ETV Bharat / bharat

ಎನ್​ಕೌಂಟರ್​: ಇಬ್ಬರು ಮಹಿಳೆಯರು ಸೇರಿ ಏಳು ನಕ್ಸಲೀಯರನ್ನು ಹೊಡೆದುರುಳಿಸಿದ ಸೇನೆ - Encounter

author img

By ETV Bharat Karnataka Team

Published : Apr 30, 2024, 1:50 PM IST

NAXAL ENCOUNTER IN BASTAR  DRG AND STF FORCES  CHHATTISGARH  POLICE AND NAXALITES
vಎನ್​ಕೌಂಟರ್​: ಇಬ್ಬರು ಮಹಿಳೆಯರು ಸೇರಿ ಏಳು ನಕ್ಸಲೀಯರನ್ನು ಹೊಡೆದುರುಳಿಸಿದ ಸೇನೆ

ನಾರಾಯಣಪುರದ ಅಬುಜ್ಮದ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದ್ದು, ಇಬ್ಬರು ಮಹಿಳೆಯರು ಸೇರಿದಂತೆ 7 ನಕ್ಸಲೀಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ನಾರಾಯಣಪುರ (ಛತ್ತೀಸ್‌ಗಢ): ನಕ್ಸಲ್ ಪೀಡಿತ ಬಸ್ತಾರ್ ವಿಭಾಗದ ನಾರಾಯಣಪುರ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಮತ್ತೊಮ್ಮೆ ಎನ್‌ಕೌಂಟರ್ ನಡೆಯುತ್ತಿದೆ. ಈ ಎನ್​ಕೌಂಟರ್​ನಲ್ಲಿ ಸೈನಿಕರು 7 ನಕ್ಸಲೀಯರನ್ನು ಕೊಂದಿದ್ದಾರೆ. ಘಟನಾ ಸ್ಥಳದಿಂದ 2 ಮಹಿಳೆಯರು ಸೇರಿದಂತೆ ಒಟ್ಟು 7 ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಸ್ತಾರ್ ಐಜಿ ಸುಂದರರಾಜ್ ಪಿ ಅವರು ಈ ಎನ್‌ಕೌಂಟರ್ ಅನ್ನು ಖಚಿತಪಡಿಸಿದ್ದಾರೆ. ಬಸ್ತಾರ್ ಐಜಿ ಸುಂದರರಾಜ್ ಪಿ ರಿಂದ ನಾರಾಯಣಪುರ ಎಸ್ಪಿ ಪ್ರಭಾತ್ ಕುಮಾರ್ ಈ ಎನ್‌ಕೌಂಟರ್ ಮೇಲೆ ನಿಗಾ ಇಟ್ಟಿದ್ದಾರೆ.

ಮುಂದುವರಿದ ಎನ್‌ಕೌಂಟರ್: ಛತ್ತೀಸ್‌ಗಢ - ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಾರಾಯಣಪುರ ಜಿಲ್ಲೆಯ ಅಬುಜ್ಮದ್ ವ್ಯಾಪ್ತಿಯ ಟೆಕ್ಮೆಟಾ ಮತ್ತು ಕಾಕೂರ್ ಅರಣ್ಯದಲ್ಲಿ ಈ ಎನ್‌ಕೌಂಟರ್ ನಡೆಯುತ್ತಿದೆ. ಹಲವೆಡೆ ನಕ್ಸಲೀಯರನ್ನು ಸೈನಿಕರು ಸುತ್ತುವರೆದಿರುವ ಸುದ್ದಿಯೂ ಇದೆ. ಈಗಲೂ ನಾರಾಯಣಪುರ - ಕಂಕೇರ್ - ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಡಿಆರ್‌ಜಿ, ಎಸ್‌ಟಿಎಫ್ ಯೋಧರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಭದ್ರತಾ ಪಡೆಗಳ ಜಂಟಿ ತಂಡ ನಕ್ಸಲೀಯರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಎನ್‌ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.

ಏಳು ನಕ್ಸಲೀಯರ ಹತ್ಯೆ: ನಾರಾಯಣಪುರ ಡಿಆರ್‌ಜಿ ಮತ್ತು ಎಸ್‌ಟಿಎಫ್‌ನ ಜಂಟಿ ತಂಡ ನಕ್ಸಲೀಯರ ವಿರುದ್ಧ ಪ್ರತಿದಾಳಿ ನಡೆಸಿದೆ. ಭದ್ರತಾ ಪಡೆ ಸಿಬ್ಬಂದಿ ಅಬುಜ್ಮದ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಎನ್​​ಕೌಂಟರ್​ ನಡೆದಿದೆ. ಇಬ್ಬರು ಮಹಿಳಾ ನಕ್ಸಲೀಯರು ಸೇರಿದಂತೆ 7 ನಕ್ಸಲೀಯರನ್ನು ಯೋಧರು ಹೊಡೆದುರುಳಿಸಿದ್ದಾರೆ. ಘಟನಾ ಸ್ಥಳದಿಂದ ಯೋಧರು 7 ಮೃತದೇಹಗಳು ಮತ್ತು ಅಪಾರ ಪ್ರಮಾಣದ ನಕ್ಸಲೀಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹಲವು ನಕ್ಸಲೀಯರು ಗಾಯಗೊಂಡಿದ್ದಾರೆ ಎಂದು ಯೋಧರು ಹೇಳಿದ್ದಾರೆ.

ಓದಿ: 3 ವರ್ಷಗಳ ಹಿಂದಿನ ರೀಲ್ಸ್​ ತಂದ ಆಪತ್ತು​: ಕೈಯಲ್ಲಿದ್ದ 'ಆ ವಸ್ತು'ವಿನಿಂದಾಗಿ ಯುವತಿಗೆ ಪೊಲೀಸ್​ ಬುಲಾವ್​ - girl viral video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.