ETV Bharat / bharat

ಗುಂಪು ಸಾಲ ಪಡೆದು ಪತ್ನಿ ಪರಾರಿ?; ಮೂವರು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

author img

By ETV Bharat Karnataka Team

Published : Feb 17, 2024, 10:19 PM IST

Father Burns His Three Children Alive After Harassment From Loan Sharks, Attempts Suicide
ಮೂವರು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಮೂವರು ಮಕ್ಕಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ, ನಂತರ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ವರದಿಯಾಗಿದೆ.

ಕತಿಹಾರ್ (ಬಿಹಾರ): ತಂದೆಯೋರ್ವ ತನ್ನ ಮೂವರು ಮಕ್ಕಳನ್ನು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿ, ಬಳಿಕ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆರೋಪಿ ತಂದೆ ಗಂಭೀರವಾಗಿ ಸುಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಗುಂಪು ಸಾಲ ಪಡೆದು ಪರಾರಿಯಾದ ಕಾರಣ ಮನನೊಂದ ಈ ವ್ಯಕ್ತಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾನೆ ಎಂದೂ ವರದಿಯಾಗಿದೆ.

ಇಲ್ಲಿನ ಕಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಜಾಜಾ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಮೃತ ಮಕ್ಕಳು 8 ವರ್ಷದಿಂದ 12 ವರ್ಷ ವಯಸ್ಸಿನವರಾಗಿದ್ದು, ಅದರಲ್ಲಿ ಒಬ್ಬ ಬಾಲಕಿ ಸಹ ಸೇರಿದ್ದಾಳೆ. ಮತ್ತೊಂದೆಡೆ, ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಮೂವರು ಮಕ್ಕಳಿಗೆ ತಂದೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಬೆಂಕಿ ಹೊತ್ತಿಕೊಂಡ ತಕ್ಷಣ ಮೂವರು ಮಕ್ಕಳು ನೋವಿನಿಂದ ಒದ್ದಾಡತೊಡಗಿದ್ದರು. ಮಕ್ಕಳ ಚೀರಾಟ ಕೇಳಿದ ಸ್ಥಳೀಯ ಜನರು ಓಡಿ ಬಂದಿದ್ದಾರೆ. ಆದರೆ, ರಕ್ಷಿಸಲು ಸಾಧ್ಯವಾಗದೆ ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿದಿಲ್ಲ ಎಂದು ತಿಳಿದು ಬಂದಿದೆ.

ಗುಂಪು ಸಾಲ ಪಡೆದು ಪತ್ನಿ ಪರಾರಿ?: ಈ ವ್ಯಕ್ತಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬರಲು ಪತ್ನಿಯೇ ಕಾರಣ ಎಂದು ಹೇಳಲಾಗಿದೆ. ಗುಂಪು ಸಾಲ ಪಡೆದು ಪತ್ನಿ ಪರಾರಿಯಾಗಿದ್ದಾಳೆ. ಈ ಸಾಲದಿಂದ ಪತಿ ಮತ್ತು ಮಕ್ಕಳ ತೊಂದರೆಗೀಡಾದ್ದರು. ಗುಂಪು ಸಾಲ ನೀಡಿದವರು ಕಿರುಕುಳ ಕೊಡಲು ಆರಂಭಿಸಿದ್ದರು. ಮತ್ತೊಂದೆಡೆ, ಹೆಂಡತಿಯ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಈತ ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆgಎ ಯತ್ನಿಸಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗುಂಪು ಸಾಲದ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ಮಕ್ಕಳಿಗೆ ಬೆಂಕಿ ಹಚ್ಚಿ, ತಾನೂ ತಂದೆ ಬೆಂಕಿ ಹಚ್ಚಿಕೊಂಡಿರಬೇಕು. ಈ ಘಟನೆ ಬಗ್ಗೆ ವಿಷಯ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮದ ಮುಖಂಡ ದಿಲೀಪ್ ಸಾಹ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ; ಮನೆಯಲ್ಲೇ ಶವ ಹೂತು ಹಾಕಿದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.