ETV Bharat / bharat

ಕಲ್ಲಿದ್ದಲು ಉದ್ಯಮಿ ಕೊಲ್ಲಲು ಸ್ಕೆಚ್​; ಬಿಷ್ಣೋಯ್ ಗ್ಯಾಂಗ್​ನ ನಾಲ್ವರು ಶೂಟರ್​ಗಳು ಅರೆಸ್ಟ್​ - Shooters Arrested

author img

By ETV Bharat Karnataka Team

Published : May 26, 2024, 8:03 PM IST

ಛತ್ತೀಸ್‌ಗಢ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಮತ್ತು ಅಮನ್ ಸಾಹು ಗ್ಯಾಂಗ್‌ನ ಶೂಟರ್‌ಗಳನ್ನು ಸೆರೆ ಹಿಡಿದಿದ್ದಾರೆ. ಈ ಎರಡೂ ತಂಡಗಳ ನಾಲ್ವರು ಶೂಟರ್‌ಗಳ ಹೆಡೆಮುರಿ ಕಟ್ಟಿದ್ದಾರೆ.

ACTION ON GANGSTER SHOOTERS OF LAWRENCE BISHNOI  LAWRENCE BISHNOI AND AMAN SAHU GANG  BUSINESSMEN
ಕಲ್ಲಿದ್ದಲು ಉದ್ಯಮಿ ಕೊಲ್ಲಲು ಸ್ಕೆಚ್ (ಕೃಪೆ: ETV Bharat Chhattisgarh)

ರಾಯ್‌ಪುರ (ಛತ್ತೀಸ್‌ಗಢ): ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಅಮನ್ ಸಾಹು ಗ್ಯಾಂಗ್‌ನ ನಾಲ್ವರು ಶೂಟರ್‌ಗಳನ್ನು ರಾಯ್‌ಪುರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಒಬ್ಬ ಶೂಟರ್ ಮತ್ತು ರಾಯ್​ಪುರದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲಾ ಶೂಟರ್‌ಗಳು ಉದ್ಯಮಿಯೊಬ್ಬರನ್ನು ಕೊಲ್ಲುವ ಉದ್ದೇಶದಿಂದ ಛತ್ತೀಸ್‌ಗಢ ತಲುಪಿದ್ದರು. ರಾಯಪುರ ಪೊಲೀಸರು ಅವರಿಂದ ಪಿಸ್ತೂಲ್, ಖಾಲಿ ಮ್ಯಾಗಜೀನ್ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಶೂಟರ್‌ಗಳ ಬಂಧನದ ನಂತರ ಈ ಸಂಪೂರ್ಣ ಘಟನೆಯನ್ನು ರಾಯ್‌ಪುರ ಐಜಿ ಅಮರೇಶ್ ಮಿಶ್ರಾ ಬಹಿರಂಗಪಡಿಸಿದ್ದಾರೆ.

ನಾಲ್ವರು ಅಂತಾರಾಜ್ಯ ಶೂಟರ್‌ಗಳ ಬಂಧನ: 72 ಗಂಟೆಗಳ ಕಾರ್ಯಾಚರಣೆಯ ನಂತರ ನಾಲ್ವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಐಜಿ ಅಮರೇಶ್ ಮಿಶ್ರಾ ರಾಯ್‌ಪುರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು. ಈ ಶೂಟರ್‌ಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಅಮನ್ ಸಾಹು ಗ್ಯಾಂಗ್‌ನ ಸದಸ್ಯರು. ರಾಯ್​ಪುರ ಪೊಲೀಸರು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ 72 ಗಂಟೆಗಳ ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿದ ನಂತರ ಈ ಯಶಸ್ಸು ಸಾಧಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು.

ಶೂಟರ್‌ಗಳು ಎಲ್ಲಿಯವರು: ರಾಯ್‌ಪುರ ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಲ್ವರು ಶೂಟರ್‌ಗಳು ಜಾರ್ಖಂಡ್ ಮತ್ತು ರಾಜಸ್ಥಾನಕ್ಕೆ ಸೇರಿದವರು. ಶೂಟರ್ ರೋಹಿತ್ ಸ್ವರ್ಣಕರ್ ಜಾರ್ಖಂಡ್‌ನ ಬೋಕಾರಾ ನಿವಾಸಿ. ಮುಕೇಶ್ ಕುಮಾರ್, ದೇವೇಂದ್ರ ಸಿಂಗ್ ಮತ್ತು ಪಪ್ಪು ಸಿಂಗ್ ರಾಜಸ್ಥಾನದ ಪಾಲಿ ಜಿಲ್ಲೆಯ ನಿವಾಸಿಗಳು. ಈ ಶೂಟರ್‌ಗಳು ದರೋಡೆಕೋರರಾದ ​​ಲಾರೆನ್ಸ್ ಬಿಷ್ಣೋಯ್ ಮತ್ತು ಅಮನ್ ಸಾಹು ಗ್ಯಾಂಗ್‌ಗೆ ಸಂಪರ್ಕ ಹೊಂದಿದ್ದಾರೆ. ನಾಲ್ವರೂ ಈ ಎರಡೂ ಗ್ಯಾಂಗ್‌ಗಳಿಗೆ ಹತ್ತಿರವಿರುವ ಮಯಾಂಕ್ ಸಿಂಗ್‌ನಿಂದ ಇನ್‌ಪುಟ್‌ಗಳನ್ನು ಪಡೆಯುತ್ತಿದ್ದರು. ನಂತರ ಅವರು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಈ ಎಲ್ಲಾ ಶೂಟರ್‌ಗಳು ಕಲ್ಲಿದ್ದಲು ಉದ್ಯಮಿಯಿಂದ ಹಣ ವಸೂಲಿ ಮಾಡುತ್ತಿದ್ದರು. ಈ ನಾಲ್ವರು ಶೂಟರ್‌ಗಳು ಕಲ್ಲಿದ್ದಲು ಉದ್ಯಮಿ ವಸೂಲಿ ಮೊತ್ತವನ್ನು ನೀಡಲು ನಿರಾಕರಿಸಿದಾಗ ಆತನ ಕೊಲೆಗೆ ಸಂಚು ರೂಪಿಸಿದ್ದರು. ಇವರೆಲ್ಲರೂ ಇದೇ ಉದ್ದೇಶದಿಂದ ರಾಯ್​ಪುರ ತಲುಪಿದ್ದರು. ಛತ್ತೀಸ್‌ಗಢ ಪೊಲೀಸರಿಗೆ ಈ ವಿಷಯ ಮೊದಲೇ ತಿಳಿದಿತ್ತು. ಇದಾದ ನಂತರ ಎಸಿಬಿ ತಂಡ ಈ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿತ್ತು. ತನಿಖೆ ನಂತರ ಎಲ್ಲಾ ನಾಲ್ವರನ್ನು ಬಂಧಿಸಲಾಯಿತು ಎಂದು ಐಜಿ ಅಮರೇಶ್ ಮಿಶ್ರಾ ಹೇಳಿದರು.

