ETV Bharat / bharat

ವಯನಾಡು ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಸಾಗಿದ ರಾಹುಲ್ ಗಾಂಧಿ ಚುನಾವಣಾ ಪ್ರಚಾರ

author img

By ETV Bharat Karnataka Team

Published : Mar 14, 2024, 7:08 PM IST

Congress Election campaign
ವಯನಾಡ್ ಕ್ಷೇತ್ರ

ಕೇರಳದ ವಯನಾಡು​ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ನಿಧಾನಗತಿಯಲ್ಲಿ ಸಾಗಿದೆ.

ವಯನಾಡು (ಕೇರಳ) : ವಯನಾಡು ಕ್ಷೇತ್ರದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್‌ನ ಚುನಾವಣಾ ಪ್ರಚಾರ ಸದ್ದಿಲ್ಲದೇ ಶುರುವಾಗಿದೆ. ವಯನಾಡ್‌ನಲ್ಲಿರುವ UDF ಜಿಲ್ಲಾ ಕಾಂಗ್ರೆಸ್‌ನ ಕೇಂದ್ರ ಕಚೇರಿಯಾದ ಡಿಸಿಸಿ ಕಚೇರಿಯಲ್ಲಿ ಅಂತಹ ಸಂಭ್ರಮವೇನೂ ಕಂಡು ಬರುತ್ತಿಲ್ಲ. ಕೇರಳದ ಇತರ ಪ್ರದೇಶಗಳಲ್ಲಿ ಚುನಾವಣಾ ಜ್ವರವೂ ಸಹ ಮಂದಗತಿಯಲ್ಲಿದೆ. ಕಲ್ಪೆಟ್ಟಾ ಪಟ್ಟಣದಿಂದ ವಯನಾಡು ಡಿಸಿಸಿ ಕಚೇರಿಯವರೆಗೆ ಯಾವುದೇ ಪಕ್ಷದ ಧ್ವಜಗಳು ಅಥವಾ ಪೋಸ್ಟರ್​ಗಳೇನು ಕಂಡುಬರುತ್ತಿಲ್ಲ.

ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹಾಲಿ ಕ್ಷೇತ್ರವಾದ ವಯನಾಡಿನಲ್ಲಿ ಕಂಡು ಬಂದ ಸದ್ಯದ ಸ್ಥಿತಿ. ಪ್ರತ್ಯೇಕ ಸ್ಥಳಗಳಲ್ಲಿ ರಾಹುಲ್ ಗಾಂಧಿ ಅವರ ಚಿತ್ರವಿರುವ ಬೋರ್ಡ್​ಗಳನ್ನು ಹಾಕಿರುವುದು ಬಿಟ್ಟರೆ ಪ್ರಚಾರದ ಬಿಸಿ ಯುಡಿಎಫ್ ಪಾಳಯಕ್ಕೆ ತಲುಪಿಲ್ಲ. ಡಿಸಿಸಿ ಕಚೇರಿಯ ಗೋಡೆಯ ಮೇಲೆ ‘ ರಾಹುಲ್ ವಯನಾಡು ಪ್ರೇಮ’ ಎಂದು ಬರೆದಿರುವ ಪೋಸ್ಟರ್​ಗಳಿವೆ. ಕಚೇರಿಯನ್ನು ಗುರುತಿಸಲು ರಾಜೀವ್ ಭವನ ಎಂದು ಬರೆದ ಬೋರ್ಡ್ ಮಾತ್ರ ಇದೆ. ಜಿಲ್ಲಾ ಕೇಂದ್ರವಾದ ರಾಜೀವ್ ಭವನದಲ್ಲಿ ಚುನಾವಣೆಯ ಲಕ್ಷಣಗಳು ಕಾಣುತ್ತಿಲ್ಲ.

ಈ ಬಗ್ಗೆ ಮಾತನಾಡಿರುವ ಕಾರ್ಯಕರ್ತರೊಬ್ಬರು, 'ಈಗಾಗಲೇ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಹಾಗೂ ದೇಶಾದ್ಯಂತ ಪ್ರಸಿದ್ಧರಾಗಿರುವವರಿಗೆ ಇದು ಸಾಕಲ್ಲವೇ? ನಮ್ಮ ಪ್ರತಿಸ್ಪರ್ಧಿಗಳಂತೆ ದೇಶಾದ್ಯಂತ ಇಷ್ಟೊಂದು ಪ್ರಚಾರ ಫಲಕಗಳು, ಪೋಸ್ಟರ್‌ಗಳು ಬೇಕೇ?. ವಯನಾಡಿನ ಜನರ ಹೃದಯದಲ್ಲಿ ರಾಹುಲ್​ ಇದ್ದಾರೆ ಎಂದರು.

ಇದೇ ಮಾರ್ಚ್ 16 ರಿಂದ ಕ್ಷೇತ್ರದ ಚುನಾವಣಾ ಸಮಾವೇಶ ಆರಂಭವಾಗುತ್ತಿದೆ. ಮಲಪ್ಪುರಂ ಜಿಲ್ಲೆಯ ಎರ್ನಾಡ್ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ. ಮರುದಿನದ ಸಮಾವೇಶ ವಂಡೂರಿನಲ್ಲಿ ಶುರುವಾಗಲಿದೆ. ಮುಂದಿನ ವಾರ ರಾಹುಲ್ ಗಾಂಧಿ ತಮ್ಮ ಸ್ವ ಕ್ಷೇತ್ರ ವಯನಾಡಿಗೆ ಆಗಮಿಸುವ ಸಾಧ್ಯತೆ ಇದೆ. ರಾಹುಲ್ ಆಗಮನದ ನಂತರ ಪ್ರಚಾರ ಚುರುಕುಗೊಳಿಸುವ ಸನ್ನಾಹದಲ್ಲಿ ಸ್ಥಳೀಯ ನಾಯಕರಿದ್ದಾರೆ.

ಈ ನಡುವ ರಾಹುಲ್ ಗಾಂಧಿ ಅವರ ಪ್ರಮುಖ ಪ್ರತಿಸ್ಪರ್ಧಿ ಅನಿರಾಜ ಈಗಾಗಲೇ ಎರಡು ಬಾರಿ ವಯನಾಡಿನ ವಿವಿಧ ಕೇಂದ್ರಗಳಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಎದುರಾಳಿ ಆಡಳಿತಾರೂಢ ಪಕ್ಷದ ಅಭ್ಯರ್ಥಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ವಯನಾಡು ಕ್ಷೇತ್ರಕ್ಕೆ ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಎನ್‌ಡಿಎ ತಮ್ಮ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ಘೋಷಿಸದಿದ್ದರೂ, ಎನ್‌ಡಿಎ ಘಟಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ರಾಮದಾಸ್ ಅಥಾವಾಲೆ) ವಯನಾಡ್‌ನಿಂದ ತಮ್ಮ ಅಭ್ಯರ್ಥಿಯನ್ನು ಘೋಷಿಸಿದೆ.

ಇದನ್ನೂ ಓದಿ : ಗುಜರಾತ್​ನಲ್ಲಿ ಸ್ವರಾಜ್ ಆಶ್ರಮಕ್ಕೆ ರಾಹುಲ್​ ಗಾಂಧಿ ಭೇಟಿ: ಸರ್ದಾರ್ ಪಟೇಲ್​ಗೆ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.