ETV Bharat / bharat

ಕೋಟಾದಲ್ಲಿ ಮತ್ತೊಬ್ಬ ನೀಟ್​ ವಿದ್ಯಾರ್ಥಿ ಆತ್ಮಹತ್ಯೆ: ನಾಲ್ಕು ತಿಂಗಳಲ್ಲಿ 8ನೇ ಪ್ರಕರಣ - student suicide in kota

author img

By ETV Bharat Karnataka Team

Published : Apr 30, 2024, 7:35 PM IST

ಕೋಟಾದಲ್ಲಿ ಮತ್ತೊಬ್ಬ ನೀಟ್​ ವಿದ್ಯಾರ್ಥಿ ಆತ್ಮಹತ್ಯೆ
ಕೋಟಾದಲ್ಲಿ ಮತ್ತೊಬ್ಬ ನೀಟ್​ ವಿದ್ಯಾರ್ಥಿ ಆತ್ಮಹತ್ಯೆ

ಕೋಟಾದಲ್ಲಿ ನೀಟ್​ ತರಬೇತಿ ಪಡೆಯುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಈ ವರ್ಷದಲ್ಲಿ ನಡೆದ 8ನೇ ಪ್ರಕರಣವಾಗಿದೆ.

ಕೋಟಾ (ರಾಜಸ್ಥಾನ): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್​) ಪರೀಕ್ಷೆ ತರಬೇತಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಏಪ್ರಿಲ್​ 29 ರಂದು ಹರಿಯಾಣದ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇಂದು (ಮಂಗಳವಾರ) ಮತ್ತೊಬ್ಬ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ಈ ವರ್ಷದ 8ನೇ ಸಾವಾಗಿದೆ.

ಇಲ್ಲಿನ ಧೋಲ್​ಪುರ್ ಜಿಲ್ಲೆಯ ದಿಂಡೋಲಿ ನಿವಾಸಿಯಾದ ಭರತ್​ ಸಾವಿಗೀಡಾದ ವಿದ್ಯಾರ್ಥಿ. ಕೋಟಾ ತರಬೇತಿ ಕೇಂದ್ರದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಕಳೆದ ಒಂದು ವರ್ಷದಿಂದ ಚಿಕ್ಕಪ್ಪ ಮತ್ತು ಸೋದರಳಿಯನ ಜೊತೆಗೆ ಪಿಜಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ.

ಇಂದು ಬೆಳಗ್ಗೆ 10:30ಕ್ಕೆ ಸೋದರಳಿಯ ರೋಹಿತ್ ಸಲೂನ್‌ಗೆ ತೆರಳಿದ್ದ. 11 ಗಂಟೆಗೆ ವಾಪಸ್ ಬಂದಾಗ ಭರತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾನೆ. ಕೋಣೆಯ ಬಾಗಿಲು ಮುಚ್ಚಿದ ಕಾರಣ ಹಿಂದಿನ ಬಾಗಿಲಿನಿಂದ ಪ್ರವೇಶಿಸಿದ್ದಾನೆ. ಬಳಿಕ ಪಿಜಿ ಮಾಲೀಕ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

''ಸಾವಿಗೀಡಾದ ಭರತ್ ನೀಟ್ ಪರೀಕ್ಷೆಯಲ್ಲಿ ಮೂರನೇ ಪ್ರಯತ್ನ ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಪರೀಕ್ಷೆಯಲ್ಲಿ ಅನುತೀರ್ಣ ಆಗಿದ್ದ. ಮೇ 5 ರಂದು ಪರೀಕ್ಷೆ ನಡೆಯಲಿತ್ತು. ಈ ಬಾರಿಯೂ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಯ ಕೊಠಡಿಯಲ್ಲಿ ಡೆತ್​ನೋಟ್​ ಕೂಡ ಪತ್ತೆಯಾಗಿದೆ ಎಂದು ಸಬ್​ಇನ್ಸ್‌ಪೆಕ್ಟರ್ ಗೋಪಾಲ್ ಲಾಲ್ ಬೈರ್ವಾ ತಿಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಕೋಟಾದಲ್ಲಿ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರ ಪೈಕಿ ಈ ವರ್ಷ ನಡೆದ ಎಂಟನೇ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಇದಾಗಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ: ಕೋಟಾದಲ್ಲಿ ನೀಟ್​ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ - NEET STUDENT SUICIDE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.