ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಭದ್ರೆಯ ಅಬ್ಬರ.. ಕ್ಷಣಮಾತ್ರದಲ್ಲಿ ಕೊಚ್ಚಿ ಹೋದ ರಸ್ತೆ-ವಿಡಿಯೋ

By

Published : Aug 10, 2019, 12:45 PM IST

thumbnail

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರೆಯ ಭೀಕರತೆ ಹೆಚ್ಚುತ್ತಲೇ ಇದೆ. ಭದ್ರಾ ನದಿಯ ನೀರು ಹೆಚ್ಚಳದಿಂದ ಹೊರನಾಡನ್ನು ಸಂಪರ್ಕಿಸುವ ಮಾರ್ಗ ಬಂದ್ ಆಗಿದ್ದು, ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯವಾಗಿದೆ. ಭದ್ರೆಯ ಉಪ ನದಿಯ ಆರ್ಭಟಕ್ಕೆ ನೋಡ ನೋಡುತ್ತಿದ್ದಂತೆಯೇ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಈ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಇತ್ತ ಮೂಡಿಗೆರೆಯ ಬಾಳೂರು ಬಳಿಯ ಮಲೆಮನೆ ಗ್ರಾಮದಲ್ಲಿ ಪ್ರವಾಹದಲ್ಲಿ 9 ಜನರು ಸಿಲುಕಿಕೊಂಡಿದ್ದು, ಗ್ರಾಮ ಸಂಪರ್ಕ ಕಳೆದುಕೊಂಡಿದೆ. ಈಗಾಗಾಲೇ ಹತ್ತಾರು ಮನೆಗಳು ಕುಸಿದು ಬಿದ್ದಿದ್ದು, ಭಯದಿಂದ ಒಂದೇ ಮನೆಯಲ್ಲಿ ಎಲ್ಲಾ ಜನರು ಕುಳಿತುಕೊಂಡಿದ್ದಾರೆ. ರಕ್ಷಣೆಗಾಗಿ ಅಧಿಕಾರಿಗಳಿಗೆ ಜನರು ಕರೆ ಮಾಡುತ್ತಿದ್ದಾರೆ. ಆದರೆ, ಸಂಪರ್ಕ ಮಾತ್ರ ಸಾಧ್ಯವಾಗುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.