ETV Bharat / bharat

ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್​: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet

author img

By PTI

Published : Mar 23, 2024, 3:06 PM IST

IN MESSAGE FROM ED CUSTODY  KEJRIWAL SAYS NO BAR CAN KEEP HIM  SUNITA KEJRIWAL NEWS
ಸಂದೇಶವನ್ನು ಜನರಿಗೆ ಮುಟ್ಟಿಸಿದ ಪತ್ನಿ ಸುನೀತಾ

Sunita kejriwal Press Conference: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರೋಸ್ ಅವೆನ್ಯೂ ಕೋರ್ಟ್ ಇಡಿ ರಿಮಾಂಡ್‌ಗೆ ಕಳುಹಿಸಿದೆ. ಆಮ್ ಆದ್ಮಿ ಪಕ್ಷವು ಈ ಕ್ರಮ ಸರಿಯಲ್ಲ ಎಂದು ನಿರಂತರವಾಗಿ ಆರೋಪಿಸುತ್ತಿದೆ. ಇನ್ನು ಸಿಎಂ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಕೂಡ ಸಿಎಂ ಕೇಜ್ರಿವಾಲ್ ಸಂದೇಶವನ್ನು ಮಾಧ್ಯಮಗಳ ಮುಂದೆ ಓದಿ ಹೇಳಿದ್ದಾರೆ.

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರೋಸ್ ಅವೆನ್ಯೂ ಕೋರ್ಟ್ ಇಡಿ ರಿಮಾಂಡ್‌ಗೆ ಕಳುಹಿಸಿದೆ. ಕೋರ್ಟ್​​​​​ನ ಈ ಕ್ರಮದ ಬಗ್ಗೆ ಆಮ್ ಆದ್ಮಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ಸಿಎಂ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಕೂಡ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಕೇಜ್ರಿವಾಲ್ ಅವರ ಸಂದೇಶವನ್ನು ಓದಿ ಹೇಳಿದ ಸುನಿತಾ ಅವರು.., 'ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ನಾನು ಶೀಘ್ರದಲ್ಲೇ ಹೊರಬರುತ್ತೇನೆ. ನಾನು ನೀಡಿದ ಎಲ್ಲ ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇನೆ. ಸಮಾಜ ಸೇವಾ ಕಾರ್ಯ ನಿಲ್ಲಬಾರದು' ಅಂತಾ ಸುನಿತಾ ಕೇಜ್ರಿವಾಲ್ ಅವರು ತಮ್ಮ ಪತಿ ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಒಟ್ಟು 3 ನಿಮಿಷ 13 ಸೆಕೆಂಡುಗಳವರೆಗೆ ಓದಿ, ರಾಷ್ಟ್ರದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ನಾನು ಅರವಿಂದ್ ಕೇಜ್ರಿವಾಲ್ ಅವರ ಪತ್ನಿ, ಇಂದು ನಿಮ್ಮ ಮಗ, ನಿಮ್ಮ ಸಹೋದರ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ನಿಮಗೆ ನೀಡಿದ ಸಂದೇಶವನ್ನು ಓದಲು ಮುಂದೆ ಬಂದಿದ್ದೇನೆ ಎಂದು ಹೇಳಿದರು.

ಅರವಿಂದ್​ ಕೇಜ್ರಿವಾಲ್​ ಪತ್ರದಲ್ಲಿರುವ ಸಂದೇಶ: ನನ್ನ ಪ್ರೀತಿಯ ದೇಶವಾಸಿಗಳೇ.. ನಿನ್ನೆ ನನ್ನನ್ನು ಬಂಧಿಸಲಾಗಿದೆ. ನಾನು ಒಳಗೆ ಅಥವಾ ಹೊರಗೆ ಇರಲಿ ನಾನು ಪ್ರತಿ ಕ್ಷಣ ದೇಶಕ್ಕಾಗಿ ಸೇವೆ ಸಲ್ಲಿಸುತ್ತೇನೆ. ನನ್ನ ಜೀವನದ ಪ್ರತಿ ಕ್ಷಣವೂ ದೇಶಕ್ಕಾಗಿ ಮುಡಿಪಾಗಿದೆ. ನಾನು ಹುಟ್ಟಿದ್ದು ಹೋರಾಟಕ್ಕಾಗಿ. ನಾನು ಇಲ್ಲಿಯವರೆಗೆ ಸಾಕಷ್ಟು ಹೋರಾಟ ಮಾಡಿದ್ದೇನೆ ಮತ್ತು ಮುಂದೆಯೂ ನನ್ನ ಜೀವನದಲ್ಲಿ ದೊಡ್ಡ ಹೋರಾಟಗಳು ಬರೆಯಲ್ಪಟ್ಟಿವೆ. ಅದಕ್ಕಾಗಿ ಈ ಬಂಧನವು ನನಗೆ ಆಶ್ಚರ್ಯವನ್ನುಂಟುಮಾಡುವುದಿಲ್ಲ ಎಂದಿದ್ದಾರೆ ಎಂದು ಸುನೀತಾ ಹೇಳಿದರು.

