'ಟೀ ಶರ್ಟ್​' ವಿಚಾರಕ್ಕೆ ಮೆಟ್ರೋದಲ್ಲಿ ಯುವಕ - ಯುವತಿ ಫೈಟ್​... ವಿಡಿಯೋ

By

Published : Jul 15, 2022, 9:52 PM IST

Updated : Jul 16, 2022, 1:37 PM IST

thumbnail

ನವದೆಹಲಿ: ಟೀ ಶರ್ಟ್​​ ವಿಚಾರಕ್ಕಾಗಿ ಯುವಕ - ಯುವತಿ ಮೆಟ್ರೋ ರೈಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅದರ ವಿಡಿಯೋ ಸದ್ಯ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಜನರು ಇದರ ವೀಕ್ಷಣೆ ಮಾಡಿದ್ದಾರೆ. ಇತರರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಜಗಳ ನಡೆದಿದ್ದು, ಇತರ ಪ್ರಯಾಣಿಕರು ಉಚಿತ ಮನರಂಜನೆ ಪಡೆದುಕೊಂಡಿದ್ದಾರೆ. ಯುವಕನ ಮೇಲೆ ರೇಗಾಡಿರುವ ಯುವತಿ ಆತನ ಕಪಾಳಕ್ಕೆ ಹೊಡೆದಿದ್ದಾಳೆ. ಇದರ ಬೆನ್ನಲ್ಲೇ ವಾಗ್ವಾದಕ್ಕಿಳಿದಿರುವ ಯುವಕ ಸಹ ಯುವತಿಗೆ ಬಾರಿಸಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಲವರ್​ ಎಂದು ಹೇಳಲಾಗ್ತಿದ್ದು, ಟೀ ಶರ್ಟ್ ಖರೀದಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ ಎನ್ನಲಾಗಿದೆ.

Last Updated : Jul 16, 2022, 1:37 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.