರಣಿಗಳು, ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಭಾರತದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಶಟ್ಲರ್ ಸೈನಾ ನೆಹ್ವಾಲ್ ಮತ್ತು ಪಿಟಿ ಉಷಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆದರು.

ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಮೊದಲು, ತೆಂಡೂಲ್ಕರ್ ಸಾಂಪ್ರದಾಯಿಕ ಕುರ್ತಾ ಪೈಜಾಮಾದಲ್ಲಿ ಕಾಣಿಸಿಕೊಂಡರು. ಯುಗದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಕುಂಬ್ಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲನ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸೆಲ್ಫಿ ತೆಗೆದುಕೊಂಡು ಪೋಸ್ಟ್​ವೊಂದನ್ನು ಕೂಡಾ ಮಾಡಿದ್ದಾರೆ "ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂತೋಷವಾಗಿದೆ. ಅತ್ಯಂತ ಐತಿಹಾಸಿಕ ಮತ್ತು ರಾಮ್ ಲಲ್ಲಾ ಅವರ ಆಶೀರ್ವಾದವನ್ನು ಪಡೆಯಲು ಎದುರು ನೋಡುತ್ತಿದ್ದೇನೆ. ಈ ಸಂದರ್ಭದ ಭಾಗವಾಗುವುದು ಸ್ವತಃ ಅದ್ಭುತವಾದ ಭಾವನೆ ಮತ್ತು ನಿಜವಾಗಿಯೂ ಆಶೀರ್ವಾದವಾಗಿದೆ. ಇದು ಅಯೋಧ್ಯೆಗೆ ನನ್ನ ಮೊದಲ ಭೇಟಿಯಾಗಿದೆ. ನಾನು ಇಲ್ಲಿಗೆ ಬರಲು ಮತ್ತು ರಾಮನ ದೈವಿಕ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುತ್ತೇನೆ'' ಎಂದು ಕುಂಬ್ಳೆ ಪೋಸ್ಟ್​ನಲ್ಲಿಅಡಿ ಬರಹವನ್ನು ಹಾಕಿದ್ದಾರೆ.

ಸಂತಸವನ್ನು ಹೇಳಲು ಪದಗಳು ಸಿಗ್ತಿಲ್ಲ- ನೆಹ್ವಾಲ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ ‘ಪ್ರಾಣ ಪ್ರತಿಷ್ಠಾಪನಾ’ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನನ್ನ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಭಾರತದ ಒಲಂಪಿಕ್ ಪದಕ ವಿಜೇತ ಶಟ್ಲರ್ ಸೈನಾ ನೆಹ್ವಾಲ್ ಅವರು ಹೇಳಿದ್ದಾರೆ. ಇದೇ ವೇಳೆ ಭವಿಷ್ಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಅವರು ಭಾರತೀಯರನ್ನು ಒತ್ತಾಯಿಸಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ರನ್ ಸ್ಕೋರರ್ ಮಿಥಾಲಿ ರಾಜ್ ಅವರು, ನಾವೆಲ್ಲರೂ ದೀರ್ಘಕಾಲದಿಂದ ಇದನ್ನು ಬಯಸಿದ್ದೆವು ಎಂದು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ದೊಡ್ಡ ಸಂದರ್ಭದಲ್ಲಿ ಇಲ್ಲಿಗೆ ಬರಲು ಮತ್ತು ಈ ಆಚರಣೆಯ ಭಾಗವಾಗಿರಲು ನಾವು ಸಂತೋಷಪಡುತ್ತೇವೆ. ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಶನಿವಾರದಂದು ಪವಿತ್ರ ನಗರವನ್ನು ಸ್ಪರ್ಶಿಸಿದ್ದು, ಆಚರಣೆಯಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. 'ಎಕ್ಸ್' ಆ್ಯಪ್​ ಮೂಲಕ ಸಮಾರಂಭದ ನಿರಂತರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಭಾರತೀಯ ಒಲಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಅವರು ಸರಯೂ ನದಿಯ ದಡದಲ್ಲಿರುವ ಘಾಟ್‌ಗಳಿಗೆ ಭೇಟಿ ನೀಡಿದ್ದು, ಸೋಮವಾರ ಮುಂಜಾನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಅಲ್ಲಿ ನೆರೆದಿದ್ದ ಸ್ಥಳೀಯರು ಮತ್ತು ಭಕ್ತರೊಂದಿಗೆ ಅವರು ಸಂವಾದ ನಡೆಸಿದರು. ತದನಂತರ ಈ ಬಗ್ಗೆ ಮಾತನಾಡಿದ ಅವರು, "ಸರಯೂ ನದಿಯ ದಡದಲ್ಲಿ ಶಾಂತಿ ಮತ್ತು ದೈವಿಕ ಶಾಂತಿಯನ್ನು ಅನುಭವಿಸಿದೆ. ನದಿಯು ಅಯೋಧ್ಯೆ ಮತ್ತು ಭಗವಾನ್ ರಾಮನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ತನ್ನ ಸಂಪತ್ತು ಜನರನ್ನು ಆಶೀರ್ವದಿಸುತ್ತಿದೆ" ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.