ಚಾಮರಾಜನಗರ: ಕಬ್ಬಿನ ಲಾರಿ ಎಂದು ಬಸ್​ ಅಡ್ಡಹಾಕಿದ ಗಜರಾಜ- ವಿಡಿಯೋ

By ETV Bharat Karnataka Team

Published : Sep 13, 2023, 2:29 PM IST

thumbnail

ಚಾಮರಾಜನಗರ : ಕಬ್ಬು ತುಂಬಿದ ಲಾರಿ ಎಂದು ಸಾರಿಗೆ ಸಂಸ್ಥೆಯ ಬಸ್ ಅನ್ನು ಗಜರಾಜ ಅಡ್ಡ ಹಾಕಿದ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಅಸನೂರಲ್ಲಿ ನಡೆದಿದೆ‌. ಈ ಹೆದ್ದಾರಿಯಲ್ಲಿ ಕಬ್ಬು ತುಂಬಿದ ಲಾರಿಗಳು ಸರ್ವೆ ಸಾಮಾನ್ಯವಾಗಿ ಸಂಚರಿಸುವುದರಿಂದ ಲಾರಿ ಎಂದು ಬಸ್​ಗೆ ಅಡ್ಡಹಾಕಿದೆ. ಬಳಿಕ ಕಬ್ಬಿಗಾಗಿ ಆನೆ ಹುಡುಕಾಡಿದ್ದು, ಏನೂ ಸಿಗದ ಹಿನ್ನೆಲೆಯಲ್ಲಿ ಪಕ್ಕಕ್ಕೆ ಸರಿದು ಬಸ್ ಮುಂದಕ್ಕೆ ತೆರಳಲು ಅನುವು ಮಾಡಿಕೊಟ್ಟಿದೆ.  

ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಷ್ಟೇ ಅಲ್ಲದೆ, ಹೆದ್ದಾರಿಯಲ್ಲಿ ಗಜರಾಜ ಅಡ್ಡ ನಿಂತ ಪರಿಣಾಮ ಅರ್ಧ ಗಂಟೆ ಟ್ರಾಫಿಕ್ ಜಾಮ್​ ಉಂಟಾಗಿ, ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.

ಇನ್ನು ಕಳೆದ ಆಗಸ್ಟ್​ ತಿಂಗಳಲ್ಲಿ ಕೇರಳದಲ್ಲಿ ಕರ್ನಾಟಕದ ಯುವಕರಿಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ವಯನಾಡ್ ವನ್ಯಜೀವಿ ಅಭಯಾರಣ್ಯದ ಮುತಂಗ - ಬಂಡಿಪುರ ಪ್ರದೇಶದಲ್ಲಿ ಘಟನೆ ನಡೆದಿತ್ತು. ಯುವಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೈಕ್​ ಬಿಟ್ಟು ಓಡಿ ಹೋಗಿದ್ದು, ಈ ಕುರಿತಾದ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ : ಯುವಕರ ಬೈಕ್​ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.