ETV Bharat / bharat

ಲಡಾಖ್​ನಲ್ಲಿ 3.0, ಚೀನಾದಲ್ಲಿ 5.8 ತೀವ್ರತೆಯ ಭೂಕಂಪ

author img

By ANI

Published : Feb 25, 2024, 5:17 PM IST

earthquake hits Ladakh  earthquake  ರಿಕ್ಟರ್​ ಮಾಪಕ  ಭಾರತ ಚೀನಾದಲ್ಲಿ ಭೂಕಂಪ
ರಿಕ್ಟರ್​ ಮಾಪಕದಲ್ಲಿ 3.0, 5.8 ದಾಖಲು

ಲಡಾಖ್‌ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.0 ಎಂದು ಅಳೆಯಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿಯನ್ನು ನೀಡಿದೆ.

ಕಾರ್ಗಿಲ್ ​(ಲಡಾಖ್‌): ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಇಂದು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.0 ಎಂದು ಅಳೆಯಲಾಗಿದೆ. ಭೂಕಂಪದ ಆಳವು ಭೂಮಿಯ ಮೇಲ್ಮೈಯಿಂದ ಐದು ಕಿಲೋಮೀಟರ್ ಒಳಗೆ ಇದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಈ ಮಾಹಿತಿಯನ್ನು ನೀಡಿದೆ. ಸದ್ಯ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಮಾಹಿತಿ ದೊರೆತಿಲ್ಲ. ಭೂಕಂಪದ ಅನುಭವವಾದ ತಕ್ಷಣ ಜನರು ಭಯಭೀತರಾಗಿದ್ದರು.

ಚೀನಾದಲ್ಲಿ ಪ್ರಬಲ ಭೂಕಂಪ: ಚೀನಾದ ವಾಯವ್ಯ ಕ್ಸಿನ್‌ಜಿಯಾಂಗ್ ಪ್ರದೇಶದ ಅಕಿ ಕೌಂಟಿಯಲ್ಲಿ ಇಂದು ಮಧ್ಯಾಹ್ನ 12:14 ಕ್ಕೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಈ ಮಾಹಿತಿಯನ್ನು ನೀಡಿದೆ.

ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರದ ಪ್ರಕಾರ, ಭೂಕಂಪವು ಸುಮಾರು 11 ಕಿಲೋಮೀಟರ್ (6.8 ಮೈಲಿಗಳು) ಆಳದಲ್ಲಿ ಸಂಭವಿಸಿದೆ. ಚೀನಾದ ಸ್ಥಳೀಯ ಅಧಿಕಾರಿಗಳ ಪ್ರಕಾರ, ಭೂಕಂಪನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದೆ. ಆದರೆ, ಯಾವುದೇ ಪ್ರಾಣಹಾನಿ ಅಥವಾ ಮನೆ ಕುಸಿತದ ಬಗ್ಗೆ ಇನ್ನೂ ವರದಿಯಾಗಿಲ್ಲ. ಭೂಕಂಪದ ಕೇಂದ್ರಬಿಂದುವಿನ ಸುತ್ತಲಿನ ಪ್ರದೇಶಗಳು ಅತಿಯಾದ ಜನಸಂಖ್ಯೆಯನ್ನು ಹೊಂದಿವೆ.

ಭೂಕಂಪ ಸಂಭವಿಸಿದ ಪ್ರದೇಶದಲ್ಲಿ ರೈಲು ಸಂಚಾರ ಸುಗಮವಾಗಿ ಮುಂದುವರೆಯಿತು. ಜನವರಿ 23 ರಂದು, ಕಿರ್ಗಿಸ್ತಾನ್-ಕ್ಸಿನ್‌ಜಿಯಾಂಗ್ ಗಡಿ ಪ್ರದೇಶದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಪರಿಣಾಮವಾಗಿ ಮೂರು ಜನರು ಸಾವನ್ನಪ್ಪಿದ್ದರು.

ಭೂಕಂಪಗಳು ಏಕೆ ಸಂಭವಿಸುತ್ತವೆ?: ಭೂಮಿಯೊಳಗೆ 7 ಫಲಗಳಿವೆ. ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಒಂದಕ್ಕೊಂದು ಘರ್ಷಣೆಯಾಗುವ ವಲಯವನ್ನು ದೋಷ ರೇಖೆ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ ಫಲಕಗಳ ಮೂಲೆಗಳು ಬಾಗುತ್ತವೆ. ಒತ್ತಡ ಹೆಚ್ಚಾದಾಗ, ಫಲಕಗಳು ಒಡೆಯಲು ಪ್ರಾರಂಭಿಸುತ್ತವೆ. ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ ಮತ್ತು ಅಡಚಣೆಯ ನಂತರ ಭೂಕಂಪ ಸಂಭವಿಸುತ್ತದೆ.

ಓದಿ:ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತಸಹಿತ ಭಾರೀ ಮಳೆ: ಅನಾಹುತದ ಫೋಟೋಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.