ಸೋಂಕಿನ ಲಕ್ಷಣ ಕಂಡ ಕೂಡ್ಲೇ ಆಸ್ಪತ್ರೆಗೆ ದಾಖಲಾಗಲು ಡಿಸಿ ಸಲಹೆ

By

Published : Sep 9, 2020, 8:14 PM IST

thumbnail

ಸೊಂಕಿನ ಲಕ್ಷಣ ಕಂಡು ಬಂದ ತಕ್ಷಣವೇ ಹತ್ತಿರದ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿ. ರೋಗ ಉಲ್ಬಣವಾಗುವ ತನಕ ಕಾಯಬೇಡಿ ಎಂದು ಉಡುಪಿ‌ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಕೆಲ ರೋಗ ಲಕ್ಷಣಗಳು ಕಂಡ ನಂತರ ಸ್ವತಃ ಮಾತ್ರೆ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದರಿಂದ ರೋಗ ಉಲ್ಬಣವಾಗುತ್ತದೆ. ಐಸಿಯುನಲ್ಲಿ ಚಿಕಿತ್ಸೆ ನೀಡುವ ಹಂತದವರೆಗೆ ಕಾಯಬೇಡಿ. ಜಿಲ್ಲೆಯಲ್ಲಿ ಐಸಿಯು ಭರ್ತಿಯಾಗಿದೆ. ಐಸಿಯು ಸೌಲಭ್ಯಗಳನ್ನು ಜಿಲ್ಲಾಡಳಿತ ಹೆಚ್ಚಿಸಬಹುದು. ಆದರೆ, ಅದಕ್ಕೆ ಬೇಕಾದ ಸಿಬ್ಬಂದಿ ತತ್ ಕ್ಷಣಕ್ಕೆ ಹೊಂದಿಸುವುದು ಕಷ್ಟ ಸಾಧ್ಯ. ಉಡುಪಿಯಲ್ಲಿ ಕೋವಿಡ್ ತಪಾಸಣೆ, ಚಿಕಿತ್ಸೆ‌ ಎಲ್ಲವೂ ಉಚಿತವಾಗಿದೆ. ಶೀಘ್ರ ತಪಾಸಣೆಗೊಳಗಾಗಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.