ಬಂಧಿತ ಶೂಟರ್‌ಗಳ ವಿವರ:

  • 26 ವರ್ಷದ ರೋಹಿತ್ ಸ್ವರ್ಣಕರ್- ಬೊಕಾರೊದ ಚಾಸ್​ನಲ್ಲಿ ಬಂಧನ
  • 26 ವರ್ಷದ ಮುಕೇಶ್ ಕುಮಾರ್ ಎಂಬ ಶೂಟರ್ ಅನ್ನು ರಾಜಸ್ಥಾನದ ಪಾಲಿಯಿಂದ ಬಂಧಿಸಲಾಗಿದೆ.
  • 20 ವರ್ಷದ ಶೂಟರ್ ದೇವೆಂದ್​ರನ್ನು ರಾಜಸ್ಥಾನದ ಪಾಲಿಯಲ್ಲಿ ಬಂಧಿಸಲಾಗಿದೆ.
  • 31 ವರ್ಷದ ಪಪ್ಪು ಸಿಂಗ್ ಅನ್ನು ರಾಜಸ್ಥಾನದ ಪಾಲಿಯಿಂದ ಹಿಡಿಯುವಲ್ಲಿ ಯಶಸ್ಸು ಸಾಧಿಸಲಾಗಿದೆ.

ನಾಲ್ವರೂ ಮಲೇಷ್ಯಾದಿಂದ ಕಾರ್ಯಾಚರಣೆ: ತನಿಖೆಯ ನಂತರ ರಾಯ್‌ಪುರ ಪೊಲೀಸರು ಎಲ್ಲಾ ನಾಲ್ವರು ಶೂಟರ್‌ಗಳು ಮಲೇಷ್ಯಾದಿಂದ ತಮ್ಮ ಹ್ಯಾಂಡ್ಲರ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಬಹಿರಂಗಪಡಿಸಿದರು. ಅಮನ್ ಸಾಹು ಅವರ ಗ್ಯಾಂಗ್ ಅನ್ನು ಪ್ರಸ್ತುತ ಮಲೇಷ್ಯಾದಲ್ಲಿ ಕುಳಿತು ಮಯಾಂಕ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಮತ್ತು ಅಮನ್ ಸಾಹು ಅವರ ಆಜ್ಞೆಯ ಮೇರೆಗೆ ಈ ಗ್ಯಾಂಗ್ ಕೊಲೆಯಂತಹ ಘಟನೆಗಳನ್ನು ನಡೆಸುತ್ತದೆ.

ಮಯಾಂಕ್ ಸಿಂಗ್ ಜೊತೆ ಸಂಬಂಧ ಹೊಂದಿದ್ದ ಶೂಟರ್‌ಗಳು: ಎಲ್ಲಾ ನಾಲ್ವರು ಶೂಟರ್‌ಗಳು ಮಯಾಂಕ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಮಾಯಾಂಕ್ ಸಿಂಗ್ ಲಾರೆನ್ಸ್ ಬಿಷ್ಣೋಯ್ ಮತ್ತು ಅಮನ್ ಸಾಹು ಅವರೊಂದಿಗೆ ಸಂಬಂಧ ಹೊಂದಿದ್ದರು. ಮಾಯಾಂಕ್ ಸಿಂಗ್ ಅವರು ಲಾರೆನ್ಸ್ ಬಿಷ್ಣೋಯ್ ಮತ್ತು ಅಮನ್ ಸಾಹು ಅವರಿಂದ ಪಡೆದ ಸೂಚನೆಗಳ ಆಧಾರದ ಮೇಲೆ ಮಲೇಷ್ಯಾದಿಂದ ತಮ್ಮ ಕಾರ್ಯಾಚರಣೆ ನಿರ್ವಹಿಸುತ್ತಿದ್ದರು.

ಓದಿ: ಹುಬ್ಬಳ್ಳಿ: ಅಂಜಲಿ ಹಂತಕನಿಗೆ ಸಿಐಡಿ ಅಧಿಕಾರಿಗಳಿಂದ ಡ್ರಿಲ್, ಚುರುಕುಗೊಂಡ ತನಿಖೆ - Anjali murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.