'ನಾವು ಶ್ರೇಷ್ಠತೆಯ ತುತ್ತತುದಿಯಲ್ಲಿದ್ದೇವೆ, ಕಾನ್​ ಫಿಲ್ಮ್​ ಫೆಸ್ಟಿವಲ್​​ ಭಾರತದಲ್ಲೂ ನಡೆಯುವ ದಿನ ಬರುತ್ತೆ': ದೀಪಿಕಾ

By

Published : May 18, 2022, 6:39 PM IST

thumbnail

ಮೇ 17ರಿಂದ 28ರವರೆಗೆ ಫ್ರಾನ್ಸ್​​​ನಲ್ಲಿ ಪ್ರತಿಷ್ಠಿತ ಕಾನ್​ ಫೆಸ್ಟಿವಲ್​ ನಡೆಯುತ್ತಿದ್ದು, ಇದರಲ್ಲಿ ತೀರ್ಪುಗಾರರಾಗಿ ಬಾಲಿವುಡ್​ ನಟಿ ದೀಪಿಕಾ ಪಡುಕೊಣೆ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿರುವ ನಟಿ, ಭಾರತವು ಶ್ರೇಷ್ಠತೆಯ ತುತ್ತತುದಿಯಲ್ಲಿದೆ. ಇದು ಕೇವಲ ಆರಂಭ. ಭಾರತ ಕೇನ್ಸ್​​ನಲ್ಲಿ ಇರಬೇಕಾಗಿಲ್ಲ, ಮುಂದೊಂದು ದಿನ ಕಾನ್​​​​ ಭಾರತಕ್ಕೆ ಬರಲಿದೆ. ನಮ್ಮಲ್ಲೂ ಕಾನ್​​ ಫಿಲ್ಮ್​ ಫೆಸ್ಟಿವಲ್​ ನಡೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸಂಗೀತಗಾರ ಎ.ಆರ್ ರೆಹಮಾನ್, ನಟಿ ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ,ಆರ್​. ಮಾಧವನ್, ಹೀನಾ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.