ಹೆಚ್ಚಿದ ಧಗೆ: ಹೊರಗೆ ಬರುತ್ತಿರುವ ಹಾವುಗಳು, ಒಂದೇ ದಿನ 12 ಹಾವು ಹಿಡಿದ ತುಮಕೂರು ಉರಗ ತಜ್ಞ - 12 snakes rescue

By ETV Bharat Karnataka Team

Published : May 10, 2024, 4:48 PM IST

thumbnail
ಒಂದೇ ದಿನ 12 ಹಾವು ಹಿಡಿದ ತುಮಕೂರು ಉರಗ ತಜ್ಞ (ETV Bharat)

ತುಮಕೂರು: ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನದಿಂದ ಪಾರಾಗಲು ನಾಗರ ಹಾವುಗಳು ಮನೆಗಳ ಬಳಿ ಬಂದು ಅವಿತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹೌದು, ಬಿಸಿಲ ಬೇಗೆಗೆ ತುಮಕೂರಿನ ಹಲವೆಡೆ  ಹಾವುಗಳು ಮನೆಯನ್ನೇ ತಮ್ಮ ವಾಸಸ್ಥಾನಗಳನ್ನಾಗಿ ಮಾಡಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನು ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಅವರು ಒಂದೇ ದಿನ 12 ಹಾವುಗಳನ್ನು ರಕ್ಷಣೆ ಮಾಡಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ತುಮಕೂರು ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಮಾಯರಂಗಯ್ಯ ಎಂಬುವವರ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರ್ ಒಳಗಡೆ ನಾಗರಹಾವು ಸೇರಿಕೊಂಡಿತ್ತು. ಹಾವನ್ನು ಕಂಡು ಭಯಬೀತರಾದ ಮಾಯರಂಗಯ್ಯನವರು ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಊರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ದಿಲೀಪ್ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಒಳಗೆ ಸೇರಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಬಿಸಿಲಿನ ತಾಪ  ಜಾಸ್ತಿ ಇರುವುದರಿಂದ ಅವುಗಳು ತಂಪಾದ ಜಾಗ ಅರಸಿ ಬರುತ್ತವೆ. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಬೇಕಿದೆ. ಆಗ ಹಾವುಗಳು ಬಂದು ಸೇರಿಕೊಳ್ಳುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ಉರಗ ತಜ್ಞರು.

ಇದನ್ನೂ ಓದಿ: ಕೋಳಿಗಳನ್ನು ಸಾಯಿಸಿ ಮೊಟ್ಟೆ ನುಂಗಿ ಹಾಯಾಗಿ ಮಲಗಿದ್ದ ನಾಗರಹಾವು ಸೆರೆ - Snake Captured

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.