ಲಸಿಕೆ ಅಭಿಯಾನಕ್ಕೆ ಸಂಭ್ರಮಾಚರಣೆ.. ಈಡುಗಾಯಿ ಒಡೆದು ಸಿಹಿ ವಿತರಣೆ

By

Published : Jan 16, 2021, 2:40 PM IST

thumbnail

ಚಾಮರಾಜನಗರ: ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಆರಂಭವಾದ ಹಿನ್ನೆಲೆಯಲ್ಲಿ ನಗರದಲ್ಲಿಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಚಾಮರಾಜೇಶ್ವರ ದೇಗುಲ ಮುಂಭಾಗ ಚಾ.ರಂ.ಶ್ರೀನಿವಾಸಗೌಡ, ಗೋವಿಂದರಾಜು ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿ ಕೊರೊನಾ ವಾರಿಯರ್ಸ್​ಗಳಿಗೆ, ವಿಜ್ಞಾನಿಗಳಿಗೆ ಜಯ ಘೋಷಣೆ ಕೂಗಿ ಈಡುಗಾಯಿ ಒಡೆದರು. ‌ಬಳಿಕ ಪೊಲೀಸರಿಗೆ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಲಸಿಕೆ ಪಡೆದವರಿಗೆ ಒಳ್ಳೆಯದಾಗಲಿ ಹಾಗೂ ಮಹಾಮಾರಿ ಶೀಘ್ರ ತೊಲಗಲಿ ಎಂದು ಹಾರೈಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.