ರಸ್ತೆ ಬದಿ ನಿಂತವರಿಗೆ ಗುದ್ದಿಕೊಂಡು ಹೋದ ಕಾರು... ವಿಡಿಯೋ

By

Published : Aug 24, 2022, 7:53 PM IST

thumbnail

ಈರೋಡ್ (ತಮಿಳುನಾಡು): ರಸ್ತೆ ಬದಿ ಚಾಯ್​ ಕುಡಿಯಲೆಂದು ನಿಂತಿದ್ದ ಇಬ್ಬರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ತಮಿಳುನಾಡಿನ ಈರೋಡ್​ ಜಿಲ್ಲೆಯಲ್ಲಿ ನಡೆದಿದೆ. ಈ ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನ್ನಿಸುವಂತಿದೆ. ಇಲ್ಲಿನ ಜಂಬೈ ಪ್ರದೇಶದಲ್ಲಿ ಚಾಯ್​ ಅಂಗಡಿ ಮುಂದೆ ಬೈಕ್​ ಸಮೇತ ಇಬ್ಬರು ಯುವಕರು ನಿಂತಿದ್ದರು. ಈ ವೇಳೆ ನೋಡನೋಡುತ್ತಿದ್ದಂತೆ ವೇಗವಾಗಿ ಬಂದ ಕಾರು ಗುದ್ದಿಕೊಂಡು ಹೋಗಿದೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಕೂಡ ಗಾಳಿಯಲ್ಲಿ ತೂರಿಕೊಂಡು ಹೋಗಿ ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್​ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಮತ್ತೊಂದೆಡೆ ಸ್ಥಳೀಯರೇ ಕಾರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.