ನಿನ್ನಿಂದ ನನಗೆ ತುಂಬಾ ಪ್ರೀತಿ ಸಿಕ್ಕಿದೆ. ನಾನು ಭಾರತದಂತಹ ಶ್ರೇಷ್ಠ ದೇಶದಲ್ಲಿ ಹುಟ್ಟಿದ್ದಕ್ಕೆ ನನ್ನ ಹಿಂದಿನ ಜನ್ಮದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರಬೇಕು. ನಾವೆಲ್ಲರೂ ಸೇರಿ ಭಾರತವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಬೇಕು. ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ನಂಬರ್ ಒನ್ ದೇಶವನ್ನಾಗಿ ಮಾಡಬೇಕು. ಭಾರತದ ಒಳಗೆ ಮತ್ತು ಹೊರಗೆ ಭಾರತವನ್ನು ದುರ್ಬಲಗೊಳಿಸುವ ಶಕ್ತಿಗಳಿವೆ. ಈ ಶಕ್ತಿಗಳನ್ನು ನಾವು ಎಚ್ಚರದಿಂದ ಗುರುತಿಸಬೇಕು. ಈ ಶಕ್ತಿಗಳನ್ನು ಸೋಲಿಸಬೇಕು. ಭಾರತದಲ್ಲಿಯೇ, ಅಂತಹವರು ಅನೇಕರಿದ್ದಾರೆ. ದೇಶಭಕ್ತರಾದ ಅನೇಕ ಶಕ್ತಿಗಳಿವೆ. ಭಾರತ ಮುಂದೆ ಸಾಗಬೇಕೆಂದ್ರೆ ನಾವು ಈ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಬೇಕು ಮತ್ತು ಅವುಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕೇಜ್ರಿವಾಲ್​ ಪತ್ರದಲ್ಲಿ ಹೇಳಿದ್ದಾರೆ ಎಂದು ಸುನೀತಾ ಓದಿ ಹೇಳಿದರು.

ಪತಿ ಬಗ್ಗೆ ಪತ್ನಿ ಸುನಿತಾ ಹೇಳಿದ್ದಿಷ್ಟು: ಇದಾದ ಬಳಿಕ ಮಾತನಾಡಿದ ಸುನಿತಾ ಕೇಜ್ರಿವಾಲ್, ಅರವಿಂದ್ ಕೇಜ್ರಿವಾಲ್ ಕಬ್ಬಿಣದಷ್ಟೇ ಬಲಿಷ್ಠ. ಕೇಜ್ರಿವಾಲ್ ಅವರು ದೇಶಕ್ಕೆ ನೀಡಿದ ಪ್ರತಿ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸಲಿದ್ದಾರೆ. ಜನರ ಪ್ರಾರ್ಥನೆ ಅರವಿಂದ್ ಕೇಜ್ರಿವಾಲ್ ಜೊತೆಗಿದೆ ಎಂದು ಹೇಳಿದರು.

'ಕೇಜ್ರಿವಾಲ್ ಒಳಗೆ ಹೋಗಿದ್ದಾರೆ ಎಂದು ದೆಹಲಿಯ ನನ್ನ ತಾಯಿ ಮತ್ತು ಸಹೋದರಿಯರು ಯೋಚಿಸುತ್ತಿರಬೇಕು. ಅವರಿಗೆ ಸಾವಿರ ರೂಪಾಯಿ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ? ಎಲ್ಲಾ ತಾಯಂದಿರು ಮತ್ತು ಸಹೋದರಿಯರು ತಮ್ಮ ಸಹೋದರ ಮತ್ತು ಮಗನ ಮೇಲೆ ನಂಬಿಕೆ ಇಡಬೇಕೆಂದು ನಾನು ಮನವಿ ಮಾಡುತ್ತೇನೆ ಎಂದರು.

ನಿಮ್ಮ ಸಹೋದರ ಮತ್ತು ನಿಮ್ಮ ಮಗನನ್ನು ದೀರ್ಘಕಾಲ ಒಳಗೆ ಇಡಲು ಯಾವುದೇ ಶಕ್ತಿಗಳಿಲ್ಲ. ನನಗೆ ಒಂದೇ ಒಂದು ವಿನಂತಿ ಇದೆ. ದಯವಿಟ್ಟು ಒಮ್ಮೆ ದೇವಸ್ಥಾನಕ್ಕೆ ಹೋಗಿ ನನಗಾಗಿ ದೇವರ ಆಶೀರ್ವಾದ ಪಡೆಯಿರಿ. ಕೋಟ್ಯಂತರ ಜನರ ಪ್ರಾರ್ಥನೆ ನನ್ನೊಂದಿಗಿದೆ. ಇದೇ ನನ್ನ ಶಕ್ತಿ. ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ನನ್ನ ಮನವಿ ಏನೆಂದರೆ ನನ್ನ ಬಂಧನದಿಂದ ಸಮಾಜ ಸೇವೆ ಮತ್ತು ಸಾರ್ವಜನಿಕ ಸೇವೆಯ ಕೆಲಸಗಳು ನಿಲ್ಲಬಾರದು. ಹೀಗಾಗಿ ಬಿಜೆಪಿಯವರನ್ನು ದ್ವೇಷಿಸಬಾರದು. ಅವರೆಲ್ಲರೂ ನಮ್ಮ ಸಹೋದರ ಸಹೋದರಿಯರು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ.. ಇಂತಿ ನಿಮ್ಮವರೇ ಆದ ಅರವಿಂದ್ ಕೇಜ್ರಿವಾಲ್ ಅಂತಾ ಬರೆದಿದ್ದಾರೆ ಅಂತಾ ಕೇಜ್ರಿವಾಲ್​ ಪತ್ನಿ ಸುನೀತಾ ಹೇಳಿದರು.

ಓದಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ: ಮತ್ತೊಬ್ಬ ಸಂಸದನನ್ನು ಉಚ್ಚಾಟಿಸಿದ ಮಾಯಾವತಿ - MP Ram Shiromani Verma expelled

ETV Bharat Logo

Copyright © 2024 Ushodaya Enterprises Pvt. Ltd., All Rights Reserved.